ಡಿ.16-ಜ.15: ಶ್ರೀ ಲಾಲ್ ದಾಸ್ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ 29ನೇ ಧನುರ್ಮಾಸ ಸಂಗೀತೋತ್ಸವ

Chandrashekhara Kulamarva
0


ಬೆಂಗಳೂರು: ಬಳೇಪೇಟೆಯಲ್ಲಿರುವ ಪುರಾತನ ದೇವಸ್ಥಾನವಾದ ಲಾಲ್ ದಾಸ್ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಶ್ರೀ ಲಾಲ್ ದಾಸ್ ಭಕ್ತಾಂಜನೇಯ ಸ್ವಾಮಿ ಭಜನೆ ಮಂಡಳಿ ನಡೆಸುತ್ತಿರುವ 29ನೇ ವರ್ಷದ ಧನುರ್ಮಾಸ ಸಂಗೀತೋತ್ಸವವು ಡಿಸೆಂಬರ್ 16 ರಿಂದ ಜನವರಿ 15ರ ವರೆಗೂ ಹಮ್ಮಿಕೊಂಡಿದ್ದು ವಿವರಗಳು ಈ ರೀತಿ ಇವೆ ; ಪ್ರತಿದಿನ ಬೆಳಗ್ಗೆ 5-30 ರಿಂದ 6-30ರ ವರೆಗೆ ಶ್ರೀ ಭಕ್ತ ಆಂಜನೇಯ ಸ್ವಾಮಿ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ಇರುತ್ತದೆ.


ಗಾನ ಸಂಗೀತ ಮತ್ತು ವಾದ್ಯ ಸಂಗೀತ ಕಾರ್ಯಕ್ರಮಗಳು : ಪ್ರತಿದಿನ ಬೆಳಗ್ಗೆ 6-30 ರಿಂದ 7-30. ಡಿಸೆಂಬರ್ 16ರಂದು ವಿ|| ಶ್ರೀಕಿರಣ್ ಹಾಗೂ ನಂದನ್ ಜೋಷಿಯಾರ್ (ಗಾಯನ), ಡಿಸೆಂಬರ್ 17ರಂದು ವಿ|| ಶ್ರೀಮತಿ ಇಂದಿರಾ ದತ್ತಾತ್ರೇಯ ಶರ್ಮಾ (ಗಾಯನ), ಡಿಸೆಂಬರ್ 18ರಂದು ವಿ|| ಶ್ರೀ ತಿರುಮಲೆ ಶ್ರೀನಿವಾಸ್ (ಗಾಯನ), ಡಿಸೆಂಬರ್ 19ರಂದು ಕು|| ಮನಸ್ವಿ ಜಿ. ಕಶ್ಯಪ್ (ಗಾಯನ), ಡಿಸೆಂಬರ್ 20ರಂದು ವಿ|| ಶ್ರೀಮತಿ ಮಾನಸ ಕುಲಕರ್ಣಿ (ಗಾಯನ), ಡಿಸೆಂಬರ್ 21ರಂದು ವಿ|| ರಾಜಪ್ಪ (ಗಾಯನ), ಡಿಸೆಂಬರ್ 22ರಂದು ವಿ|| ನಾಗೇಶ್ (ಗಾಯನ), ಡಿಸೆಂಬರ್ 23ರಂದು ವಿ|| ಸಿ. ರಮೇಶ್ (ಗಾಯನ), ಡಿಸೆಂಬರ್ 24ರಂದು ವಿ|| ಶ್ರೀಮತಿ ರಕ್ಷಾ ರಾವ್ (ಗಾಯನ), ಡಿಸೆಂಬರ್ 25ರಂದು ವಿ|| ಜಿ ಎಸ್ ನಾಗರಾಜ್ ಮತ್ತು ತಂಡ (ತಾಳವಾದ್ಯ), ಡಿಸೆಂಬರ್ 26ರಂದು ಕು||ಅನನ್ಯ ಬೆಳವಾಡಿ (ಗಾಯನ), ಡಿಸೆಂಬರ್ 27ರಂದು ವಿ|| ಆನೂರ್ ಸುನಾದ್ ಹಾಗೂ ತಂಡ (ತಾಳವಾದ್ಯ), ಡಿಸೆಂಬರ್ 28ರಂದು ವಿ|| ಶ್ರೀಮತಿ ಸರಳಾ ರಾಘವೇಂದ್ರ (ಗಾಯನ), ಡಿಸೆಂಬರ್ 29ರಂದು ವಿ|| ಚಿಂತಲಪಲ್ಲಿ ವಿ ಶ್ರೀನಿವಾಸ್ (ಗಾಯನ), ಡಿಸೆಂಬರ್ 30ರಂದು ವೈಕುಂಠ ಏಕಾದಶಿ, ಡಿಸೆಂಬರ್ 31ರಂದು ವಿ|| ನಾಗೇಶ್ ಮತ್ತು ತಂಡ (ಗಾಯನ).


