ಕಾಫಿ ಟೇಬಲ್ ಪುಸ್ತಕಗಳ ಬಿಡುಗಡೆ

Upayuktha
0


ಮಂಗಳೂರು: ಸೈಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ಪರಂಪರೆ ಮತ್ತು ಗುರುತುಗಳನ್ನು ಚಿತ್ರಿಸುವ ದಿ ಎಕೋಸ್ ಆಫ್ ದ ಕಾರಿಡಾರ್ಸ್– ಎ ಪೋರ್ಟ್ರೇಟ್ ಆಫ್ ಸೈಂಟ್ ಅಲೋಶಿಯಸ್ ಯುನಿವರ್ಸಿಟಿ ಹಾಗೂ ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್‌ನ ಪರಂಪರೆ ಮತ್ತು ಸೇವೆಯನ್ನು ದಾಖಲಿಸುವ ಟಚ್ಡ್ ಬೈ ಏಂಜಲ್ಸ್– ಎ ಪೋರ್ಟ್ರೇಟ್ ಆಫ್ ಫಾದರ್ ಮಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್ ಎಂಬ ಎರಡು ಕಾಫಿ ಟೇಬಲ್ ಪುಸ್ತಕಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂಸ್ಥೆಗಳ ಇತಿಹಾಸ ಮತ್ತು ಮೌಲ್ಯಗಳನ್ನು ಸಂರಕ್ಷಿಸುವಲ್ಲಿ ದೃಶ್ಯ ಕಥನದ ಮಹತ್ವವನ್ನು ಈ ಕಾರ್ಯಕ್ರಮದಲ್ಲಿ ವಿವರಿಸಲಾಗುವುದು.


ಈ ಉಪನ್ಯಾಸವನ್ನು ಶ್ರೀಮತಿ ಜಿಸೆಲ್ ಮೆಹ್ತಾ ಅವರು ನೀಡಲಿದ್ದು, ಕಾಫಿ ಟೇಬಲ್ ಪುಸ್ತಕಗಳು ಹೇಗೆ ಪಾರಂಪರಿಕ ದಾಖಲೆಗಳಾಗಿ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ಮಾತನಾಡಲಿದ್ದಾರೆ. ಆರ್ಕೈವ್ ಛಾಯಾಚಿತ್ರಗಳು, ದಾಖಲೆಗಳು ಮತ್ತು ಕಥನಶೈಲಿಯನ್ನು ಸಂಯೋಜಿಸುವ ಮೂಲಕ ಇತಿಹಾಸವನ್ನು ಸುಲಭವಾಗಿ ಗ್ರಹಿಸಬಹುದಾದ ಹಾಗೂ ಆಕರ್ಷಕ ರೂಪದಲ್ಲಿ ಹೇಗೆ ಮಂಡಿಸಬಹುದು ಎಂಬುದರ ಮೇಲೆ ಅವರು ಬೆಳಕು ಚೆಲ್ಲಲಿದ್ದಾರೆ.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸೈಂಟ್ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ರೆ। ಮೆಲ್ವಿನ್ ಜೋಸೆಫ್ ಪಿಂಟೊ ಹಾಗೂ ಸೈಂಟ್ ಅಲೋಶಿಯಸ್ ಡೀಮ್ಡ್ ಟು ಬಿ ಯುನಿವರ್ಸಿಟಿಯ ಕುಲಪತಿ ರೆ। ಡಾ। ಪ್ರವೀಣ್ ಮಾರ್ಟಿಸ್ ಉಪಸ್ಥಿತರಿದ್ದು, ಶಿಕ್ಷಣ, ಆರೋಗ್ಯ ಮತ್ತು ಸಮಾಜಸೇವೆಯಲ್ಲಿ ಆಳವಾಗಿ ನೆಲೆಸಿರುವ ಸಂಸ್ಥೆಗಳ ದಾಖಲೀಕರಣದ ಅಗತ್ಯತೆ ಮತ್ತು ಪ್ರಸ್ತುತತೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.


ಫಾದರ್ ಮಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್‌ನ ನಿರ್ದೇಶಕ ರೆ। ಫಾವುಸ್ತಿನ್ ಲುಕಾಸ್ ಲೋಬೊ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಕಾರ್ಯಕ್ರಮವು 2025 ಡಿಸೆಂಬರ್ 21 ರಂದು, ಸಂಜೆ 5 ಗಂಟೆಗೆ ಮಂಗಳೂರಿನ ಬಿಜೈ ಚರ್ಚ್ ರಸ್ತೆಯ ‘ಕ್ಯಾಮಲಾಟ್’ ಸಭಾಂಗಣದಲ್ಲಿ ನಡೆಯಲಿದೆ. ಶಿಕ್ಷಣ ಕ್ಷೇತ್ರ, ವಿದ್ಯಾರ್ಥಿಗಳು, ಇತಿಹಾಸಕಾರರು, ಪಾರಂಪರಿಕ ಅಧ್ಯಯನ ಆಸಕ್ತರು ಹಾಗೂ ಸಂಸ್ಥೆಗಳ ಇತಿಹಾಸ, ದಾಖಲೀಕರಣ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಆಸಕ್ತಿ ಹೊಂದಿರುವ ಸಾರ್ವಜನಿಕರು ಮುಕ್ತವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.


- ವಿಲಿಯಂ ಪಾಯ್ಸ್, ಲೇಖಕರು


إرسال تعليق

0 تعليقات
إرسال تعليق (0)
To Top