ಕಾಲೇಜಿನತ್ತ ನನ್ನ ಪಯಣ ಬಸ್ಸಿನಲ್ಲಿ ದಿನ ಸಾಗುತ್ತಿತ್ತು. ಬಸ್ಸಿನಲ್ಲಿ ನನಗೆ ಕುಳಿತುಕೊಳ್ಳಲು ಸೀಟ್ ಇಲ್ಲದಿದ್ದರೂ ಅಷ್ಟು ಜನ ಮಂದಿಯಲ್ಲಿ ಉಸಿರಾಡಲು ಆಗದಿದ್ದರೂ. ನಾನು ಮಾತ್ರ ಎಲ್ಲರನ್ನು ನುಸುಳಿಕೊಂಡು ಬಸ್ಸಿನಲ್ಲಿ ಇರುತ್ತಿದ್ದೆ.
ಆ ಬಸ್ಸಿನಲ್ಲಿ ಜನ ತುಂಬಿ ನಿಧಾನವಾಗಿ ಚಲಿಸುತ್ತಿತ್ತು. ನಿಧಾನ ಗತಿಯಲ್ಲಿ ಹೋಗುತ್ತಿರುವಾಗ ನಾನೊಂದು ಮನೆಯನ್ನು ಕಂಡೆ. ಆ ಮನೆ ನೋಡಲು ಸುಂದರವಾಗಿ ಹಚ್ಚ ಹಸಿರು ನಡುವೆ ಆ ಮನೆಯನ್ನು ಕಂಡೆ. ವಿಶಾಲವಾದ ವಾತಾವರಣದಲ್ಲಿದ್ದ ಒಂದೇ ಒಂದು ಮನೆ. ಅಂಗಳದಲ್ಲಿ ತುಂಬಿದ ಮಳೆಯ ನೀರು, ಆ ನೀರಿನಲ್ಲಿ ಬೆಳೆದು ಬಂದಿರುವ ಹುಲ್ಲುಗಳು. ಆದರೂ ಆ ಹಂಚಿನ ಮನೆ ತುಂಬಾ ಸುಂದರವಾಗಿ ನನ್ನ ಮನಸ್ಸನ್ನು ಮುಟ್ಟುವಂತೆ ಇತ್ತು.
ಮನೆಯ ಮುಂಭಾಗದಲ್ಲಿ ಹಚ್ಚ ಹಸಿರಾಗಿರುವ ಗದ್ದೆ. ಆ ಗದ್ದೆಯನ್ನು ಕಂಡಾಗ ಏನೋ ಒಂದು ರೀತಿಯ ಸಂತೋಷ ನನ್ನಲ್ಲಿರುವ ಬೇಸರ ವನ್ನು ದೂರ ಮಾಡಿದ ಹಾಗೆ ಇತ್ತು. ಮನೆಯ ಪಕ್ಕ ಬಚ್ಚಲು ಮನೆ. ಸಂಜೆ ಹೊತ್ತಿನಲ್ಲಿ ಹೊಗೆ ತುಂಬಿರುವ ಹಂಚು ಕಂಡಾಗ ಮಲೆನಾಡಿನ ಬೆಟ್ಟ ಗುಡ್ಡಗಳಲ್ಲಿ ಮಂಜು ತುಂಬಿದ ರೀತಿ. ಆ ಪುಟ್ಟದಾದ ಮನೆಯಲ್ಲಿ ನಾ ಕಂಡ ವ್ಯಕ್ತಿಗಳೆಂದರೆ ವಯಸ್ಸಾದ ಇಬ್ಬರು ಅಜ್ಜ-ಅಜ್ಜಿ. ಅವರನ್ನು ಯಾವಾಗಲೂ ನೋಡಲು ಆಗುತ್ತಿರಲಿಲ್ಲ ಏಕೆಂದರೆ ನಾ ಬರುತ್ತಿದ್ದ ಬಸ್ಸಿನಲ್ಲಿ ಜನರು ತುಂಬಿ ತುಳುಕುತ್ತಿದ್ದಾರೆ.
ಅವರನ್ನು ಅಪರೂಪಕ್ಕೂ ಕಂಡರು ಅವರು ಒಟ್ಟಿಗೆ ಕುಳಿತು ಮಾತನಾಡುತ್ತಿರುವುದು. ಅವರ ಸಂತೋಷವನ್ನು ಹಂಚಿಕೊಳ್ಳುತ್ತಿರುವುದನ್ನು ನಾ ಕಂಡೆ. ಇತ್ತೀಚಿನ ದಿನಗಳಲ್ಲಿ ಪ್ರೀತಿ ಎಂಬುದು ಸಮಯ ಬದಲಾದ ಹಾಗೆ ಸಮಯ ಬದಲಾದರು ಇವರಿಬ್ಬರ ಪ್ರೀತಿ ಕಾಳಜಿ ಎಂದಿಗೂ ಕಡಿಮೆಯಾದದ್ದನ್ನು ನಾ ಕಂಡಿರಲಿಲ್ಲ. ವಯಸ್ಸು ಎಂಬುದು ಒಂದು ಸಂಖ್ಯೆಯಷ್ಟು ಪ್ರೀತಿಗೆ ಸೌಂದರ್ಯ ಮುಖ್ಯ ಅಲ್ಲ ಒಳ್ಳೆಯ ಮನಸ್ಸು ಎಂಬುದಕ್ಕೆ ಇವರಿಬ್ಬರೇ ಸಾಕ್ಷಿ. ಪ್ರೀತಿ ಅಂದರೆ ಒಬ್ಬರು ಕಾಯುವ ಇನ್ನೊಬ್ಬರು ಹತ್ತಿರ ಇರುವುದು. ನಗು, ಸಿಟ್ಟು, ಸಮಾಧಾನ, ಎಲ್ಲವನ್ನು ಒಟ್ಟಿಗೆ ಹಂಚಿಕೊಳ್ಳುವುದು ಒಂದು ನಿಜವಾದ ಪ್ರೀತಿ ಎಂಬುದನ್ನು ನಾನು ಇವರಿಬ್ಬರಲ್ಲಿ ಕಂಡೆ.
ಅವರಿಬ್ಬರ ಪ್ರೀತಿಯಲ್ಲಿ ಆಧಾರ ಮಾತಿನಲ್ಲಿ ಸಾಧುತನ ಜವಾಬ್ದಾರಿಯ ಜೊತೆಗೆ ಸ್ನೇಹವೂ ಇತ್ತು. ಅದರಲ್ಲೂ ಸಮಾಧಾನದ ಜೊತೆಗೆ ಒಪ್ಪಿಗೆಯು ಇತ್ತು.
-ಸ್ವಾತಿ.ಡಿ
ಪ್ರಥಮ ಬಿ ಎ
ಪತ್ರಿಕೋದ್ಯಮ ವಿಭಾಗ


