ಮಂಗಲ ಪಾಂಡೆಯವರ ಬಂದೂಕು, ಪಾನಿಪತ್ ಯುದ್ಧದ ತೋಪು ಪ್ರಥಮ ಬಾರಿಗೆ ದೆಹಲಿಯಲ್ಲಿ...
ದುರ್ಲಭ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಮತ್ತು ರಾಮಸೇತುವಿನ ದಿವ್ಯ ರಾಮಶಿಲೆಯ ದರ್ಶನ !
ಹೊಸದಿಲ್ಲಿ: ಭಾರತದ ಇತಿಹಾಸದಲ್ಲಿ 'ಭಕ್ತಿ' ಮತ್ತು 'ಶಕ್ತಿ'ಯ ಸಂಗಮವನ್ನುಂಟು ಮಾಡುವ ಒಂದು ಅನನ್ಯ ಉತ್ಸವವು ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯಲಿದೆ. 'ಸೇವ್ ಕಲ್ಚರ್, ಸೇವ್ ಭಾರತ್ ಫೌಂಡೇಶನ್' ಪ್ರಸ್ತುತಪಡಿಸುತ್ತಿರುವ ಮತ್ತು 'ಸನಾತನ ಸಂಸ್ಥೆ' ಆಯೋಜಿಸಿರುವ 'ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ'ವು ಡಿಸೆಂಬರ್ 13 ರಿಂದ 15 ರವರೆಗೆ, ಭಾರತ ಮಂಡಪಮ್, ಹೊಸದಿಲ್ಲಿಯಲ್ಲಿ ನಡೆಯಲಿದೆ.
ಈ ಭವ್ಯ ಉತ್ಸವದಲ್ಲಿ 1857 ರ ಮೊದಲ ದಂಗೆಯ ಆದ್ಯ ಕ್ರಾಂತಿಕಾರಿ ಮಂಗಲ ಪಾಂಡೆ ಅವರು ಬಳಸಿದ ಬಂದೂಕು ಮತ್ತು ಮಧ್ಯಪ್ರದೇಶದ ರಾಜಮನೆತನದ ಮಲ್ಹಾರರಾವ್ ಹೋಳ್ಕರ್, ಹಾಗೆಯೇ ಕ್ರಾಂತಿಸಿಂಹ ನಾನಾ ಪಾಟೀಲ್ ಅವರು ಬಳಸಿದ ಬಂದೂಕುಗಳು ಪ್ರಥಮ ಬಾರಿಗೆ ದೆಹಲಿಯಲ್ಲಿ ಪ್ರದರ್ಶನಗೊಳ್ಳಲಿವೆ. ಪಾನಿಪತ್ ಯುದ್ಧದ ತೋಪುಗಳು ಸೇರಿದಂತೆ 1500 ದುರ್ಲಭ ಶಸ್ತ್ರಾಸ್ತ್ರಗಳನ್ನು ನೋಡಬಹುದಾಗಿದೆ. ಈ ಮಹೋತ್ಸವದಲ್ಲಿ ಪರಾಕ್ರಮದ ತೇಜಸ್ವಿ ಇತಿಹಾಸ ಮತ್ತು ಚೈತನ್ಯದಾಯಕ ಅಧ್ಯಾತ್ಮದ ಅದ್ಭುತ ಸಂಯೋಗವನ್ನು ಅನುಭವಿಸಬಹುದಾಗಿದೆ, ಎಂದು ಸನಾತನ ಸಂಸ್ಥೆಯ ವಕ್ತಾರ ಅಭಯ ವರ್ತಕ್ ಅವರು ಮಾಹಿತಿ ನೀಡಿದರು.
‘ಸ್ವರಾಜ್ಯದ ಶೌರ್ಯನಾದ’: ಶಿವಾಜಿ ಕಾಲದ ಶಸ್ತ್ರಾಸ್ತ್ರಗಳ ದುರ್ಲಭ ಪ್ರದರ್ಶನ!
