ಸ್ಪಷ್ಟತೆಗೆ ಒಂದು ಹೆಜ್ಜೆ: ಮನೋಜ್‌ ಕಡಬ ಅವರ ‘ಶೆಫಿನ್ಸ್ ಕೆರಿಯರ್ ಅಪೆಕ್ಸ್’ ಪುಸ್ತಕ ಬಿಡುಗಡೆ

Upayuktha
0


ಉಡುಪಿ: ವಿದ್ಯಾರ್ಥಿಗಳ ವೃತ್ತಿ ಜೀವನಕ್ಕೆ ಸ್ಪಷ್ಟತೆ ಮತ್ತು ದಿಕ್ಕು ನೀಡುವ ಮಹತ್ವದ ಹೆಜ್ಜೆಯಾಗಿ, ಪ್ರಸಿದ್ಧ ವೃತ್ತಿ ಮಾರ್ಗದರ್ಶನ ಮತ್ತು ಸಾಫ್ಟ್‌ ಸ್ಕಿಲ್ಸ್ ತರಬೇತುದಾರ  ಮನೋಜ್ ಕಡಬ ಅವರ ಲೇಖನದ ದ್ವಿಭಾಷಾ (ಕನ್ನಡ–ಇಂಗ್ಲಿಷ್) ವೃತ್ತಿ ಮಾರ್ಗದರ್ಶನ ಪುಸ್ತಕ “Shefins Career Apex– The Ultimate Career Guidance Book” ಅನ್ನು ಇಂದು ಪರ್ಕಳ ಹೈಸ್ಕೂಲ್ ಸಭಾಂಗಣ, ಉಡುಪಿಯಲ್ಲಿ ನಡೆದ ಉಡುಪಿ ಜಿಲ್ಲಾ ಹೈಸ್ಕೂಲ್ ಮುಖ್ಯೋಪಾಧ್ಯಾಯರ ಸಭೆಯ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.


ಪುಸ್ತಕವನ್ನು ಡಿಡಿಪಿಐ (ಅಭಿವೃದ್ಧಿ) ಹಾಗೂ ಡಯಟ್ ಉಡುಪಿ ಪ್ರಾಂಶುಪಾಲರಾದ ಡಾ. ಅಶೋಕ ಕಾಮತ್, ಮತ್ತು ಕಿರಣ್ ಹೆಗ್ಡೆ, ಉಡುಪಿ ಜಿಲ್ಲಾ ಹೈಸ್ಕೂಲ್ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರು ಜೊತೆಯಾಗಿ ಬಿಡುಗಡೆಗೊಳಿಸಿದರು.


ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ. ಯೆಲ್ಲಮ್ಮ, (ಉಡುಪಿ ವಲಯ), ನಾಗೇಶ್ (ಬೈಂದೂರು ವಲಯ) ಹಾಗೂ ಉಮಾ (ಬ್ರಹ್ಮಾವರ ವಲಯ) ಅವರು ಗೌರವ ಉಪಸ್ಥಿತರಿದ್ದರು. ಅತಿಥೇಯ ಸಂಸ್ಥೆಯ ಪರವಾಗಿ  ಪರ್ಕಳ ಹೈಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷರಾದ ಅರುಣಾಚಲ ಹೆಗ್ಡೆ, ಮತ್ತು ಪರ್ಕಳ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ  ಆನಂದ ನಾಯಕ್ ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ರೋಟರಿ ಪರ್ಕಳದ ಕಾರ್ಯದರ್ಶಿ ವಿಶ್ವನಾಥ ನಾಯಕ್, ರೇಡಿಯೋ ಮಣಿಪಾಲ್ ಸಮುದಾಯ ರೇಡಿಯೋ ನಿರ್ದೇಶಕರಾದ ಡಾ. ರಶ್ಮಿ ಅಮ್ಮೆಂಬಳ, ಜೆಸಿಐ ವಲಯ 15ರ ಪೂರ್ವ ವಲಯಾಧ್ಯಕ್ಷರಾದ ರಾಜೇಂದ್ರ ಭಟ್, ಶೆಫಿನ್ಸ್ ಸಂಸ್ಥೆಯ ಸಹ ಸ್ಥಾಪಕರಾದ  ಶೆರ್ಲಿ ಮನೋಜ್, ಹಾಗೂ ಪುಸ್ತಕದ ಲೇಖಕರಾದ ಮನೋಜ್ ಕಡಬ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ. ಅಶೋಕ ಕಾಮತ್ ಅವರು ಶಾಲಾ ಹಂತದಲ್ಲಿಯೇ ವೈಜ್ಞಾನಿಕ, ವ್ಯವಸ್ಥಿತ ಹಾಗೂ ಪ್ರಾಯೋಗಿಕ ವೃತ್ತಿ ಮಾರ್ಗದರ್ಶನ ಅತ್ಯವಶ್ಯಕ ಎಂದು ತಿಳಿಸಿ, ಪಠ್ಯಾಧ್ಯಯನದ ಪೂರಕವಾಗಿ ವೃತ್ತಿ ಮಾರ್ಗದರ್ಶನ ತರಬೇತಿಯು ಸರಕಾರ ಸೂಚಿಸುವ ಅತ್ಯವಶ್ಯಕ ತರಬೇತಿಯಾಗಿದ್ದು, ಪುಸ್ತಕವು ಈ ಅವಶ್ಯಕತೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ ಹಾಗೆಯೇ ಎಲ್ಲಾ ಶಾಲೆಗಳು ತಮ್ಮ ಲೈಬ್ರೈರಿಯಲ್ಲಿ  ಈ ಪುಸ್ಕವನ್ನು ಇಟ್ಟುಕೊಂಡಲ್ಲಿ ಬಹಳ ಉಪಯುಕ್ತವಾಗಲಿದೆ ಎಂದರು. 


ಕಿರಣ್ ಹೆಗ್ಡೆ ಅವರು ಪುಸ್ತಕದ ಪ್ರಾಯೋಗಿಕ ಉಪಯೋಗಿತೆಯನ್ನು ವಿವರಿಸಿ, ಮುಖ್ಯೋಪಾಧ್ಯಾಯರು, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಇದು ವಿಶ್ವಾಸಾರ್ಹ ಮಾರ್ಗದರ್ಶಕವಾಗಲಿದೆ ಎಂದು ಅಭಿಪ್ರಾಯಪಟ್ಟರು. 


ಈ ಪುಸ್ತಕವು 2,500ಕ್ಕೂ ಹೆಚ್ಚು ವೃತ್ತಿ ಅವಕಾಶಗಳ ವಿವರ, 31 ಪ್ರೇರಣಾದಾಯಕ ಹಾಗೂ ಪಾಠಾಧಾರಿತ ನೈಜ ಜೀವನ ಕಥೆಗಳು, ಸ್ವಯಂ ಮೌಲ್ಯಮಾಪನ, ಮಾರ್ಗದರ್ಶನ ಮತ್ತು ಗುರಿ ನಿಗದಿ, SMART ಗುರಿಗಳ ಮೂಲಕ ವೃತ್ತಿ ಯಶಸ್ಸು, ಹಾಗೂ ಪೋಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಉಪಯುಕ್ತ ಚೆಕ್‌ಲಿಸ್ಟ್‌ಗಳನ್ನು ಒಳಗೊಂಡಿದೆ.


