ಆಯುರ್ವೇದ ಸಮ್ಮೇಳನ ಕೇವಲ ವೈದ್ಯರದ್ದಲ್ಲ, ಇದು ದೇವರ ಸಮ್ಮೇಳನ: ರಾಘವೇಶ್ವರ ಶ್ರೀಗಳು

Upayuktha
0


ಬೆಂಗಳೂರು: ಜಗತ್ತಿನಲ್ಲಿ ಕೊಲ್ಲುವ ಶಕ್ತಿ ಮತ್ತು ಕಾಯುವ ಶಕ್ತಿ ಎಂಬ ಎರಡು ಶಕ್ತಿಗಳು ಸದಾ ಅಸ್ತಿತ್ವದಲ್ಲಿವೆ. ದೇವರ ಕಾರ್ಯ ಜೀವವನ್ನು ಕಾಯುವುದು, ರಾಕ್ಷಸರ ಕಾರ್ಯ ಕೊಲ್ಲುವುದು ಹಾಗೂ ತೊಂದರೆ ನೀಡುವುದಾಗಿದೆ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.


ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ 2ನೇ ವಿಶ್ವ ಆಯುರ್ವೇದ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಾ ಮಾತನಾಡಿದರು. ದೇವರು ನೇರವಾಗಿ ಸಹಾಯ ಮಾಡುವುದಿಲ್ಲ. ಜೀವ ಉಳಿಸುವ ಕಾರ್ಯವನ್ನು ದೇವರ ರೂಪದಲ್ಲಿ ವೈದ್ಯರು ಮಾಡುತ್ತಾರೆ. ಆದ್ದರಿಂದ ಇದು ಕೇವಲ ಆಯುರ್ವೇದ ವೈದ್ಯರ ಸಮ್ಮೇಳನವಲ್ಲ, ಇದು ದೇವರ ಸಮ್ಮೇಳನವಾಗಿದೆ ಎಂದು ಅವರು ಹೇಳಿದರು.


ಡಾ. ಗಿರಿಧರ ಕಜೆ ಅವರು ದೇವರನ್ನೆಲ್ಲಾ ಒಂದೆಡೆ ಸೇರಿಸಿ ಈ ಸಮ್ಮೇಳನವನ್ನು ಆಯೋಜಿಸಿದ್ದಾರೆ. ಅವರ ಈ ಶ್ರಮ ನಾಡಿನ ಅಭಿನಂದನೆಗೆ ಸಂಪೂರ್ಣವಾಗಿ ಅರ್ಹವಾಗಿದೆ ಎಂದು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.


ಆಯುರ್ವೇದ ವೈದ್ಯರು ಕೇವಲ ಆಯುರ್ವೇದ ಗ್ರಂಥಗಳ ಅಧ್ಯಯನಕ್ಕೆ ಸೀಮಿತವಾಗಬಾರದು. ಆಯುರ್ವೇದಕ್ಕೆ ಪೂರಕವಾಗಿ ಜ್ಯೋತಿಷ್ಯ ಮತ್ತು ಧರ್ಮಶಾಸ್ತ್ರಗಳ ಅಧ್ಯಯನವೂ ಅಗತ್ಯ. ಇವುಗಳ ಸಮಗ್ರ ಜ್ಞಾನ ಹೊಂದಿದಾಗ ಮಾತ್ರ ಔಷಧಗಳ ಪ್ರಯೋಜನ ಹೆಚ್ಚಾಗಲು ಸಾಧ್ಯ ಎಂದು ಹೇಳಿದರು.


ಆಯುರ್ವೇದ ವೈದ್ಯರು ಆಲೋಪತಿ ವಿಜ್ಞಾನವನ್ನು ತಿಳಿದಿರಬೇಕು. ಆದರೆ ಚಿಕಿತ್ಸೆ ನೀಡುವಾಗ ಆಯುರ್ವೇದ ಔಷಧಗಳನ್ನೇ ಬಳಸಬೇಕು ಎಂಬುದನ್ನು ಅವರು ಸ್ಪಷ್ಟಪಡಿಸಿದರು.


ಕರುಣೆ ಇಲ್ಲದವರು ವೈದ್ಯರಾಗಲು ಅರ್ಹರಲ್ಲ. ವೈದ್ಯರಲ್ಲಿ ಕರುಣೆ ಅತ್ಯಂತ ಅಗತ್ಯ. ಔಷಧಿಯಿಂದ ಅರ್ಧ ಕಾಯಿಲೆ ಗುಣವಾದರೆ, ಉಳಿದ ಅರ್ಧ ಕಾಯಿಲೆ ವೈದ್ಯರ ಕಳಕಳಿ ಮತ್ತು ಸಹಾನುಭೂತಿಯಿಂದ ಗುಣವಾಗುತ್ತದೆ ಎಂದು ಜಗದ್ಗುರು ಹೇಳಿದರು.


ಸಮ್ಮೇಳನದ ಉದ್ಘಾಟನೆಯಲ್ಲಿ ಬೆಳಗಿದ ದೀಪವು ವಿಶ್ವವನ್ನೇ ಬೆಳಗಲಿ ಎಂದು ಆಶಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top