ಸೌಂದರ್ಯ ಎನ್ನುವುದು ಮುಖದಲ್ಲಿರುವ ಅಲಂಕಾರ ಮಾತ್ರವಲ್ಲ, ಮನಸ್ಸಿನ ಸ್ವಚ್ಛತೆ ಮತ್ತು ನಡವಳಿಕೆಯಲ್ಲಿಯೂ ಕಾಣಿಸಿಕೊಳ್ಳುತ್ತದೆ. ಯಾರೇ ಆಗಿದ್ದರೂ ತಮ್ಮನ್ನು ಸುಂದರವಾಗಿ ಕಾಣಿಸಿಕೊಳ್ಳಲು ಸ್ವಲ್ಪ ಕಾಳಜಿ ತೆಗೆದುಕೊಳ್ಳುವುದು ಸಹಜ. ಸ್ವಚ್ಛತೆ, ಆರೋಗ್ಯ, ಸರಿಯಾದ ಆಹಾರ ಮತ್ತು ನಗು—ಇವೆಲ್ಲವೂ ನಮ್ಮ ಸಹಜ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನೈಸರ್ಗಿಕತೆಯಲ್ಲಿ ಇರುವ ಸೌಂದರ್ಯ ಯಾವಾಗಲೂ ಆಕರ್ಷಕವಾಗಿರುತ್ತದೆ.
ಆದರೆ ಕೆಲವರು ಸೌಂದರ್ಯದ ಮೇಲೆ ಅತಿಯಾಗಿ ಕಾಳಜಿ ತೋರಿಸುತ್ತಾರೆ. ಹೆಚ್ಚು ಮೇಕಪ್, ಹೆಚ್ಚಾದ ಸ್ಕಿನ್‌ಕೆರ್ ಪ್ರಾಡಕ್ಟ್ಸ್, ಮತ್ತು ಯಾವಾಗಲೂ ತಮ್ಮ ಲುಕ್‌ಗಳ ಬಗ್ಗೆ ಅತಿಯಾದ ಚಿಂತೆ ಇವು ಕೆಲವೊಮ್ಮೆ ಹಾನಿಕಾರಕವಾಗಬಹುದು. ಅತಿಯಾದ ರಾಸಾಯನಿಕ ಬಳಕೆ ಚರ್ಮಕ್ಕೆ ಸಮಸ್ಯೆ ಉಂಟುಮಾಡಬಹುದು. ಸೌಂದರ್ಯದ ಹಿಂದೆ ಓಡುತ್ತಾ, ಕೆಲವೊಮ್ಮೆ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುವವರೂ ಇರುತ್ತಾರೆ.
ಆದ್ದರಿಂದ ಸೌಂದರ್ಯಕ್ಕೆ ಕಾಳಜಿ ಬೇಕು ಆದರೆ ‘ಅತಿಯಾಗಬಾರದು’ ಎಂಬುದು ಮುಖ್ಯ. ಸಹಜತೆಯನ್ನು ಉಳಿಸಿಕೊಂಡು, ಸರಳವಾದ ಆರೈಕೆಯನ್ನು ಮಾಡುವುದು ಆರೋಗ್ಯಕರ. ಒಳಗಿನ ಸಂತೋಷ, ಶಾಂತಿ ಹಾಗೂ ಆತ್ಮವಿಶ್ವಾಸವೇ ನಿಜವಾದ ಸೌಂದರ್ಯ. ಹೊರಗಿನ ಅಲಂಕಾರಕ್ಕಿಂತ ಒಳಗಿನ ಹೊಳೆ ಹೆಚ್ಚು ಕಾಲ ಉಳಿಯುತ್ತದೆ ಎಂಬುದನ್ನು ಅರಿತುಕೊಳ್ಳುವುದು ಮುಖ್ಯ.
-ಅಂಜಲಿ ಮುಂಡಾಜೆ
ಎಸ್ ಡಿ ಯಂ ಕಾಲೇಜು ಉಜಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



