ಡಿ.25: ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರ “ಆಯುರ್ವೇದ – ಆಶಾವಾದ” ಕೃತಿ ಲೋಕಾರ್ಪಣೆ

Upayuktha
0



ಪುತ್ತೂರು: ಡಿಸೆಂಬರ್ 25ರಂದು (ಗುರುವಾರ) ಸಂಜೆ 4.30 ಗಂಟೆಗೆ ನರಿಮೊಗರು ಗ್ರಾಮ ಪಂಚಾಯತ್ ಸಮೀಪದ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಯೋಗ ಹಾಲ್‌ನಲ್ಲಿ ಖ್ಯಾತ ಆಯುರ್ವೇದ ತಜ್ಞ ವೈದ್ಯ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರು ರಚಿಸಿರುವ “ಆಯುರ್ವೇದ – ಆಶಾವಾದ” ಕೃತಿಯ ಲೋಕಾರ್ಪಣಾ ಸಮಾರಂಭವು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ನಡೆಯಲಿದೆ.


ಕಾರ್ಯಕ್ರಮದಲ್ಲಿ ಶ್ರೀಮತಿ ಕಾಂಚನಮಾಲಾ (ಸಿಂದೂರ ಮನೆ) ದೀಪ ಪ್ರಜ್ವಲನೆಯನ್ನು ನೆರವೇರಿಸಲಿದ್ದು, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಉಮೇಶ್ ನಾಯಕ್ ಅವರು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಅವಿನಾಶ್ ಕೊಡೆಂಕಿರಿ (ಸರಸ್ವತಿ ವಿದ್ಯಾಸಂಸ್ಥೆ, ನರಿಮೊಗರು), ಕೆ. ಪದ್ಮನಾಭ ಪ್ರಭು ಬೀರ್ನಹಿತ್ಲು (ಅಧ್ಯಕ್ಷರು, ಶ್ರೀ ಗುರು ಪೂರ್ಣಾನಂದ ಭಜನಾ ಮಂದಿರ, ಪುರುಷರಕಟ್ಟೆ) ಹಾಗೂ ನಿವೃತ್ತ ಯೋಧ ಶ್ರೀ ವಳಲಂಬೆ ಗಣಪಯ್ಯ ಭಟ್ ಕುಕ್ಕುಜೆ ಅವರು ಗೌರವ ಉಪಸ್ಥಿತರಾಗಿರುತ್ತಾರೆ.


ಕೃತಿಯ ಲೋಕಾರ್ಪಣೆಯನ್ನು ಡಾ. ಸೀತಾರಾಮ ಭಟ್ ಕಲ್ಲಮ (ವೈದ್ಯರು, ರೋಟರಿ ಬ್ಲಡ್ ಬ್ಯಾಂಕ್ ಮೆಡಿಕಲ್ ಆಫೀಸರ್ ಹಾಗೂ ಆಡಳಿತ ವ್ಯವಸ್ಥಾಪಕರು, ಶ್ರೀ ಗುರು ರಾಘವೇಂದ್ರ ಮಠ, ಕಲ್ಲಮ) ಅವರು ನೆರವೇರಿಸಲಿದ್ದಾರೆ.


ಕೃತಿಕಾರ ಹಾಗೂ ಅತಿಥಿಗಳ ಪರಿಚಯವನ್ನು ಆರ್ಟ್ ಆಫ್ ಲಿವಿಂಗ್ ತರಬೇತುದಾರರಾದ ಶ್ರೀಮತಿ ಶರಾವತಿ ರವಿನಾರಾಯಣ ನೀಡಲಿದ್ದು, ಕು. ಸುದೀಕ್ಷಾ ಮತ್ತು ಕು. ಸುನಿಧಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಸ್ವಾಗತ ಭಾಷಣವನ್ನು ನಾರಾಯಣ ಬನ್ನಿಂತಾಯ (ನರಿಮೊಗರು) ನೀಡಲಿದ್ದು, ಪ್ರಾಸ್ತಾವಿಕ ನುಡಿಯನ್ನು ಕೃತಿಕಾರರಾದ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರು ಆಡಲಿದ್ದಾರೆ. ವಂದನಾರ್ಪಣೆಯನ್ನು ಡಾ. ಶ್ರುತಿ ಎಂ.ಎಸ್. ನೆರವೇರಿಸಲಿದ್ದು, ಕಾರ್ಯಕ್ರಮ ನಿರೂಪಣೆಯನ್ನು ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರಾದ ತಾರಾನಾಥ್ ಸವಣೂರು (ಮುಖ್ಯ ಗುರುಗಳು, ಪಿ.ಎಂ. ಶ್ರೀ ಶಾಲೆ, ವೀರಮಂಗಲ) ನಿರ್ವಹಿಸಲಿದ್ದಾರೆ.


ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9740545979 ಅನ್ನು ಸಂಪರ್ಕಿಸುವಂತೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top