ಪ್ರತ್ಯೇಕ ಸ್ಪರ್ಧೆಗಳಲ್ಲಿ ಅಂಬಿಕಾ ವಿದ್ಯಾರ್ಥಿಗಳಿಗೆ ಬಹುಮಾನ

Chandrashekhara Kulamarva
0


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮಹಿಮಾ ಆರ್ ಕೆ ಅವರು ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯ ವತಿಯಿಂದ ಕನ್ನಡ ರಾಜ್ಯೋತ್ಸವದ ನೆಲೆಯಲ್ಲಿ ಆಯೋಜಿಸಲಾದ ಐದನೇ ಕನ್ನಡ ಪುಸ್ತಕ ಹಬ್ಬದ ಪ್ರಯುಕ್ತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ‘ಭಾರತದ ನಿಜ ಇತಿಹಾಸ: ಸೋಲಿನದ್ದೇ? ಶೌರ್ಯದ್ದೇ?' ಎಂಬ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುತ್ತಾರೆ. ಇವರು ವಿಟ್ಲದಲ್ಲಿರುವ ರವಿಶಂಕರ ಕುಳಮರ್ವ ಹಾಗೂ ಮೈತ್ರಿ ಭಟ್ ದಂಪತಿ ಪುತ್ರಿ.


ವಿಜ್ಞಾನ ಮಾದರಿಯಲ್ಲಿ ಬಹುಮಾನ: ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ಆರನೇ ತರಗತಿ ವಿದ್ಯಾರ್ಥಿ ಸಂಹಿತ್ ಜೋಸ್ಸಿ ಲೋಬೊ ಅವರು ಪುತ್ತೂರಿನ ವಿವೇಕಾನಂದ ಕೇಂದ್ರೀಯ ಶಾಲೆಯಲ್ಲಿ ನಡೆದ ಇನ್‍ಸೆಫ್ ರೀಜನಲ್ ಫೇರ್‍ನ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ, ಹರ್ಬಲ್ ಶಾಂಪು ತಯಾರಿಕೆ ವಿಷಯವನ್ನು ಪ್ರಸ್ತುತ ಪಡಿಸಿ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ. ಇವರು ನೆಕ್ಕಿಲಾಡಿ  ಆದರ್ಶ ನಗರದ  ನಿವಾಸಿಯಾದ  ಸುಪ್ರೀತ್ ಜೆ ಲೋಬೊ ಮತ್ತು ಶೈನಿ ಪಾಯಸ್ ದಂಪತಿಯ ಪುತ್ರ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top