ಭಟ್ರಕುಮೇರು ಸ್ವಾಮಿ ಬಾಲ ತನಿಯ ಕ್ಷೇತ್ರ: ಪ್ರತಿಷ್ಠಾವರ್ಧಂತಿ, ಕೋಲ ಸೇವೆ ಸಂಪನ್ನ

Chandrashekhara Kulamarva
0


ಮಂಗಳೂರು: ನಗರದ ಪದವಿನಂಗಡಿ ಸಮೀಪದ ಭಟ್ರಕುಮೇರು ಸ್ವಾಮಿ ಕೊರಗ ತನಿಯ ಸಾನಿಧ್ಯದಲ್ಲಿ ಸ್ವಾಮಿ ಕೊರಗ ತನಿಯ ದೈವದ ಚತುರ್ಥ ವರ್ಷದ ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆಯು ಸಾನಿಧ್ಯದ ಯಜಮಾನರು ಹಾಗೂ ದೈವಾರಾಧಕರಾದ ಭಾಸ್ಕರ ಬಂಗೇರ ಇವರ ನೇತ್ರತ್ವದಲ್ಲಿ  ಭಾನುವಾರ (ಡಿ.7) ತಂತ್ರಿಗಳಾದ ರವಿ ಆನಂದ ಶಾಂತಿ ಆಡುಮರೋಳಿ ಇವರ ಮಾರ್ಗದರ್ಶನದಲ್ಲಿ ಜರುಗಿತು.


ಅಂದು ಬೆಳಿಗ್ಗೆ 7ರಿಂದ ಮಹಾಗಣಪತಿ ಹೋಮ ಹಾಗೂ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಭಜನೆ ಹಾಗೂ ಹರಿನಾಮ ಕೀರ್ತನೆ ನಡೆಯಿತು. ಸಂಜೆ 3 ಗಂಟೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.


ಸಂಜೆ ಶ್ರೀಮತಿ ವಿಜಯ ಭಾಸ್ಕರ್ ಮತ್ತು ತಂಡದಿಂದ ಭಕ್ತಿಗಾನ ಸುಧೆ ಭಕ್ತಿ ರಸಮಂಜರಿ ಕಾರ್ಯಕ್ರಮ ಜರುಗಿತು. ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ದಿನಾಂಕ  08-12-2025 ನೇ ಸೋಮವಾರ ಸಂಜೆ 7 ಗಂಟೆಗೆ ಅಗೆಲು ಸೇವೆ ನಡೆಯಿತು.


ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್, ರೇಕಿ ಮಾಸ್ಟರ್ ವಿಜಯ ಸುವರ್ಣ, ಡಾ.ಗುರುತೇಜ, ತಡ್ಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಾಣೇಶ್ ಅತ್ತಾವರ, ಮಾಣೂರು ಬಾಲಕೃಷ್ಣ ಸುಬ್ರಹ್ಮಣ್ಯ ದೇವಾಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಶ್ರೀಮತಿ ವೀಣಾ, ಪದವಿನಂಗಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಂದೀಪ್ ಬೋಂದೆಲ್,  ಉದ್ಯಮಿಗಳಾದ ಬಾಲಕೃಷ್ಣ ಗಟ್ಟಿ, ಲೀಲಾಕ್ಷ ಕರ್ಕೇರಾ, ನಿರೂಪಕ ನವನೀತ್ ಶೆಟ್ಟಿ ಕದ್ರಿ, ಸಾಹಿತಿ ಕೆ.ಕೆ. ಪೇಜಾವರ್, ಶ್ರೀ ಕ್ಷೇತ್ರದ ಸೇವಾಕರ್ತರು ಗಳಾದ ಪೂಜ್ಯ ಮಾತಶ್ರೀ ವಿಮಲಾ ಮುಂತಾದವರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಪತ್ರಕರ್ತ ಬಾಲಕೃಷ್ಣ ಯೆಯ್ಯಾಡಿ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top