ಬೆಂಗಳೂರು: ಗೆಜ್ಜೆಪೂಜೆ ಎನ್ನುವುದು ನರ್ತಕಿಯ ಜೀವನದ ಮಹತ್ತರ ಘಟ್ಟ. ಗೆಜ್ಜೆಪೂಜೆಯ ಮೂಲಕ ತಮ್ಮ ನೃತ್ಯ ಜೀವನದಲ್ಲಿ ಉತ್ತುಂಗಕ್ಕೆ ಏರಲು ಸಾಧ್ಯವಾಗುತ್ತದೆ. ಹೀಗೊಂದು ಗೆಜ್ಜೆಪೂಜೆಯು ಶ್ರೀ ಗಣೇಶ ನೃತ್ಯಾಲಯ ಅರಿಶಿನಕುಂಟೆ ಸಂಸ್ಥೆಯ ನಿರ್ದೇಶಕರು ಆದ ಎಂ ಡಿ ಗಣೇಶ್ ಮತ್ತು ಭಾವನಾ ಗಣೇಶ್ ರವರು, ತಮ್ಮ ಶಿಷ್ಯೆಯಾದ ಕು|| ಪ್ರತೀಕ್ಷಾಳ ಗೆಜ್ಜೆಪೂಜೆಯನ್ನು ಕಲಾಗ್ರಾಮ ಸಭಾಂಗಣದಲ್ಲಿ ನೆರೆವೇರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ|| ಸುಮನಾ ಆರ್. ನಾಟ್ಯಚಾರ್ಯ. ಸ್ವಾಮಿ ಎಂ, ಕ್ಯಾಪ್ಟನ್. ಶ್ರೀ ಮಹಾಬಲೇಶ್ವರ ತುಂಗಾ ಮತ್ತು ವೈದ್ಯ ದಂಪತಿಗಳಾದ ಡಾ|| ಗೋಪಾಲ್ ಮತ್ತು ಡಾ|| ನಿಶ್ಚಲ ಗೋಪಾಲ್ ರವರು ಉಪಸ್ಥಿತರಿದ್ದರು. ವೈವಿದ್ಯಮಯ ಬೆಳಕು, ಮಾಧುರ್ಯವಾದ ಸಂಗೀತದಿಂದ ಕು|| ಪ್ರತೀಕ್ಷಾಳ ನೃತ್ಯ ಪ್ರಸ್ತುತಿಯು ಕಲಾರಸಿಕರ ಮನಸೊರೆಗೊಂಡಿತ್ತು.
ವರದಿ: ಶ್ರೀಮತಿ ಭಾವನಾ ಗಣೇಶ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