ಜನವರಿ 1ರಂದು ವಿ|| ಎಲ್ ವಿ ಮುಕುಂದ್ ಮತ್ತು ತಂಡ (ಕೊಳಲು ವಾದನ), ಜನವರಿ 2ರಂದು ವಿ|| ನಂದಕುಮಾರ್ ಮತ್ತು ತಂಡ (ಕೊಳಲು ವಾದನ), ಜನವರಿ 3ರಂದು ವಿ|| ಶ್ರೀಮತಿ ರೇಖಾ ಪ್ರಸಾದ್ (ಗಾಯನ), ಜನವರಿ 4ರಂದು ವಿ|| ಶ್ರೀಮತಿ ಸುಜಾತಾ ಮಂಜುನಾಥ್ (ಗಾಯನ), ಜನವರಿ 5ರಂದು ವಿ|| ಶ್ರೀಮತಿ ಅನುಕೃಪಾ ರೌಡೂರ್, ಬಳ್ಳಾರಿ (ಗಾಯನ), ಜನವರಿ 6ರಂದು ವಿ|| ವಿಷ್ಣು ವೆಂಕಟೇಶ್ (ಮ್ಯಾಂಡೋಲಿನ್ ವಾದನ), ಜನವರಿ 7ರಂದು ವಿ|| ಶ್ರೀಮತಿ ಅಂಜಲಿ ಶ್ರೀರಾಮ್ (ಗಾಯನ), ಜನವರಿ 8ರಂದು ವಿ|` ಅನಂತಪದ್ಮನಾಭ (ಗಾಯನ), ಜನವರಿ 9ರಂದು ವಿ|| ಆನೂರ್ ಅನಂತ ಕೃಷ್ಣ ಶರ್ಮಾ ಹಾಗೂ ಮೇಧಾ ಮಂಜುನಾಥ್ (ಗಾಯನ), ಜನವರಿ 10ರಂದು ವಿ|| ಶ್ರೀಮತಿ ಅಪೇಕ್ಷ ಅಪ್ಪಾಲ (ಗಾಯನ), ಜನವರಿ 11ರಂದು  ಬೆಂಗಳೂರು ಸಹೋದರರಾದ ವಿ|| ಅಶೋಕ್ ಮತ್ತು ವಿ|| ಹರಿಹರನ್ (ಗಾಯನ), ಜನವರಿ 12ರಂದು ವಿ|| ಪಟ್ಟಾಭಿರಾಮ್ ಪಂಡಿತ್ (ಗಾಯನ), ವಿ|| ವೆಂಕಟೇಶ್ ಜೋಷಿಯಾರ್ (ಪಿಟೀಲು), ವಿ|| ಎಚ್ ಎಸ್ ಸುಧೀoದ್ರ (ಮೃದಂಗ), ಜನವರಿ 13ರಂದು ಶ್ರೀರಾಗ ಮ್ಯೂಸಿಕ್ ಶಾಲೆ, ಜನವರಿ 14ರಂದು ವಿ|| ಸ್ವಾಮೀಜಿ (ಗಾಯನ), ಜನವರಿ 15ರಂದು ನಗರ ಸಂಕೀರ್ತನೆ ಮತ್ತು ಸಮಾರೋಪ ಸಮಾರಂಭ ಜರುಗಲಿದೆ ಎಂದು ಮಂಡಲಿಯ ಮುಖ್ಯಸ್ಥರಾದ ಮೃದಂಗ ವಿದ್ವಾನ್ ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಅವರು ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top