ಯಕ್ಷಗಾನ ಅರ್ಥಧಾರಿ ಶಂಭು ಶರ್ಮ ನಿಧನ, ಯಕ್ಷಾಂಗಣದಿಂದ ಭಾವ ನಮನ

Chandrashekhara Kulamarva
0


ಮಂಗಳೂರು: ಯಕ್ಷಗಾನ ರಂಗದ ಪ್ರಮುಖ ಅರ್ಥಧಾರಿ, ವೇಷಧಾರಿ, ಹಳೆ ತಲೆಮಾರಿನ ಸಮರ್ಥ ಕೊಂಡಿ, ಸ್ನಾತಕೋತ್ತರ ಪದವೀಧರ, ಅರ್ಥಶಾಸ್ತ್ರದ ತಜ್ಞ ಪ್ರಾಧ್ಯಾಪಕ ಶಂಭು ಶರ್ಮ ವಿಟ್ಲ ಅವರ ನಿಧನಕ್ಕೆ ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸಂತಾಪ ವ್ಯಕ್ತಪಡಿಸಿದ್ದಾರೆ.


ಸುದೀರ್ಘ ಕಾಲ ಯಕ್ಷಗಾನ ಆಟ- ಕೂಟಗಳಲ್ಲಿ ನಮ್ಮೊಂದಿಗಿದ್ದ, ಯಕ್ಷಾಂಗಣದ ಎಲ್ಲಾ ಸಪ್ತಾಹಗಳಲ್ಲೂ ಭಾಗವಹಿಸಿದ್ದ ಅಸಾಮಾನ್ಯ ಕಲಾವಿದ ಶಂಭು ಶರ್ಮ ವಿಟ್ಲ ಅವರ ನಿಧನ ವಾಕ್ಕೋವಿದರ ಅರ್ಥ ಪ್ರಪಂಚದಲ್ಲಿ ಬಹು ದೊಡ್ಡ ನಿರ್ವಾತವನ್ನು ಸೃಷ್ಟಿಸಿದೆ. ಅವರ ಚೇತನಕ್ಕೆ ಸದ್ಗತಿಯಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ. 


إرسال تعليق

0 تعليقات
إرسال تعليق (0)
To Top