ಉಡುಪಿ: ಕೇದಾರೋತ್ಥಾನ ಟ್ರಸ್ಟ್ (ರಿ.) ಉಡುಪಿ ಮೂಲಕ ಉಡುಪಿಯಲ್ಲಿ ಪ್ರಾರಂಭವಾದ ಹಡಿಲು ಭೂಮಿ ಕೃಷಿ ಅಭಿಯಾನ ಈಗ ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ (ರಿ.) ಉಡುಪಿ ಮೂಲಕ ಮುಂದುವರಿದಿದೆ. ರೈತರು ಮತ್ತು ಹಲವಾರು ಸ್ವಯಂ ಸೇವಕರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಆ ಸ್ವಯಂ ಸೇವಕರಿಗೆ ಮತ್ತು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ (ರಿ.) ಉಡುಪಿ ಮೂಲಕ ಭತ್ತದ ಕಟಾವಿನ ಯಂತ್ರವನ್ನು ಖರೀದಿಸಿ ಕಡಿಮೆ ದರದಲ್ಲಿ ಭತ್ತ ಕಟಾವಿಗೆ ಯಂತ್ರವನ್ನು ಒದಗಿಸಲಾಗುತ್ತಿದೆ.
ಈ ಹಡಿಲು ಭೂಮಿ ಕೃಷಿ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಿಕೇಶ್ ಪೂಜಾರಿ ಕಡೆಕಾರ್ ಅವರ ನೇತೃತ್ವದಲ್ಲಿ ಕಡೆಕಾರು ಪ್ರದೇಶದಲ್ಲಿ ಭತ್ತದ ಕಟಾವು ನಡೆಯಿತು. ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ (ರಿ.) ಮೂಲಕ ಪ್ರೋತ್ಸಾಹಿಸಲ್ಪಟ್ಟ ರಿಕೇಶ್ ಪೂಜಾರಿ ಕಡೆಕಾರ್ ತಂಡ ಈ ಕೃಷಿ ಕಾರ್ಯದಲ್ಲಿ ನಡೆಸುವ ಚಾಪೆ ನೇಜಿ ಮತ್ತು ಭತ್ತದ ನಾಟಿ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದು, ಈಗ ಭತ್ತದ ಕಟಾವು ಕಾರ್ಯಕ್ಕೆ ಅನುಕೂಲ ಕಲ್ಪಿಸಲು ಹೊಸ ಕಟಾವು ಯಂತ್ರ ನೀಡಲಾಗಿದೆ. ಆ ಯಂತ್ರದ ಕಾರ್ಯವನ್ನು ಕೆ. ರಘುಪತಿ ಭಟ್ ಅವರು ವೀಕ್ಷಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

