ಪುಸ್ತಕವನ್ನು ಮಾನವ ಜೀವನದ ಕೈಗನ್ನಡಿ ಎಂದರೆ ತಪ್ಪಾಗುವುದಿಲ್ಲ. ಕೈಗನ್ನಡಿಯಲ್ಲಿ ಮುಖ ಕಡಂತೆ, ಪುಸ್ತಕದಲ್ಲಿ ನಮ್ಮ ಜೀವನದ ಸತ್ಯಗಳು, ಮೌಲ್ಯಗಳು, ಭಾವನೆಗಳು ಮತ್ತು ಜ್ಞಾನ ಗೋಚರಿಸುತ್ತವೆ. ಮನುಷ್ಯನ ನಿಜಸ್ವರೂಪವನ್ನು ಅರಿಯುವಲ್ಲಿ, ಬದುಕಿನ ಮಾರ್ಗವನ್ನು ಸರಿಯಾಗಿ ಹಿಡಿಯುವಲ್ಲಿ ಪುಸ್ತಕಗಳು ಮಹತ್ವದ ಪಾತ್ರ ವಹಿಸುತ್ತವೆ.
ಪುಸ್ತಕವೆಂದರೆ ಸಂಗ್ರಹಿಸಿದ ಜ್ಞಾನ, ಅನುಭವ, ಕಲ್ಪನೆ, ಭಾವನೆ, ಸಂಶೋಧನೆ ಮತ್ತು ಕಥನವನ್ನು ಬರಹದ ರೂಪದಲ್ಲಿ ಒಗ್ಗೂಡಿಸಿ ನೀಡುವ ಸಂಕಲನ. ಪುಸ್ತಕಗಳು ಮನಸ್ಸಿಗೆ ಬೆಳಕು, ಕಲ್ಪನೆಗೆ ಚುರುಕು, ಬದುಕಿಗೆ ದಾರಿಗೆಳಿಸುವ ಮಹತ್ವದ ಮಾಧ್ಯಮ. ಯೋಚನೆ ಬದಲಾಗಲು ಒಂದು ಪುಸ್ತಕ ಸಾಕು ಸಾಹಿತ್ಯದಿಂದ ಹಿಡಿದು ನಮ್ಮ ನೈಜ್ಯ ಘಟನೆಗಳ ಕಾದಂಬರಿಗಳು ಹಾಗೂ ನಮ್ಮ ಕಲಿಕೆಗೆ ಸಾಯುವ ಎಲ್ಲಾ ಪುಸ್ತಕಗಳು ಎಂದು ಜೀವನದ ದಾರಿ ತಪ್ಪಿಸುವುದಿಲ್ಲ.
ಮಾನವನ ಜೀವನ, ಸಮಾಜ, ಸಂಭಂದ, ಘಟನೆಗಳು, ಭಾವನೆಗಳು ಇವನ್ನೆಲ್ಲ ಕಲ್ಪನೆಯ ಮೂಲಕ ಕಥೆಯ ರೂಪದಲ್ಲಿ ಹೇಳುವ ದೊಡ್ಡ ಸಾಹಿತ್ಯ. ಪಾತ್ರ, ಘಟನೆ, ಸಂಭಾಷಣೆಗಳ ಮೂಲಕ ಓದುಗನನ್ನು ಜಗತ್ತಿನೊಳಕ್ಕೆ ಕರೆದುಕೊಂಡು ಹೋಗುತ್ತದೆ. ಪುಸ್ತಕಗಳಲ್ಲಿ ಜೀವನದ ನಿಜವಾದ ಅರ್ಥವಿದೆ. ಪುಸ್ತಕಗಳು ನಮ್ಮ ಬದುಕನ್ನು ಪ್ರತಿಬಿಂಬಿಸುವ ಕನ್ನಡಿಯಂತೆ; ಜ್ಞಾನ, ಮೌಲ್ಯ, ಸತ್ಯ ಮತ್ತು ಅನುಭವಗಳನ್ನು ನಮಗೆ ತೋರಿಸುತ್ತವೆ. ಓದುವಿಕೆ ಮೂಲಕ ನಾವು ನಮ್ಮ ಗುಣ–ದೋಷಗಳನ್ನು ಅರಿತು, ಒಳ್ಳೆಯ ಬದುಕಿನ ದಾರಿಗೆ ಹೆಜ್ಜೆ ಹಾಕುತ್ತೇವೆ. ವ್ಯಕ್ತಿತ್ವ ವಿಕಾಸಕ್ಕೆ, ಚಿಂತನೆಗೆ, ಮತ್ತು ಮನಸ್ಸಿನ ಬೆಳವಣಿಗೆಗೆ ಪುಸ್ತಕಗಳು ಅವಶ್ಯಕ. ಆದ್ದರಿಂದ ಪುಸ್ತಕವು ಬದುಕಿನ ದೀಪವೂ, ಕೈಗನ್ನಡಿಯೂ ಎರಡು ಆಗಿದೆ.
ಪುಸ್ತಕ ಓದುವುವರಿಂದ ನನ್ನಲ್ಲಿ ಆದ ಬದಲಾವಣೆಗಳು
ಪುಸ್ತಕ ಓದುವ ಅಭ್ಯಾಸ ನನ್ನ ಜೀವನದಲ್ಲಿ ಹಲವಾರು ಉತ್ತಮ ಬದಲಾವಣೆಗಳನ್ನು ಆದವು. ಮೊದಲು, ನನ್ನ ಚಿಂತನೆ ಮತ್ತು ದೃಷ್ಟಿಕೋನ ಬದಲಾಯಿತ್ತು, ಪ್ರಪಂಚವನ್ನು ಹೊಸ ಕೋನಗಳಿಂದ ನೋಡಲು ಕಲಿತೆ. ಓದುವಿಕೆ ಮನಸ್ಸಿಗೆ ಶಾಂತಿ ನೀಡಿತ್ತು, ಒತ್ತಡ ಕಡಿಮೆ ಮಾಡಿದವು.
ಒಟ್ಟಾರೆ, ಪುಸ್ತಕಗಳು ನನ್ನ ಬದುಕಿಗೆ ಬೆಳಕು ನೀಡಿ, ಬಾಹ್ಯ ಜ್ಞಾನ ಮತ್ತು ಆಂತರಿಕ ಮನೋವಿಕಾಸ ಎರಡನ್ನೂ ಬದಲಾವಣೆ ಕಾರಣವಾದವು.
ಕೊನೆಗೆ ನನ್ನಲ್ಲಿ ಮೂಡಿದ ಭಾವನೆ ಒಂದೇ, "ಪುಸ್ತಕವನ್ನು ಓದಿದಷ್ಟು ನಾವು ನಮ್ಮನ್ನೇ ಹೆಚ್ಚು ಸ್ಪಷ್ಟವಾಗಿ ಕಾಣುತ್ತೇವೆ.”
- ಚೇತನ್ ಸಜ್ಜನ,
ಬೆಳ್ಳಿಹಾಳ್ (ರಾಯಚೂರು)
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


