ಸುರತ್ಕಲ್: ಸುರತ್ಕಲ್‌ನ ಎಸ್. ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ವತಿಯಿಂದ ವಿಶುಕುಮಾರ್ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ಟ್ರಸ್ಟ್ ನ ಸದಸ್ಯ ಹಾಗೂ ಹಿರಿಯ ಸಂಶೋಧಕ ಬೆನೆಟ್ ಅಮ್ಮನ್ನರನ್ನು ಗೌರವಿಸಲಾಯಿತು.
ಟ್ರಸ್ಟಿನ ಅಧ್ಯಕ್ಷೆ ಮತ್ತು ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಮಾತನಾಡಿ ಸಾಹಿತ್ಯ ಮತ್ತು ಸಂಶೋಧನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬೆನೆಟ್ ಅಮ್ಮನ್ನ ಅವರ ಸೇವೆಗೆ ಸಂದಿರುವ ಗೌರವ ಇದಾಗಿದೆ ಎಂದರು.
ಬೆನೆಟ್ ಅಮ್ಮನ್ನ ಅವರು ಮಾತನಾಡಿ, ಗ್ರಂಥಪಾಲ ಎಂದರೆ ಕೇವಲ ಗ್ರಂಥ ಗಳನ್ನು ಕಾಯುವವ ನಾಗಿರದೆ ಜ್ಞಾನಾರ್ಜನೆ ಯ ಹಸಿವಿನಿಂದ ಆಗಮಿಸುವ ಓದುಗನ ಹಸಿವನ್ನು ತಣಿಸಲು ನೆರವಾಗುವ ಮಾರ್ಗದರ್ಶಕ ಎಂಬ ಸಂಶೋಧಕ ಶ್ರೀನಿವಾಸ ಹಾವನೂರು ಅವರ ಮಾತನ್ನು ನೆನಪಿಸಿ ಅದರಂತೆ ನಡೆದಿದ್ದೇನೆ ಎಂದರು. ಟ್ರಸ್ಟಿನ ಕಾರ್ಯದರ್ಶಿ ಕೃಷ್ಣ ಮೂರ್ತಿ ಪ್ರಗತಿಪರ ಚಿಂತನೆಯ ಸಾಹಿತಿಯಾಗಿದ್ದ ವಿಶುಕುಮಾರ್ ಅವರ ನೆನ ಪಿನ ಪ್ರಶಸ್ತಿ ಬೆನೆಟ್ ಅಮ್ಮನ್ನ ಪಡೆಯುತ್ತಿರುವುದು ಅಭಿಮಾನ ದ ವಿಚಾರವಾಗಿದೆ ಎಂದರು. ಟ್ರಸ್ಟಿನ ಕೋಶಾಧಿಕಾರಿ ಡಾ. ಜ್ಯೋತಿ ಚೇಳಾರು ಸ್ವಾಗತಿಸಿದರು. ಸದಸ್ಯೆ ಸುಜಾತ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


