ಬಂಜರು ಭೂಮಿಯನ್ನು ಅಗೆದು, ಉಳುಮೆ ಮಾಡಿ ಅದಿಕ್ಕೆ ನೀರು ಗೊಬ್ಬರ ಹಾಕಿ ಅದರಲ್ಲಿ ಬೀಜವೋ, ಗಿಡವೋ ನೆಟ್ಟು ಅದನ್ನು ಮುಂದುವರೆಸುವುದೇ ಕೃಷಿ. ಅದು ಫಲ ಕೊಡುವವರೆಗೂ ತಾಳ್ಮೆಯಿಂದ ಕಾದು ಅದು ಕೃಷಿಕನ ಕೈ ಸೇರುವ ತನಕ ಅದರ ಪೋಷಣೆ ಅತೀ ಅಗತ್ಯ. ಸರಿಯಾದ ಕೃಷಿ ಮಾಡಿದಲ್ಲಿ ಅದರಲ್ಲಿ ಸೋಲೇಬುವುದು ಇಲ್ಲ. ಕೃಷಿಯಲ್ಲಿ ಸ್ವತಂತ್ರ ಬದುಕು ಕಟ್ಟಿಕೊಳ್ಳಬಹುದು. ಕೃಷಿ ಯಾವಾಗಲು ಸೋಮಾರಿಯಗಳು ಬಿಡುವುದಿಲ್ಲ. ಹಳ್ಳಿ ಪ್ರದೇಶದಲ್ಲಿ ಕೃಷಿ ಹೆಚ್ಚಾಗಿ ಬೆಳೆಸುತ್ತಾರೆ. ಹಳ್ಳಿ ಜನರು ಕೃಷಿಗೆ ಹೆಚ್ಚುಓತ್ತು ಕೊಡುವುದು. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಅಡಿಕೆ, ತೆಂಗು, ರಬ್ಬರ್, ಭತ್ತ ಇವುಗಳನ್ನು ಬೆಳೆಸುತ್ತಾರೆ. ಕೃಷಿಯೇ ಜನರಿಗೆ ಒಂದು ಅಮೂಲ್ಯ ವರ ಎನ್ನಬಹುದು.
ಕೃಷಿ ಮೊದಲಿಗೆ ಮಾಡುವುದು ಅಷ್ಟು ಸುಲಭವಾದ ಕೆಲಸವಲ್ಲ, ಪರಿಶ್ರಮ ಮುಖ್ಯ, ಆದರೆ ಮುಂದೆ ಆ ಪರಿಶ್ರಮ ನಮಗೆ ಎಷ್ಟು ಸುಲಭವಾಗುತ್ತದೆ ಎಂದರೇ ಕೃಷಿಯಲ್ಲಿ ನಮ್ಮ ಒಳ್ಳೆ ಜೀವನವನ್ನು ಸಾಗಿಸಬಹುದು. ಕೃಷಿ ಇಲ್ಲದಿದ್ದರೆ ಮನುಷ್ಯನ ಜೀವನ ಹೇಗೆ ಸಾಗುತ್ತಿತ್ತು ಎಂಬುದು ಯೋಚನೆ ಮಾಡಲು ತಿಳಿಯದು. ಅನಾದಿ ಕಾಲದಿಂದಲ್ಲೂ ನಾವು ಕೃಷಿಯನ್ನೇ ನಂಬಿ ಬಂದವರು. ಎಷ್ಟೇ ಏರಿಳಿತಗಳು ಬಂದರು ಕೃಷಿಯ ಮೇಲೆ ಪರಿಶ್ರಮ ಕಮ್ಮಿ ಮಾಡುವುದಿಲ್ಲ. ಕೃಷಿ ಎಂಬ ಪದ ಜನರ ಹೊಟ್ಟೆಯ ಹಸಿವನ್ನು ಕಮ್ಮಿ ಮಾಡುತ್ತದೆ. ಕೃಷಿಯನ್ನು ದೇವರು ಕೊಟ್ಟ ಒಂದು ಅದ್ಭುತವಾದ ಕೊಡುಗೆ ಎಂದು ಹಳ್ಳಿ ಜನರು ನಂಬುತ್ತಾರೆ. ಒಬ್ಬ ರೈತನ ಬೆವರಿನ ಬೆಲೆ ಸಾರ್ಥಕವಾಗುವುದೇ ಕೃಷಿ ಒಳ್ಳೆ ಸ್ಥಾನ ಪಡೆದಾಗ, ಹಾಗೂ ಮಣ್ಣಿನ ಬೆಲೆ ತಿಳಿಯುತ್ತದೆ. ಭಾರತದಲ್ಲಿ ಕೃಷಿಯೇ ಪ್ರಮುಖವಾದ ಉದ್ಯೋಗ. ಕೆಲವರು ಜೇನಿನ ಕೃಷಿ ಇಂದ ಜೀವನವನ್ನು ಉನ್ನತಗೊಳಿಸಿದವರು ಇದ್ದರೆ. ನಮಗೆ ಎಷ್ಟೇ ಜಮೀನು, ಜಾಗ ಇರಲಿ ಆದರೆ ಅದನ್ನು ನಿರ್ಲಕ್ಷ ಮಾಡದೇ ದುಡಿದರೆ ಕೃಷಿ ಯಾವತ್ತು ಸಹ ಪ್ರಥಮ ಹೆಜ್ಜೆಯಲ್ಲಿ ಇರುತ್ತದೆ. ಕೆಲವರು ತರಕಾರಿ ಕೃಷಿ ಮಾಡಿ ಅದನ್ನು ಪೇಟೆ ಗೆ ಮಾರಿ ಕೃಷಿಯನ್ನು ಉತ್ಪಾದಿಸುತ್ತಿದ್ದಾರೆ.
2019 ರಂದು ಭಯಾನಕ ದಿನಗಳಲ್ಲಿ ಮುಳುಗಿತ್ತು. ಪ್ರವಾಹದ ಅಬ್ಬಾರದಲ್ಲಿ ಊರಿನ ಕೃಷಿಯೇ ಹಾಳಾಯ್ತು. ಕೆಲವರ ಮನೆಯೇ ಕೊಚ್ಚಿ ಹೋಗಿದೆ, ಇನ್ನು ನೀರು ಕೃಷಿಯನ್ನು ಸುಮ್ಮನೆ ಬಿಟ್ಟಿತೆ, ಎಲ್ಲಾ ಅಲ್ಲೋಲ ಕಲ್ಲೋಲವೇ ಆಗಿತ್ತು. ನಮ್ಮ ತೋಟದ ಪರಿಸ್ಥಿತಿ ನೀರು ಪಾಲಗಿತ್ತು. ಅದನ್ನು ಈಗವು ನೆನೆಸಿಕೊಂಡರೆ ಮೈ ಝುಮ್ ಅನ್ನುತೆ.ಕೃಷಿಯೇ ಕಣ್ಣೀರು ಸುರಿಸಿದ ಪರಿಸ್ಥಿತಿ ಕಾದಿತ್ತು. ನಮಗೆ ಅಲ್ಲ ಎಲ್ಲಾ ಮನೆಯ ಪರಿಸ್ಥಿತಿ ಕೂಡ ನೀರು ಪಾಲು ಆಗಿತ್ತು. ಆ ಒಂದು ದಿನ ಭಯಂಕರವಾಗಿತ್ತು. ಎಲ್ಲರೂ ಸಹ ಕಷ್ಟ ಪಟ್ಟು ಕೃಷಿ ಮಾಡಿರುತ್ತಾರೆ, ಆದರೆ ಅದು ಪ್ರಕೃತಿ ವಿಕೋಪ ದಿಂದ ನಾಶವಾದರೆ ಮನುಷ್ಯನಿಗೆ ಏನು ಮಾಡಲು ಸಾಧ್ಯವಿಲ್ಲ. ಇರುವಾಗ ಕೃಷಿಯನ್ನು ಚೆನ್ನಾಗಿ ನೋಡಿ ಕೊಂಡರೆ ಕೃಷಿಯೇ ನಮ್ಮ ಆಸ್ತಿ ಎಂದು ತೋರಿಕೊಳ್ಳಬಹುದು.
-ಅಂಜಲಿ ಮುಂಡಾಜೆ
ಎಸ್ ಡಿ ಯಂ ಕಾಲೇಜು ಉಜಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



