ನಿಟ್ಟೆ ಸ್ಕೂಲ್ ಆಫ್‌ ಆರ್ಕಿಟೆಕ್ಚರ್, ಪ್ಲಾನಿಂಗ್ ಆ್ಯಂಡ್ ಡಿಸೈನ್‌ ವಿದ್ಯಾರ್ಥಿಗಳಿಗೆ ಪದವಿಪ್ರದಾನ

Upayuktha
0


ಯಲಹಂಕ, ಬೆಂಗಳೂರು: ‘ಸಂಪನ್ಮೂಲಗಳ ಬಳಕೆಯ ನಂತರ ಉಂಟಾಗುವ ಕಸದ ಸೂಕ್ತ ವಿಲೇವಾರಿ ಮತ್ತು ಅನಗತ್ಯ ವೆಚ್ಚದ ಮೇಲೆ ಕಡಿವಾಣ, ವಾಸ್ತುಶಿಲ್ಪಿ ಅಂದರೆ ಆರ್ಕಿಟೆಕ್ಟ್‌ನ ಧ್ಯೇಯಗಳಾಗಿರಬೇಕು. ಅಲ್ಲದೆ ವಾಸ್ತುಶಿಲ್ಪ ಶಾಸ್ತ್ರದ ಐದು ಆಧಾರ ಸ್ತಂಭಗಳೆಂದೇ ಗುರುತಿಸಲ್ಪಟ್ಟಿರುವ ಲಭ್ಯತೆ, ಕಾರ್ಯಕ್ಷಮತೆ, ಸ್ಥಿತಿಸ್ಥಾಪಕತ್ವ ಅಂದರೆ ಕಷ್ಟಗಳು ಎದುರಾದರೆ ಚೇತರಿಸಿಕೊಳ್ಳುವ ಸಾಮರ್ಥ್ಯ, ಹೊಣೆಯ ಹೆಚ್ಚಳದ ನಡುವೆಯೂ ಗುಣಮಟ್ಟ ಕಾಪಾಡುವ ಸಂಕಲ್ಪ ಮತ್ತು ಸುರಕ್ಷತೆಗಳ ಬಗ್ಗೆ ಸದಾ ಗಮನ ಹರಿಸಬೇಕು’ ಎಂದು ಪ್ರಸಿದ್ಧ ವಾಸ್ತುಶಿಲ್ಪಿ ಮತ್ತು ನಗರ ಯೋಜಕ ಡಾ. ರೂಪಿಂದರ್ ಸಿಂಗ್ ನುಡಿದರು.


ಅವರು ಬೆಂಗಳೂರಿನ ನಿಟ್ಟೆ ಸ್ಕೂಲ್ ಆಫ್‌ ಆರ್ಕಿಟೆಕ್ಚರ್, ಪ್ಲಾನಿಂಗ್ ಆ್ಯಂಡ್ ಡಿಸೈನ್‌ನಲ್ಲಿ ನೂತನ ಪದವೀಧರರಿಗೆ ಪದವಿಪ್ರದಾನ ಮಾಡಿದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. 


ವಾಸ್ತುಶಿಲ್ಪ ವಿಭಾಗದಲ್ಲಿ 50 ವಿದ್ಯಾರ್ಥಿಗಳು, ಯೋಜನಾ ವಿಭಾಗದಲ್ಲಿ 11 ವಿದ್ಯಾರ್ಥಿಗಳು ಪದವಿಗಳನ್ನು ಸ್ವೀಕರಿಸಿದರು. ವಾಸ್ತುಶಿಲ್ಪ ವಿಭಾಗದಲ್ಲಿ ಶಿವಪೂಜ ಮೊದಲ ರ‍್ಯಾಂಕ್ ಪಡೆದರೆ ಪೋಷಿತಾ ದ್ವಿತೀಯ ರ‍್ಯಾಂಕ್ ಗಳಿಸಿದರು. ಯೋಜನಾ ವಿಭಾಗದಲ್ಲಿ ರುಚಿತಾ ಸಿಂಗ್ ಮೊದಲ ರ‍್ಯಾಂಕ್ ಪಡೆದರು.


‘ವಾಸ್ತುಶಿಲ್ಪ ಶಾಸ್ತ್ರವು ಕಲೆ ಹಾಗೂ ವಿನ್ಯಾಸ ವಿಜ್ಞಾನಗಳ ಸಂಗಮವಾಗಿದೆ. ಇಲ್ಲಿ ಅತ್ಯಂತ ಅಗತ್ಯವಿರುವುದು ಶಿಸ್ತು ಹಾಗೂ ಸಂಯಮ. ಸಕಾರಾತ್ಮಕ ಧೋರಣೆ, ಸ್ವಯಂ ನಿಯಂತ್ರಣ ಮತ್ತು ಸಾಧಿಸುವ ಛಲ ವಾಸ್ತುಶಿಲ್ಪಿಗಳ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳಾಗಿರಬೇಕು’ ಎಂದರು.


ಅಧ್ಯಕ್ಷತೆ ವಹಿಸಿದ್ದವರು, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್‌ನ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ ಅವರು ತಮ್ಮ ಭಾಷಣದಲ್ಲಿ ನಿರ್ಣಾಯಕ ವಿವೇಚನಾ ಶಕ್ತಿ ಮತ್ತು ಸಹಾನುಭೂತಿಗಳು ವಾಸ್ತುಶಿಲ್ಪಿಗಳ ಸಹಜ ಸ್ವಭಾವಗಳಾಗಿರಬೇಕು ಎಂದು ವಿಶ್ಲೇಷಿಸಿದರು.


ಪ್ರಾರಂಭದಲ್ಲಿ ಸಂಸ್ಥೆಯ ಪ್ರಾಂಶುಪಾಲೆ ಪ್ರೊ. ನಂದಿತಾ ನಾಗರಾಜ್ ಸರ್ವರನ್ನೂ ಸ್ವಾಗತಿಸಿದರು. ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್, ಮಂಗಳೂರಿನ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್‌ ಆರ್ಕಿಟೆಕ್ಚರ್‌ನ ನಿರ್ದೇಶಕ ಪ್ರೊ. ವಿನೋದ್ ಅರನ್ಹ, ಸಂಸ್ಥೆಯ ವಾಸ್ತುಶಿಲ್ಪ ಮತ್ತು ಯೋಜನಾ ವಿಭಾಗಗಳ ಮುಖ್ಯಸ್ಥರು, ವಾಸ್ತುಶಿಲ್ಪ ಉದ್ಯಮದ ಪ್ರತಿನಿಧಿಗಳು ಹಾಗೂ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top