ಪುತ್ತೂರು: ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ ಪ್ರಕಾಶನದಲ್ಲಿ ಪ್ರಕಟವಾದ ಖ್ಯಾತ ಆಯುರ್ವೇದ ತಜ್ಞ ವೈದ್ಯ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರ “ಆಯುರ್ವೇದ–ಆಶಾವಾದ” ಕೃತಿಯ ಲೋಕಾರ್ಪಣಾ ಸಮಾರಂಭವು ಡಿಸೆಂಬರ್ 25ರಂದು ಗುರುವಾರ ಸಂಜೆ 4.30ಕ್ಕೆ ನರಿಮೊಗರು ಗ್ರಾಮ ಪಂಚಾಯತ್ ಸಮೀಪದ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಯೋಗ ಹಾಲ್‌ನಲ್ಲಿ ನಡೆಯಿತು. ಸಮಾರಂಭವನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ದೀಪಪ್ರಜ್ವಲನೆಯನ್ನು ಶ್ರೀಮತಿ ಕಾಂಚನಮಾಲಾ (ಸಿಂದೂರ ಮನೆ) ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ್ ನಾಯಕ್ ವಹಿಸಿಕೊಂಡು ಮಾತನಾಡಿ, ಡಾ. ಬಂಗಾರಡ್ಕ ಅವರ ಈ ಕೃತಿ ಕನ್ನಡ ಸಾಹಿತ್ಯ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಅತ್ಯಮೂಲ್ಯ ಕೊಡುಗೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸರಸ್ವತಿ ವಿದ್ಯಾಸಂಸ್ಥೆ, ನರಿಮೊಗರು ಸಂಸ್ಥೆಯ ಅವಿನಾಶ್ ಕೊಡೆಂಕಿರಿ, “ಡಾ. ಬಂಗಾರಡ್ಕ ಅವರ ವೈದ್ಯಕೀಯ ಕೌಶಲ್ಯ, ಬರಹ ಮತ್ತು ವಾಗ್ಮಿತೆ ಅಪರೂಪದ ಸಂಯೋಜನೆಯಾಗಿದೆ” ಎಂದು ಪ್ರಶಂಸಿಸಿದರು. ಕೆ. ಪದ್ಮನಾಭ ಪ್ರಭು ಬೀರ್ನಹಿತ್ಲು (ಅಧ್ಯಕ್ಷರು, ಶ್ರೀ ಗುರು ಪೂರ್ಣಾನಂದ ಭಜನಾ ಮಂದಿರ, ಪುರುಷರಕಟ್ಟೆ) ಹಾಗೂ ನಿವೃತ್ತ ದೈಹಿಕ ಶಿಕ್ಷಕ ಶ್ರೀನಿವಾಸ್ ಹೆಚ್.ಬಿ. ಶುಭನುಡಿಗಳನ್ನಾಡಿದರು.
ಕೃತಿ ಲೋಕಾರ್ಪಣೆ ಮಾಡಿದ ಡಾ. ಸೀತಾರಾಮ ಭಟ್ ಕಲ್ಲಮ ವೈದ್ಯರು (ಮೆಡಿಕಲ್ ಆಫೀಸರ್ ಮತ್ತು ಆಡಳಿತ ವ್ಯವಸ್ಥಾಪಕರು, ರೋಟರಿ ಬ್ಲಡ್ ಬ್ಯಾಂಕ್, ಶ್ರೀ ಗುರು ರಾಘವೇಂದ್ರ ಮಠ, ಕಲ್ಲಮ) ಮಾತನಾಡಿ, “ಮಕ್ಕಳು, ಮಹಿಳೆಯರು ಹಾಗೂ ವೃದ್ಧರಲ್ಲಿ ಕಂಡುಬರುವ ವಿವಿಧ ಕಾಯಿಲೆಗಳು, ಆಯುರ್ವೇದ ಚಿಕಿತ್ಸಾ ಪರಿಹಾರಗಳು ಮತ್ತು ಆರೋಗ್ಯ ಕ್ಷೇತ್ರದ ಪ್ರಚಲಿತ ವಿಚಾರಗಳನ್ನು ವಿವರಿಸುವ ಮಹತ್ವದ ಕೃತಿ ಇದಾಗಿದೆ” ಎಂದರು.
