ಈಗಿರುವ ನೋಟಿನಲ್ಲಿ ಗಾಂಧಿ ಚಿತ್ರ ತೆಗೆಯುವುದು ಸಾಧ್ಯ ಇಲ್ಲ ಅಂತ ಕೆಲವರು ಗಟ್ಟಿ ಧ್ವನಿ ಹಾಕ್ತಾ ಇದ್ದಾರೆ. ನೋಟಿನಲ್ಲಿ ಗಾಂಧಿ ಫೋಟೋ ತೆಗೆಯಬೇಕು ಅಂತ ಯಾರೂ ಹೇಳಿಲ್ಲ. ಬಹುಶಃ ಹೇಳುವುದೂ ಇಲ್ಲ. ಆದರೂ ಗಟ್ಟಿ ಧ್ವನಿ ಯಾಕೆ ಅಂತ ಗೊತ್ತಾಗ್ತಾ ಇಲ್ಲ!!?
ನೋಟಿನಲ್ಲಿ ಗಾಂಧಿ ಫೋಟೋ ತೆಗೆಯುವ ಬಗ್ಗೆ ಯಾರಾದರು ಮಾತಾಡಿದಾರಾ!? ವಿಷಯ ಅದಲ್ಲ, ಇನ್ನು ಕೆಲವು ವರ್ಷಗಳಲ್ಲಿ ಕರೆನ್ಸಿ ನೋಟುಗಳೇ ಇರೋದಿಲ್ಲ ಅನಿಸುತ್ತೆ ಅಲ್ವಾ!? ಹಣದ ವ್ಯವಹಾರದಲ್ಲಿ 90% ಗಿಂತ ಹೆಚ್ಚು ಡಿಜಿಟಲ್ ಪೇಮೆಂಟ್ ಆಗಿದೆ ಅಂತ ಗೂಗಲ್ ಹೇಳ್ತಾ ಇದೆ.
ವ್ರತ, ಪೂಜೆ, ಶ್ರಾದ್ಧ ಕರ್ಮಾದಿಗಳಿಗೆ ಮಾತ್ರ ಕ್ಯಾಶ್. ಅದೂ ಕಾರ್ಯ ಮಧ್ಯದ ದಕ್ಷಿಣೆ, ದಾನಾದಿಗಳಿಗೆ ಬಳಸಲು ನಾಣ್ಯಗಳು. ಉಳಿದಂತೆ ನಂತರ UPI.
ಈಗಿನ ಜೆನ್ ಜನರೇಷನ್‌ರವರು ವ್ಯವಹಾರಕ್ಕೆ UPI ಮಾತ್ರ ಬಳಸ್ತಾ ಇದ್ದಾರೆ. ಬೆಂಗಳೂರಿನಲ್ಲಿರುವವರು ಒಬ್ಬರು ಹೇಳಿದ್ದು "ಕ್ಯಾಶ್ ಡ್ರಾ ಮಾಡದೆ ಕೆಲವು ತಿಂಗಳಾಯ್ತು. ಕುಡಿಯುವ 20 ಲೀಟರ್‌ನ RO ನೀರು ತರಲು ಐದು ರುಪಾಯಿ ಕಾಯಿನ್ ಬಳಸುವುದು ಬಿಟ್ರೆ, ನೋ ಕ್ಯಾಶ್" ಅಂತ!
ಹೊಸ ATMಗಳು ಕೂಡ ಬರ್ತಾ ಇಲ್ಲ! ಇರೋ ATM ಗಳೂ ಸದ್ಯದಲ್ಲೇ ಸರಕಾರಿ ಶಾಲೆಗಳಂತೆ ನಿಧಾನವಾಗಿ ಬಾಗಿಲು ಹಾಕಬಹುದು! ನೋಟಿನಲ್ಲಿ ಗಾಂಧಿ ಚಿತ್ರ ತೆಗೆಯುವ ವಿಚಾರದ ಚರ್ಚೆ ಮುಗಿಯುವ ಮೊದಲೇ ವ್ಯವಸ್ಥೆಯಲ್ಲಿ ಕರೆನ್ಸಿ ನೋಟ್‌ಗಳೇ ಇರೋದಿಲ್ಲ ಅನಿಸುತ್ತೆ. ಎಲ್ಲರಿಗೂ ಹಣ ಬೇಕು, ಯಾರಿಗೂ ಕ್ಯಾಶ್ ಬೇಡ!
