ಬೆಂಗಳೂರು: ನರ್ತಕರು ಹಾಗೂ ನೃತ್ಯ ಸಂಯೋಜಕರನ್ನು ಗೌರವಿಸಲು ಏರ್ಪಡಿಸಿದ್ದ ಒಂದು ಅದ್ದೂರಿ ವೇದಿಕೆಯಾದ "ಸೌತ್ ಇಂಡಿಯನ್ ಡ್ಯಾನ್ಸರ್ಸ್ ಫೆಸ್ಟ್ 2025" ನಲ್ಲಿ ಶ್ರೀ ಹೃದ್ಯಾ ಅಕಾಡೆಮಿ (ರಿ.) ತಂಡದ ನೃತ್ಯ ಪ್ರದರ್ಶನ 7 ಡಿಸೆಂಬರ್ 2025 ರಂದು ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಜರಗಿತು.
ನೃತ್ಯ ನಿರ್ದೇಶಕಿ, ಗುರು ವಿದುಷಿ ರೂಪಶ್ರೀ ಕೆ ಎಸ್, ಹಾಗೂ ತಂಡದ ಹೃದ್ಯಾ ಭಟ್ ಕೆ, ಲಕ್ಷಣಶ್ರೀ, ಪ್ರೀತಿ ಎಚ್ ಎಸ್, ರಿತಿ ಎಚ್ ಎಸ್, ರಚನಾ ರೆಡ್ಡಿ, ಯುಕ್ತಶ್ರೀ ಕೊಗರ, ಹಂಸ ಗೌಡ, ಮತ್ತು ಲಿಶಿಕಾ ಗೌಡ ಅವರಿಗೆ ವಿ.ಡಿ.ಸಿ. ಬೆಂಗಳೂರು ತಂಡದ ನಿರ್ದೇಶಕರಾದ ದಕ್ಷಿಣ ಭಾರತದ ಖ್ಯಾತ ಕೊರಿಯೋಗ್ರಾಫರ್ ವರಧ ಮಾಸ್ಟರ್ ವಿಶೇಷವಾಗಿ ಅಭಿನಂದಿಸಿದರು.
5, 6, ಹಾಗೂ 7ನೆಯ ಡಿಸೆಂಬರ್ ರಂದು ಆಯೋಜನೆಗೊಂಡ ಈ ಕಾರ್ಯಕ್ರಮಕ್ಕೆ ನೂರಾರು ಸಂಖ್ಯೆಯಲ್ಲಿ ನೃತ್ಯ ಕಲಾವಿದರು ಪಾಲ್ಗೊಂಡು ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಲು ನೃತ್ಯಾಸಕ್ತರು ಆಗಮಿಸಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


