ಕುಳಾಯಿ: ಭಾರತ್ ಬ್ಯಾಂಕ್‌ನ ಮಾಜಿ ನಿರ್ದೇಶಕರು, ವಿವಿಧ ಸಂಘ ಸಂಸ್ಥೆಗಳ ಮಾರ್ಗದರ್ಶಕರು, ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪರಮ ಭಕ್ತರೂ ಆದ ಭೋಜರಾಜರ ನಿಧನಕ್ಕೆ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ವತಿಯಿಂದ ಸಂತಾಪ ಸೂಚಿಸಲಾಯಿತು.
ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಮನೆಯವರಿಗೆ ನೀಡಲಿ ಮತ್ತು ಶ್ರೀ ವಿಷ್ಣುಮೂರ್ತಿ ದೇವರು ಮೃತರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು. ಬಳಿಕ ಸಂತಾಪ ಸೂಚಕ ಪತ್ರವನ್ನು ಮೃತರ ಸಹೋದರ ಮೋನಪ್ಪ, ಮಂಜು ಕುಳಾಯಿ ರವರಿಗೆ ನೀಡಲಾಯಿತು.
ಎಂ ಜೆ ಶೆಟ್ಟಿ, ಸದಾಶಿವ ಎಂ, ಕೃಷ್ಣ ಹೆಬ್ಬಾರ್, ವಾಸುದೇವ ಹೆಬ್ಬಾರ್, ಯೋಗೀಶ ಕುಳಾಯಿ, ಶ್ರೀರಂಗ ಹೊಸಬೆಟ್ಟು, ಯೋಗೀಶ ಸನಿಲ್ ಕುಳಾಯಿ, ಕೆ ಪಿ ಚಂದ್ರಶೇಖರ, ವಾಸುದೇವ ಆಚಾರ್ಯ, ಶ್ರೀನಿವಾಸ ಕುಳಾಯಿ, ಶಶಿಧರ ಐತಾಳ್, ಸದಾಶಿವ ಶೆಟ್ಟಿ, ಹರಿಶ್ಚಂದ್ರ, ರಮೇಶ ಅಳಪೆ, ಶ್ರೀಮತಿ ಶಕುಂತಲಾ ಪ್ರಕಾಶ್, ಶ್ರೀಮತಿ ಪುಷ್ಪ, ಮತ್ತು ಹಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳು ನುಡಿ ನಮನ ಸಲ್ಲಿಸಿದರು. ಮೌನ ಪ್ರಾರ್ಥನೆ ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪ ಅರ್ಚನೆ ಸಲ್ಲಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


