ಮಂಗಳೂರು: ಟಾಟಾ ಸಮೂಹಕ್ಕೆ ಸೇರಿದ ದೇಶದ ಪ್ರಮುಖ ಬಹುಬಗೆಯ ಎಲೆಕ್ಟ್ರಾನಿಕ್ಸ್ ರಿಟೇಲ್ ಮಾರಾಟ ಸಂಸ್ಥೆಯಾಗಿರುವ ಕ್ರೋಮಾ, ಮಂಗಳೂರಿನಲ್ಲಿ ಇಂದು ತನ್ನ ಎರಡನೇ ಮಳಿಗೆ ಆರಂಭಿಸಿದೆ.
ಈ ಹೊಸ ಮಳಿಗೆಯು ನಗರದ ಜನನಿಬಿಡ ಎಂ.ಜಿ ರಸ್ತೆಯಲ್ಲಿದೆ. ಇದರಿಂದ ರಾಜ್ಯದಲ್ಲಿನ ಕ್ರೋಮಾದ ವಹಿವಾಟು ಮತ್ತಷ್ಟು ವಿಸ್ತರಣೆಯಾಗಲಿದೆ. ಈ ಮಳಿಗೆ ಸೇರ್ಪಡೆಯೊಂದಿಗೆ, ಕ್ರೋಮಾ ಈಗ ರಾಜ್ಯದಾದ್ಯಂತ 56 ಮಳಿಗೆಗಳನ್ನು ಹೊಂದಿದಂತಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಶ್ವಾಸಾರ್ಹ ಸೇವೆಯನ್ನು ನೀಡುವ ಕ್ರೋಮಾದ ಬದ್ಧತೆಯನ್ನು ಇದು ಪುನರುಚ್ಚರಿಸುತ್ತದೆ ಎಂದು ಪ್ರಕಟಣೆ ಹೇಳಿದೆ.
55 ಇಂಚಿನ ಮತ್ತು ಅದಕ್ಕಿಂತ ಹೆಚ್ಚಿನ ಗಾತ್ರದ ಟಿವಿಗಳ ಮೇಲೆ ಶೇಕಡ 8ರಷ್ಟು ರಿಯಾಯ್ತಿ, 400 ಲೀಟರ್ ಗಿಂತ ಹೆಚ್ಚಿನ ರೆಫ್ರಿಜರೇಟರ್‍ಗಳ ಮೇಲೆ ಶೇಕಡ 8ರಷ್ಟು ರಿಯಾಯ್ತಿ, 9 ಕೆಜಿ ಅಥವಾ ಅದಕ್ಕಿಂತ ಹೆಚ್ಚಿನ ಭಾರದ ವಾಷಿಂಗ್ ಮಷಿನ್ ಗಳ ಮೇಲೆ ಶೇಕಡ 8ರಷ್ಟು ರಿಯಾಯ್ತಿ, ಆಂಡ್ರಾಯ್ಡ್ ಸ್ಮಾರ್ಟ್ ಫೆÇೀನ್ ಗಳ ಮೇಲೆ ಶೇಕಡ 6ರಷ್ಟು ರಿಯಾಯ್ತಿ, ರೂ. 50,000 ಕ್ಕಿಂತ ಹೆಚ್ಚಿನ ಬೆಲೆಯ ವಿಂಡೋಸ್ ಲ್ಯಾಪ್‍ಟಾಪ್ ಗಳಿಗೆ ಶೇಕಡ 5ರಷ್ಟು ರಿಯಾಯ್ತಿ ಇರುತ್ತದೆ.
ಹೊಸ ಮಳಿಗೆಯು 6,189 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಮುಂಭಾಗದಲ್ಲಿರುವ ಜೆನಿಸಿಸ್ ಲಾಲ್ ಬಾಗ್, 263/2(ಪಿ), ಎಂಜಿ ರಸ್ತೆಯಲ್ಲಿದೆ. ಗ್ರಾಹಕರ ಅನುಕೂಲತೆಗಾಗಿ ಒಂದು ತಿಂಗಳವರೆಗೆ ವಿವಿಧ ಉತ್ಪನ್ನಗಳ ಖರೀದಿಗೆ ಆಕರ್ಷಕ ರಿಯಾಯ್ತಿಗಳನ್ನು ನೀಡಲಾಗಿದೆ. ಡಿಸೆಂಬರ್ 12 ರಿಂದ ಜನವರಿ 11 ರವರೆಗೆ ವಿಶೇಷ ಆರಂಭಿಕ ಕೊಡುಗೆಗಳು ಲಭ್ಯವಿರುತ್ತವೆ. ಈ ಮಳಿಗೆಯು ಪ್ರತಿದಿನ ಬೆಳಿಗ್ಗೆ 11 ರಿಂದ ರಾತ್ರಿ 9ರವರೆಗೆ ತೆರೆದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


