ಮಂಗಳೂರು: ಸೇವಾಭಾರತಿ (ರಿ) ಮಂಗಳೂರು ಇದರ ಅಂಗಸಂಸ್ಥೆಯಾದ ವಿ.ಟಿ. ರಸ್ತೆಯಲ್ಲಿರುವ ಚೇತನಾ ಬಾಲ ವಿಕಾಸ ಕೇಂದ್ರ ಶಾಲೆಯ ದಿವ್ಯಾಂಗ ಮಕ್ಕಳ ಶಾಲಾ ವಾರ್ಷಿಕೋತ್ಸವವು ದಿನಾಂಕ 19ನೇ ಡಿಸೆಂಬರ್ 2025 ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಯೂನಿಯನ್ ಬ್ಯಾಂಕ್ ಉಪ ಮಹಾ ಪ್ರಬಂಧಕರಾದ ಎ. ರಾಜಮಣಿ ಇವರು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ತದನಂತರ ಮಾತನಾಡುತ್ತಾ, ಶಾಲೆಯು ದಿವ್ಯಾಂಗರಿಗಾಗಿ ಮಾಡುತ್ತಿರುವ ಸೇವೆಯನ್ನು ಪುಣ್ಯ ಕಾರ್ಯವೆಂದು ಶ್ಲಾಘಿಸಿದರು. ಮಕ್ಕಳಿಗೆ ದೈನಂದಿನ ಚಟುವಟಿಕೆಗಳಿಂದ ತೊಡಗಿ ಎಲ್ಲಾ ಶಿಕ್ಷಣ ನೀಡುತ್ತಿರುವ ಶಿಕ್ಷಕರನ್ನು ಕೊಂಡಾಡಿದರು.
ಸAಸ್ಥೆಯ ಗೌರವ ಕಾರ್ಯದರ್ಶಿ ನಾಗರಾಜ ಭಟ್ ಅವರು ಪ್ರಾಸ್ತಾವಿಕ ಭಾಷಣವನ್ನಿತ್ತರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಪ್ರೀತಾ ಇವರು ವಾರ್ಷಿಕ ವರದಿ ವಾಚಿಸಿದರು. ಇದೇ ಸಂದರ್ಭದಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ನಡೆಸಿದ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಇವರೊಂದಿಗೆ ಸೇವಾಭಾರತಿ ವಿಶ್ವಸ್ಥರೂ, ಸಂಸ್ಥೆಯ ಕೋಶಾಧಿಕಾರಿಗಳೂ ಆದ ವಿನೋದ್ ಶೆಣೈ ಉಪಸ್ಥಿತರಿದ್ದರು. ಶಿಕ್ಷಕಿ ಜಯಶ್ರೀ ಅವರು ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ರೇಖಾ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ವಾಣಿ ಅವರು ನಡೆಸಿಕೊಟ್ಟರು.
ನಂತರ ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮವು ಮಕ್ಕಳ ಪ್ರತಿಭೆಯ ಅನಾವರಣದೊಂದಿಗೆ ನೆರೆದವರ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ಸ್ವಾಗತ ನೃತ್ಯದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಮಕ್ಕಳಿಂದ “ರೈತ ಮತ್ತು ಭೂಮಿ ತಾಯಿ” ಎಂಬ ನಾಟಕ ಮತ್ತು “ರಾಣಿ ಅಬ್ಬಕ್ಕ” ದೃಶ್ಯ ರೂಪಕಗಳು ಸಭಿಕರ ಪ್ರಶಂಸೆಗೆ ಪಾತ್ರವಾದವು. ಈ ಕಾರ್ಯಕ್ರಮಗಳ ನಿರೂಪಣೆಗಳನ್ನು ಮುಖ್ಯ ಶಿಕ್ಷಕಿ ಶ್ರೀಮತಿ ಸುಪ್ರೀತ ಮತ್ತು ಶಿಕ್ಷಕಿ ಶ್ರೀಮತಿ ಅರ್ಪಿತಾ ಅವರು ನಡೆಸಿಕೊಟ್ಟರು. ಈ ಕಾರ್ಯಕ್ರಮಗಳಲ್ಲಿ ಶಿಕ್ಷಕರ ಶ್ರಮವು ಎದ್ದು ಕಾಣುವಂತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾದುವು.
ಸಮಾರಂಭದಲ್ಲಿ ಸೇವಾಭಾರತಿ ಸಂಸ್ಥೆಯ ಸಲಹಾ ಮಂಡಳಿ ಸದಸ್ಯೆ ಶ್ರೀಮತಿ ಸುಮನಾ ಘಾಟೆ, ಲೆಕ್ಕ ಪರಿಶೋಧಕರಾದ ಗಿರಿಧರ್ ಕಾಮತ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪೃಥ್ವೀಪಾಲ್, ಸಂಸ್ಥೆಯ ಇತರ ವಿಶ್ವಸ್ಥರು, ಸಿಬ್ಬಂದಿಗಳು, ಶಾಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ, ಸ್ವಯಂಸೇವಕರು, ಪೋಷಕರು, ಮಕ್ಕಳು ಹಾಗೂ ಹಿತೈಷಿಗಳು ಭಾಗವಹಿಸುವ ಮೂಲಕ ವಿಶೇಷ ಮಕ್ಕಳಿಗೆ ಪ್ರೋತ್ಸಾಹವನ್ನಿತ್ತರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

