ನಾಟೆಕಲ್: ಕಣಚೂರು ಆಯುರ್ವೇದ ಕಾಲೇಜಿನಲ್ಲಿ ನಡೆದ ನೂತನ ವಿದ್ಯಾರ್ಥಿಗಳ ತರಗತಿಗಳ ಆರಂಭ ಹಾಗೂ ದಿಗ್ದರ್ಶನ ಉಪನ್ಯಾಸದ ಸಲುವಾಗಿ ಸಂಸ್ಥೆಯ ವೈದ್ಯಕೀಯ ಸಲಹೆಗಾರ ಡಾ ಸುರೇಶ ನೆಗಳಗುಳಿ ಅವರು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಅವರು ಮುಂದುವರಿದು ಆಯುರ್ವೇದದ ಮಹತ್ವ ಹೇಳುತ್ತಾ ಈ ನಿಟ್ಟಿನಲ್ಲಿ ಬೇಕಾದ ಮುಖ್ಯ ವಿಚಾರ ಎಂದರೆ ಆರೋಗ್ಯಕರ ರಾಷ್ಟ್ರಕ್ಕಾಗಿ ಸಾಂಪ್ರದಾಯಿಕ ಬುದ್ಧಿವಂತಿಕೆಯನ್ನು ಬಳಸಿಕೊಳ್ಳುವುದು. ಅಂದರೆ ಭಾರತದ ಪ್ರಾಚೀನ ವೈದ್ಯಕೀಯ ವ್ಯವಸ್ಥೆಯಾದ ಆಯುರ್ವೇದವು ಶತಮಾನಗಳಿಂದ ಆರೋಗ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಮೂಲಾಧಾರವಾಗಿದೆ ಎಂಬ ವಿಚಾರದ ಅಮೂಲಾಗ್ರ ಕಲ್ಪನೆ ಎಂದರು.
ಹಾಗೆಯೇ ಯೋಚಿಸಬೇಕಾದ ಸಂಗತಿ ಎಂದರೆ, ಹೆಚ್ಚುತ್ತಿರುವ ಆರೋಗ್ಯ ವೆಚ್ಚಗಳು ಮತ್ತು ಹೆಚ್ಚುತ್ತಿರುವ ಜೀವನಶೈಲಿ ಮತ್ತು ಕಾಯಿಲೆಗಳೊಂದಿಗೆ, ಆಯುರ್ವೇದವು ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಸಮಗ್ರ ವಿಧಾನವನ್ನು ನೀಡುತ್ತದೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು.
ವಿವಿಧ ರಾಜ್ಯಗಳ 95 ವಿದ್ಯಾರ್ಥಿಗಳು ನೂತನ ಪ್ರವೇಶ ಪಡೆದಿದ್ದು ಇದು ಕಣಚೂರು ಸಂಸ್ಥೆಯ ಪ್ರಥಮ ತರಗತಿಯಾಗಿದ್ದು ಇದು ಅವರ ಪಾಲಿಗೆ ಸದಾ ಇತಿಹಾಸವಾಗುತ್ತದೆ. ಉತ್ತಮ ಸೇವಾ ಸೌಲಭ್ಯ ಉಳ್ಳ ಈ ಸಂಸ್ಥೆಯು ನಾಟೇಕಲ್ಲಿನಲ್ಲಿ ಡಾ ಹಾಜಿ ಮೋನು ಕಣಚೂರ್ ಅವರ ಸಾರಥ್ಯದ ಸಂಸ್ಥೆಯಾಗಿದೆ.

