ರಾಜ್ಯ ತೊಗರಿ ಬೆಳೆಗಾರರಿಗೆ ಕೇಂದ್ರ ನೆರವು: ಡಾ. ಜಾಧವ್ ಸ್ವಾಗತ

Upayuktha
0

ರಾಜ್ಯ ಸರ್ಕಾರದಿಂದ ರೈತರ ಕಡೆಗಣನೆಗೆ ತೀವ್ರ ಟೀಕೆ




ಕಲಬುರಗಿ: ರಾಜ್ಯದ ತೊಗರಿ ಬೆಳೆಗಾರರಿಗೆ ತಕ್ಷಣ ಸ್ಪಂದನೆ ನೀಡಿದ ಕೇಂದ್ರ ಸರ್ಕಾರವು ಬೆಂಬಲ ಯೋಜನೆಯಡಿ ರೈತರಿಂದ 9.67 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಗೆ ಅನುಮತಿ ನೀಡಿರುವುದಕ್ಕೆ ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಸ್ವಾಗತಿಸಿದ್ದಾರೆ.


ರಾಜ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ತೊಗರಿ ಬೆಳೆಗಾರರಿಗೆ ಕೂಡಲೇ ನೆರವಾಗುವಂತೆ 2025_26 ಕ್ಕೆ ತೊಗರಿ ಬೆಳೆಗೆ ಘೋಷಿಸಲಾದ ಎಂಎಸ್‌ಪಿ  ಕ್ವಿಂಟಾಲ್ ಗೆ ರೂ.8,000 ನಿಗದಿಪಡಿಸಲಾಗಿದೆ. ಈ ದರದಲ್ಲಿ ತೊಗರಿ ಖರೀದಿಗೆ ನಿರ್ಧರಿಸುವಂತೆ ಡಿಸೆಂಬರ್ 10 ರಂದು ಕೇಂದ್ರ ಸರ್ಕಾರವು ರಾಜ್ಯಕ್ಕೆ ಆದೇಶವನ್ನು ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಪ್ರಲ್ಹಾದ ಜೋಶಿ ಅವರಿಗೆ ಜಾಧವ್ ರೈತರ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.


ಕೇಂದ್ರ ಸರ್ಕಾರದ ಈ ಆದೇಶದಿಂದ 2025-26 ನೇ ಸಾಲಿನಲ್ಲಿ 16.80 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದೆ. ಸುಮಾರು 13 ಲಕ್ಷ ಮೆಟ್ರಿಕ್ ಟನ್ ತೊಗರಿ ಉತ್ಪಾದನೆಯ ಅಂದಾಜು ಮಾಡಲಾಗಿದ್ದು ಕೇಂದ್ರ ಸರ್ಕಾರದ ಈ ಆದೇಶ ರೈತರಿಗೆ ಹೊಸ ವರ್ಷದ ಆರಂಭದಲ್ಲಿ ನೀಡಿದ ಶುಭ ಸುದ್ದಿ ಎಂದು ಹೇಳಿದರು. ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ, ಬೆಳಗಾವಿ, ವಿಜಯನಗರ, ಚಿತ್ರದುರ್ಗ, ಕೋಲಾರ ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಮುಂತಾದ ಜಿಲ್ಲೆಗಳಲ್ಲಿ ಕೃಷಿಕರು ಮುಖ್ಯವಾಗಿ ತೊಗರಿ ಬೆಳೆಯುತ್ತಿದ್ದು ಇದೀಗ ಬೆಂಬಲ ಬೆಲೆಯ ಖರೀದಿಗೆ ಕೇಂದ್ರ ಸರ್ಕಾರವು ಆದೇಶ ನೀಡಿರುವುದರಿಂದ ರೈತರ ಪಾಲಿಗೆ ವರದಾನವಾಗಿದೆ.


ಕೇಂದ್ರ ಸರ್ಕಾರದ ಆದೇಶದಂತೆ ಖರೀದಿ ಪ್ರಾರಂಭದ ದಿನದಿಂದ ಮುಂದಿನ ಮೂರು ತಿಂಗಳುಗಳ ಕಾಲ ಒಟ್ಟು 9.67 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಯಾಗಲಿದೆ. ಕೇಂದ್ರ ಸರಕಾರವು ರಾಜ್ಯದ ತೊಗರಿ ರೈತರ ಹಿತರಕ್ಷಣೆಗೆ ಸದಾ ಬದ್ಧವಾಗಿದೆ ಎಂಬುದಕ್ಕೆ ಈ ನೂತನ ಆದೇಶ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಕೃಷಿಕರನ್ನು ತೀವ್ರವಾಗಿ ಕಡೆಗಣಿಸುತ್ತಿದೆ ಮಾತ್ರವಲ್ಲ ಅತಿವೃಷ್ಟಿ ಪರಿಹಾರ ವಿತರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಈ ಸರಕಾರಕ್ಕೆ ರಾಜ್ಯದ ರೈತರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಸಮಸ್ಯೆಗಳಿಗೆ ಹಾಗೂ ರೈತರ ನೋವುಗಳಿಗೆ ಸ್ಪಂದಿಸುವ ಬದಲಾಗಿ ಕುರ್ಚಿಕಿತ್ತಾಟದ ಕುರಿತು ಹೆಚ್ಚು ಮಹತ್ವ ನೀಡಿ ಸುದ್ದಿ ಆಗುತ್ತಿರುವುದು ದುರದೃಷ್ಟಕರ ಎಂದು ಜಾಧವ್ ಪತ್ರಿಕಾ ಹೇಳಿಕೆಯಲ್ಲಿ ತೀವ್ರವಾಗಿ ಟೀಕಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top