ಶೆಫಿನ್ಸ್ ಕ್ಯಾರಿಯರ್ ಏಪೆಕ್ಸ್ ಪುಸ್ತಕವು ಉದ್ಯೋಗಾರ್ಹತೆಯ ಸಾಫ್ಟ್‌ ಸ್ಕಿಲ್ಸ್, ಭಾವನೆ–ಕೌಶಲ್ಯ–ಜ್ಞಾನ (Attitude–Skill–Knowledge) ಸಮತೋಲನ, ತರಗತಿಗಿಂತ ಹೊರಗಿನ ಜೀವನ ಕೌಶಲ್ಯಗಳು, ಹಾಗೂ ಸ್ವಯಂ ಅಧ್ಯಯನ ಸ್ಪೋಕನ್ ಇಂಗ್ಲಿಷ್ ಸಲಹೆಗಳು ಎಂಬ ಮಹತ್ವದ ಅಂಶಗಳನ್ನು ಒಳಗೊಂಡಿದೆ.


ಇದಲ್ಲದೆ, 10ನೇ ತರಗತಿ / SSLC ಬಳಿಕ, PUC (ವಿಜ್ಞಾನ / ಕಲಾ / ವಾಣಿಜ್ಯ), ಸಾಮಾನ್ಯ ಪದವಿ, ಹಾಗೂ ವೃತ್ತಿಪರ ಪದವಿ ನಂತರದ ವೃತ್ತಿ ಅವಕಾಶಗಳು, ಡಿಪ್ಲೋಮಾ ಮತ್ತು ಪ್ರಮಾಣಪತ್ರ ಕೋರ್ಸ್‌ಗಳು, ಐಟಿಐ ಹಾಗೂ ಎಂಜಿನಿಯರಿಂಗ್ ಆಧಾರಿತ ಕೋರ್ಸ್‌ಗಳು, ಉದ್ಯೋಗಮುಖಿ ಮತ್ತು ಉದ್ಯಮಮುಖಿ ಶಿಕ್ಷಣ ಮಾರ್ಗಗಳು, ಇಂಟರ್ನ್‌ಶಿಪ್‌ಗಳು – ವಾಸ್ತವಿಕ ಲೋಕದ ಮೊದಲ ಹೆಜ್ಜೆ, ಮತ್ತು ಸ್ವಂತ ಉದ್ಯಮ ಆರಂಭಿಸುವ ವಿಧಾನ ಹಾಗೂ ಅವಶ್ಯಕತೆಗಳು ಎಂಬ ವಿಷಯಗಳನ್ನು ಸಮಗ್ರವಾಗಿ ವಿವರಿಸುತ್ತದೆ.


ಪುಸ್ತಕವು ಹೈಸ್ಕೂಲ್ ಮತ್ತು PUC ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳು, ವಿದೇಶ ಅಧ್ಯಯನ– ಜಾಗತಿಕ ಅವಕಾಶಗಳ ದ್ವಾರ, ವಿದೇಶ ಅಧ್ಯಯನ ಪೂರ್ವ ತಯಾರಿ ಮಾರ್ಗದರ್ಶಿ, ಭಾರತೀಯ ಪಾಸ್‌ಪೋರ್ಟ್ ಅರ್ಜಿ ವಿಧಾನ, ಹಾಗೂ ವಿದ್ಯಾರ್ಥಿ ವೀಸಾ ಪ್ರಕ್ರಿಯೆ ಕುರಿತಂತೆ ಹಂತ ಹಂತದ ಮಾಹಿತಿಯನ್ನು ನೀಡುತ್ತದೆ. ಜೊತೆಗೆ, ರೆಸ್ಯೂಮ್ ನಿರ್ಮಾಣ– ಮೊದಲ ಅಭಿಪ್ರಾಯ, ಹಾಗೂ ವಿದ್ಯಾರ್ಥಿಗಳಿಗಾಗಿ ಅತ್ಯುತ್ತಮ ವೃತ್ತಿ ಸಂಪನ್ಮೂಲ ವೆಬ್‌ಸೈಟ್‌ಗಳ ಪಟ್ಟಿ ಕೂಡ ಇದೆ ಎಂದು ಲೇಖಕರಾದ ಮನೋಜ್ ಕಡಬ ತಿಳಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top