ದಾವಣಗೆರೆ: ಕನ್ನಡ ರಾಜ್ಯೋತ್ಸವ ಕೇವಲ ಸಮಾರಂಭಕ್ಕೆ ಸೀಮಿತವಾಗದೇ ನಿರಂತರವಾಗಿ ನಮ್ಮ ನಿಮ್ಮೆಲ್ಲರ ಮನದಾಳದಲ್ಲಿ ಕನ್ನಡವನ್ನು ಅನುಸರಿಸಿದರೆ ಶ್ರೀ ಕನ್ನಡ ತಾಯಿ ಭುವನೇಶ್ವರಿಗೆ ಅಂತರಾಳವಾಗಿ ಸಮರ್ಪಣೆ ಮಾಡಿದಂತಾಗುತ್ತದೆ ಇತ್ತೀಚಿನ ಈಗಿನ ಹೊಸ ಪೀಳಿಗೆಗಳಿಗೆ ಕನ್ನಡ ಭಾಷೆಯ ಅರಿವು ಮೂಡಿಸಬೇಕಾಗಿದೆ ಎಂದು ದಾವಣಗೆರೆ ಉಪ ಅಂಚೆ ಇಲಾಖೆಯ ಅಧೀಕ್ಷಕರಾದ ಕೆ.ಎಂ.ನರೇಂದ್ರ ನಾಯಕ್‍ರವರು ದಾವಣಗೆರೆಯ ಜಯದೇವ ವೃತ್ತದ ಹತ್ತಿರ ಇರುವ ಜಯದೇವ ವೃತ್ತ ಉಪ ಅಂಚೆ ಇಲಾಖೆಯ ಸಭಾಂಗಣದಲ್ಲಿ 70ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಗಿಡಕ್ಕೆ ನೀರೆರೆದು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಜಯದೇವ ವೃತ್ತ ಉಪ ಅಂಚೆ ಇಲಾಖೆಯ ಉಪ ಅಂಚೆ ಇಲಾಖೆಯ ಅಂಚೆ ಪಾಲಕರು ಸಿ.ವಿ.ಶಿವರಾಮ ಶರ್ಮ ರವರು ಮಾತನಾಡಿ, ಕಲಾಕುಂಚ ಸಾಂಸ್ಕøತಿಕ ಸಂಸ್ಥೆಯು ನಿರಂತರವಾಗಿ ನಮ್ಮ ಇಲಾಖೆಯ ಆತ್ಮೀಯ ಗ್ರಾಹಕರು. ಈ ಸಂಸ್ಥೆಯ ಸಹಯೋಗದೊಂದಿಗೆ ಕನ್ನಡ ರಾಜ್ಯೊತ್ಸವ ವಿಜೃಂಭಣೆಯಿಂದ ನಡೆಯಿತು. ಹಿರಿಯ ಕವಿ ನಿಸ್ಸಾರ್ ಅಹಮದ್ ಬರೆದ ಕವಿತೆಯಂತೆ ಕನ್ನಡ ನಿತ್ಯೋತ್ಸವ ಆಗಲಿ. ಕಲಾಕುಂಚ ಸಾಂಸ್ಕøತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಹೊಸ ಅಂಚೆ ಇಲಾಖೆಯ ಮನೆ ಮನೆಗೆ ಅಂಚೆ ಪತ್ರ ಹಂಚುವ ಕೆಲಸಗಾರರಿಗೆ ದಾವಣಗೆರೆ ಐತಿಹಾಸಿಕ ಪರಂಪರೆಯನ್ನು ಅರಿವು ಮೂಡಿಸಿದರು ಎಂದರು.
ಮುಖ್ಯ ಅತಿಥಿಗಳಾಗಿ ಶಿವಮೊಗ್ಗದ ಅಂಚೆ ಇಲಾಖೆಯ ಎ.ಎಸ್.ಪಿ. ಗುರುಪ್ರಸಾದ್, ಸ್ಥಾನಿಕ ಸಹಾಯಕ ಅಧೀಕ್ಷಿಕಿಯರಾದ ರೇಖಾ, ಶ್ರೀ ಗಾಯತ್ರಿ ಪರಿವಾರದ ಅಧ್ಯಕ್ಷರಾದ ಡಾ|| ರಮೇಶ್ ಪಟೇಲ್ ಮಾತನಾಡಿ, ಮಾತೃಭಾಷೆ ಯಾವುದೇ ಇರಲಿ ಕನ್ನಡ ಭಾಷೆಯನ್ನು ಅನುಸರಿಸಿದರೆ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂದರು. ಅಂಚೆ ಇಲಾಖೆಯ ಕೆಲವು ಸಿಬ್ಬಂದಿಗಳು ಕನ್ನಡ ಹಾಡಿನೊಂದಿಗೆ ನೆರೆದ ಪ್ರೇಕ್ಷಕರು ಮೆಚ್ಚುಗೆ ಪಡೆದರು.
ಕಲಾಕುಂಚ ಸಿದ್ದವೀರಪ್ಪ ಬಡಾವಣೆಯ ಶಾಖೆಯ ಅಧ್ಯಕ್ಷರಾದ ಲಲಿತಾ ಕಲ್ಲೇಶ್, ಕಲಾಕುಂಚ ಎಂ.ಸಿ.ಸಿ.ಶಾಖೆಯ ಅಧ್ಯಕ್ಷರಾದ ಪ್ರಭಾ ರವೀಂದ್ರ, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪೂಜಾರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ರವಿನಾಯ್ಕ ಸ್ವಾಗತಿಸಿದರು. ಅಚ್ಚುಕಟ್ಟಾಗಿ ನಾಗೇಂದ್ರನಾಯ್ಕ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ಅಂಚೆ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ಹಿರಿಯರಿಗೆ ಕಿರಿಯರಿಗೆ ಮತ್ತು ಮಕ್ಕಳಿಗೆ ಉಚಿತವಾಗಿ ಆಟೋಟಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕನ್ನಡತಾಯಿ ಭುವನೇಶ್ವರಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