***
ನೋಟಿನಲ್ಲಿ ಗಾಂಧಿಯನ್ನು ತೆಗೆಯುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ, ಗಾಂಧಿ ಹೇಳಿದ ಮೌಲ್ಯಗಳನ್ನು ಉಳಿಸಿದ್ದೀವಾ!? 100% ಉಳಿಸಿಲ್ಲ!
ಗಾಂಧಿ ಹೇಳಿದ ತತ್ವಗಳನ್ನು ಸರ್ವ ನಾಶ ಮಾಡಲಾಗಿದೆ. ಗಾಂಧಿ ಮಾರ್ಗದಲ್ಲಿ ಶರಾಬು ಅಂಗಡಿ ತೆಗೆದು ವ್ಯಂಗ್ಯ ಮಾಡಲಾಗಿದೆ!!!
ಗಾಂಧಿ ಹೇಳಿದ ಮೌಲ್ಯವನ್ನು ಅನುಸರಿಸುವುದಾದರೆ, ಕೊನೇ ಪಕ್ಷ ಬೆಂಗಳೂರಿನ ಗಾಂಧಿ ಪ್ರತಿಮೆ ಇರುವ ಸ್ಥಳ, ಮಹಾತ್ಮ ಗಾಂಧಿ ರಸ್ತೆ, ಕಸ್ತೂರ್ಬಾ ರಸ್ತೆಗಳಲ್ಲಿ ನಾಡಿದ್ದು 31 ರ ರಾತ್ರಿ ಮದ್ಯದ ಹೊಳೆ ಹರಿಯುವುದನ್ನು ಸರಕಾರ ಅಥವಾ ಯಾರಾದರು (?) ನಿಲ್ಲಿಸಲಿ.
ಡಿಸೆಂಬರ್ 31ಕ್ಕೆ ಅತಿ ಹೆಚ್ಚು ಮದ್ಯ ಸಮಾರಾಧನೆ ನೆಡೆಯುವುದು ರಾಜಧಾನಿಯ ಮಹಾತ್ಮಾ ಗಾಂಧಿ ರಸ್ತೆಯಲ್ಲಿ!!
ಅವತ್ತು ಅಲ್ಲಿ ಕುಡಿದು ಬಿದ್ದವರಿಗೆ ಶುಶ್ರೂಷೆ ಮಾಡಲು ಪ್ರಥಮ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗುತ್ತೆ! ಅಷ್ಟರ ಮಟ್ಟಿಗೆ ಅಲ್ಲಿ ಡಿಸೆಂಬರ್ 31ಕ್ಕೆ ಮದಿರೆ ಹರಿಯುತ್ತದೆ! ನಾಗರಿಕ ಮಹಿಳೆಯರು 'ಮಧ್ಯ'ರಾತ್ರಿಯಲ್ಲಿ ಆ ರಾಜ ಬೀದಿಯಲ್ಲಿ ತೂರಾಡಿ ನಡೆಯುತ್ತಾರೆ! ಬಟ್ಟೆ ಗಾಂಧಿ ಧರಿಸಿದ್ದಕ್ಕಿಂತ ಸ್ವಲ್ಪ ಕಡಿಮೆ ಇರುತ್ತೆ! ಗಾಂಧೀಜಿಯ ಆತ್ಮಕ್ಕೆ ಶಾಂತಿ ಸಿಕ್ಕಿರುವ ಸಾಧ್ಯತೆ ಅವತ್ತು MG ರೋಡ್ ನೋಡಿದರೆ ಅನುಮಾನ ಬರುತ್ತೆ!?
ಗಾಂಧಿಯನ್ನು ಕೊಂದಿದ್ದು ಯಾರೋ ಗೊತ್ತಿಲ್ಲ! ಆದರೆ, ಗಾಂಧಿ ಹೇಳಿದ ಮೌಲ್ಯಗಳ ಕತ್ತನ್ನು ಹಿಸುಕಿ ಕೊಂದಿದ್ದು ಯಾವ ಯಾವ ಕೈಗಳು ಅಂತ ಎಲ್ಲರಿಗೂ ಗೊತ್ತಿದೆ!
ಗಾಂಧಿ ಫೋಟೋದ ನೋಟು, ಗಾಂಧಿ 'ಹೇಳಿದ' ಮೌಲ್ಯ ಎರಡೂ ಇನ್ಮುಂದೆ ವಸ್ತು ಸಂಗ್ರಹಾಲಯದಲ್ಲಿ ಮಾತ್ರ!
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