ಕೃತಿಕಾರ ಹಾಗೂ ಅತಿಥಿಗಳ ಪರಿಚಯವನ್ನು ಶ್ರೀಮತಿ ಶರಾವತಿ ರವಿನಾರಾಯಣ (ಆರ್ಟ್ ಆಫ್ ಲಿವಿಂಗ್ ತರಬೇತುದಾರರು) ನಡೆಸಿಕೊಟ್ಟರು. ಪ್ರಾರ್ಥನೆಯನ್ನು ಕು. ಸುದಿಕ್ಷ ಮತ್ತು ಕು. ಸುನಿಧಿ ಸಲ್ಲಿಸಿದರು. ಸ್ವಾಗತ ಭಾಷಣವನ್ನು ಶ್ರೀ ನಾರಾಯಣ ಬನ್ನಿಂತಾಯ (ನರಿಮೊಗರು) ಮಾಡಿದರು.
ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ತಮ್ಮ ಪ್ರಾಸ್ತಾವಿಕದಲ್ಲಿ, “ಹೊರಗಿನ ಆರೋಗ್ಯವು ಒಳಗಿನ ಸ್ಥಿತಿಯನ್ನು ಅವಲಂಬಿಸಿದೆ. ಹೊರಗಿನ ಸಂಗತಿಗಳ ಮೇಲೆ ನಮ್ಮ ನಿಯಂತ್ರಣ ಇಲ್ಲದಿದ್ದರೂ ಒಳಗಿನ ವಿಷಯಗಳ ಮೇಲೆ ಹಿಡಿತ ಸಾಧಿಸಬಹುದು. ಪ್ರಸಾದಿನೀ ಆಯುರ್ನಿಕೇತನ ಆಸ್ಪತ್ರೆ ಆಯುರ್ವೇದ ಚಿಕಿತ್ಸೆಯಲ್ಲಿ ವಿವಿಧ ಆಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಂಡಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧ ವಳಲಂಬೆ ಗಣಪಯ್ಯ ಭಟ್ (ಕುಕ್ಕುಜೆ) ಅವರನ್ನು ಸನ್ಮಾನಿಸಲಾಯಿತು. ವಂದನಾರ್ಪಣೆಯನ್ನು ಡಾ. ಶ್ರುತಿ ಎಂ.ಎಸ್. ನೆರವೇರಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರಾದ ಶ್ರೀ ತಾರಾನಾಥ್ ಸವಣೂರು (ಮುಖ್ಯ ಗುರುಗಳು, ಪಿಎಂಶ್ರೀ ಶಾಲೆ, ವೀರಮಂಗಲ) ನಡೆಸಿಕೊಟ್ಟರು.
ಶ್ರೀಶ್, ಪ್ರದೀಪ ಕೃಷ್ಣ ಬಂಗಾರಡ್ಕ, ಸುಲೋಚನಾ ಪಿ.ಕೆ., ಟಿ.ಎಸ್. ಆಚಾರ್ ಹಾಗೂ ಮುಖ್ಯ ಜೀವವಿಮಾ ಸಲಹೆಗಾರ ಎಂ.ಎಸ್. ಭಟ್ ಅತಿಥಿಗಳಿಗೆ ಹೂಗುಚ್ಛ ನೀಡಿ ಗೌರವಿಸಿದರು. ಉತ್ತಮ ಕೃಷಿಕ ಪ್ರಶಸ್ತಿ ವಿಜೇತ ಎಕ್ಕಡ್ಕ ಗಣಪತಿ ಭಟ್, ಸಂಗೀತಗಾರರಾದ ದತ್ತಾತ್ರೇಯ ರಾವ್, ಕುಟ್ಟಿಗದ್ದೆ ಜನಾರ್ದನ ಜೋಯಿಸ್, ಗೋಪಾಲಕೃಷ್ಣ ಭಟ್ ಕುರಿಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