ಈ ಮಹೋತ್ಸವದಲ್ಲಿನ ‘ಸ್ವರಾಜ್ಯದ ಶೌರ್ಯನಾದ’ ಪ್ರದರ್ಶನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಾಲದ 1500 ಕ್ಕೂ ಹೆಚ್ಚು ಐತಿಹಾಸಿಕ ಶಸ್ತ್ರಾಸ್ತ್ರಗಳ ಭವ್ಯ ಸಂಗ್ರಹವು ಪ್ರಥಮ ಬಾರಿಗೆ ದೆಹಲಿಯವರ ಮುಂದೆ ತೆರೆದುಕೊಳ್ಳಲಿದೆ. ಛತ್ರಪತಿ ಶಿವಾಜಿ ಮಹಾರಾಜರು ಸ್ವತಃ ಸ್ಪರ್ಶಿಸಿ ಸೇನಾಪತಿ ಹಂ ಬೀರರಾವ್ ಮೋಹಿತೆ ಅವರಿಗೆ ನೀಡಿದ ಖಡ್ಗ, ಗುರಾಣಿ, ದಾಂಡಪಟ್ಟ, ಕಠಾರಿ, ಬಂದೂಕು, 2 ತೋಪುಗಳು; ಮಕ್ಕಳು ಮತ್ತು ಮಹಿಳೆಯರ ರಕ್ಷಣೆಗಾಗಿ ಬಳಸಿದ ಶಸ್ತ್ರಾಸ್ತ್ರಗಳು ಸಹ ಇದರಲ್ಲಿ ಸೇರಿವೆ. ಹಾಗೆಯೇ ಮಹಾರಾಣಾ ಪ್ರತಾಪ್ ಮತ್ತು ವಿಜಯನಗರ ಸಾಮ್ರಾಜ್ಯದ ಕಾಲದ ಶಸ್ತ್ರಾಸ್ತ್ರಗಳನ್ನು ಸಹ ಇಲ್ಲಿ ನೋಡಬಹುದಾಗಿದೆ. ಇದು ಕೇವಲ ಶಸ್ತ್ರಾಸ್ತ್ರಗಳ ಪ್ರದರ್ಶನವಲ್ಲದೇ, ಚಿಕ್ಕ ಮಕ್ಕಳಿಗೆ ಇದರಿಂದ ಸ್ಫೂರ್ತಿ ಸಿಗಲಿ ಎಂದು ಕೆಲವು ಶಸ್ತ್ರಾಸ್ತ್ರಗಳನ್ನು ಸ್ಪರ್ಶಿಸಲು ಅವಕಾಶ ನೀಡಲಾಗುತ್ತದೆ, ಇದು ಈ ಪ್ರದರ್ಶನದ ವೈಶಿಷ್ಟ್ಯವಾಗಿದೆ. ಹಾಗೆಯೇ ತೋಪನ್ನು ಹೇಗೆ ಹಾರಿಸಲಾಗುತ್ತದೆ ಎಂಬುದರ ಪ್ರಾಯೋಗಿಕ ಪ್ರದರ್ಶನವನ್ನು ಸಹ ತೋರಿಸಲಾಗುತ್ತದೆ. ಈ ಶಸ್ತ್ರಾಸ್ತ್ರ ಪ್ರದರ್ಶನವು 'ಹಾಲ್ ನಂ 12' ರಲ್ಲಿ ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಎಲ್ಲರಿಗೂ ತೆರೆದಿರುತ್ತದೆ.
ಸಾವಿರ ವರ್ಷಗಳ ನಂತರ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ದರ್ಶನ!
ಈ ಮಹೋತ್ಸವದಲ್ಲಿ ಸಾವಿರ ವರ್ಷಗಳಿಗಿಂತಲೂ ಹೆಚ್ಚು ಕಾಲ ಸಂರಕ್ಷಿಸಲ್ಪಟ್ಟ ಮೂಲ ಸೋಮನಾಥ ಜ್ಯೋತಿರ್ಲಿಂಗದ ಅವಶೇಷಗಳ ದರ್ಶನವು ಪ್ರಥಮ ಬಾರಿಗೆ ಎಲ್ಲರಿಗೂ ಲಭ್ಯವಾಗಲಿದೆ. ಗಜ್ನಿಯ ಮೊಹಮ್ಮದ್‌ನಿಂದ ಧ್ವಂಸಗೊಂಡ ಈ ಪವಿತ್ರ ಅವಶೇಷಗಳನ್ನು ಅರ್ಚಕ ಕುಟುಂಬವೊಂದು ತಮಿಳುನಾಡಿನಲ್ಲಿ ಸುರಕ್ಷಿತವಾಗಿರಿಸಿದ್ದು, ಕಾಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯರ ಮಾರ್ಗದರ್ಶನದಲ್ಲಿ ಸನಾತನ ಸಂಸ್ಥೆಯ ಮೂಲಕ ಪ್ರದರ್ಶನಗೊಳ್ಳಲಿವೆ. ಹಾಗೆಯೇ ಪ್ರಭು ಶ್ರೀರಾಮರು ನಿರ್ಮಿಸಿದ ರಾಮಸೇತುವಿನ ಅವಶೇಷಗಳಲ್ಲಿನ ರಾಮಶಿಲೆಗಳು (ನೀರಿನ ಮೇಲೆ ತೇಲುವ ಕಲ್ಲುಗಳು) ಸಹ ಇಲ್ಲಿ ದರ್ಶನಕ್ಕಾಗಿ ಲಭ್ಯವಿದೆ.
'ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ'ದ ಮೂಲಕ ರಾಷ್ಟ್ರರಕ್ಷಣೆ, ಸಂಸ್ಕೃತಿ, ಶೌರ್ಯ ಮತ್ತು ಹಿಂದವೀ ಸ್ವರಾಜ್ಯದ ತೇಜಸ್ಸನ್ನು ಜಾಗೃತಗೊಳಿಸುವ ಪ್ರಯತ್ನವಾಗಿದೆ. ಈ ಪ್ರದರ್ಶನವನ್ನು ನೋಡಲು ಚಿಕ್ಕ ಮಕ್ಕಳೊಂದಿಗೆ ಯುವ ಪೀಳಿಗೆಯವರು ಪೋಷಕರನ್ನು ಕರೆತರಬೇಕು, ಎಂದು ಸನಾತನ ಸಂಸ್ಥೆಯು ಕರೆ ನೀಡಿದೆ. ಈ ಮಹೋತ್ಸವವನ್ನು SanatanRashtraShankhnad.in ಈ ವೆಬ್‌ಸೈಟ್‌ನಲ್ಲಿ ಲೈವ್ ವೀಕ್ಷಿಸಬಹುದಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

