ದೇಶದ ಬೆನ್ನೆಲುಬು ಎನ್ನುವ ಹೆಗ್ಗಳಿಕೆಗೆ ಪಾತ್ರರು ದೇಶದ ಎರಡು ಜನ. ಒಬ್ಬರು ದೇಶದ ಸೈನಿಕರು ಇನ್ನೊಬ್ಬರು ರೈತರು. ಇವರೀರ್ವರು ನೆಮ್ಮದಿಯಲ್ಲಿದ್ದರೆ ದೇಶ ಸುವ್ಯವಸ್ಥೆಯಲ್ಲಿ ನಡೆಯುತ್ತದೆ. ಸೈನಿಕರ ನೆಮ್ಮದಿಯಾಗಿದ್ದರೆ ನಾವು ನೆಮ್ಮದಿಯ ನಿದ್ದೆ ಮಾಡುತ್ತೇವೆ ರೈತರು ನೆಮ್ಮದಿಯಲ್ಲಿ ಇದ್ದರೆ ನಮ್ಮ ಹೊಟ್ಟೆ ತಣ್ಣಗಿರುತ್ತದೆ. ಈಗ ಇರುವ ಪ್ರಶ್ನೆ ರೈತರು ನೆಮ್ಮದಿಯಲ್ಲಿ ಇದ್ದರೆ ಎಂದು. ಹೊಲದಲ್ಲಿ ದುಡಿಯುತ್ತಾ ಇರಬೇಕಾದ ರೈತರು ವಾರಗಳಿಂದ ರಸ್ತೆಯಲ್ಲಿ ಇದ್ದಾರೆ ಕಾರಣ ಅವರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ. ರಾಜ್ಯದಲ್ಲಿ ವಾರಗಳಿಂದ ಚರ್ಚೆಯಲ್ಲಿ ಇರುವ ಸುದ್ದಿ ರೈತರು ಬೆಳೆದ ಕಬ್ಬಿಗೆ ಸೂಕ್ತ ಬೆಲೆ ಸರಕಾರ ನೀಡುತ್ತಿಲ್ಲ.
ನಮ್ಮ ದೇಶದ ದುರಂತಗಳಲ್ಲಿ ಇದು ಒಂದು. ದೇಶದಲ್ಲಿ ರೈತ ಓರ್ವನನ್ನು ಬಿಟ್ಟು ಬೇರೆ ಪ್ರತಿಯೊಬ್ಬರಿಗೂ ತಾನು ತಯಾರಿಸಿದ ವಸ್ತುವಿಗೆ ಬೆಲೆ ನಿಗದಿಪಡಿಸುವ ಹಕ್ಕಿದೆ ಆದರೆ ರೈತನಿಗೆ ಮಾತ್ರ ಇಲ್ಲ. ಮೂಲ ಕಚ್ಚಾ ವಸ್ತುವಿನ ಮಾಲಿಕ ರೈತನ ಬೆಳೆಯ ಬೆಲೆ, ನಿಗದಿ ಪಡಿಸುವವರು ಇನ್ನೂ ಯಾರೋ. ಇದು ದೇಶದ ದುರಂತ.
ರೈತರ ಬೇಡಿಕೆ ಕೇವಲ ಒಂದು ಟನ್ ಕಬ್ಬಿಗೆ 3,500 ರೂಪಾಯಿ ನೀಡಿ ಎಂದು, ಇತ್ತೀಚೆಗೆ ಒಂದು ಸಂಸ್ಥೆ ವರದಿ ಬಿಡುಗಡೆ ಮಾಡಿತ್ತು ಒಂದು ಟನ್ ಕಬ್ಬಿನಿಂದ ಒಂದು ಪ್ಯಾಕ್ಟರಿ ಸುಮಾರು ₹14,500-15,00 ದ ವರೆಗೆ ಗಳಿಸುತ್ತದೆ. ಹಾಗಿದ್ದ ಮೇಲೆ ರೈತರು ಕೇಳುವುದು ನ್ಯಾಯಯುತ ಬೆಲೆ.
ಇದರ ಬಗ್ಗೆ ಯಾಕೆ ನಾಯಕರು ಆಗಲಿ ವಿಪಕ್ಷ ನಾಯಕರು ಮಾತನಾಡುತ್ತಿಲ್ಲ ಎಂದು ನೋಡಿದರೆ ಪ್ಯಾಕ್ಟರಿ ಮಾಲೀಕರು ಹೆಚ್ಚಿನವರು ರಾಜಕಾರಣಿಗಳು ಹೀಗಿದ್ದಾಗ ಮಾತನಾಡುವವರು ಯಾರು.
ಪರಿಹಾರ ಕೊಡಬೇಕಾದ ಸರಕಾರ, ರಾಜ್ಯ ಸರಕಾರ ಕೇಂದ್ರ ಸರಕಾರವನ್ನು ದೂರುವುದು, ವಿರೋಧ ಪಕ್ಷ, ಆಡಳಿತ ಪಕ್ಷವನ್ನು ದೂರುವುದು ಇವುಗಳ ಮಧ್ಯೆ ಸೋತವರು ರೈತರು. ಹೊಲದಲ್ಲಿ ನೆಮ್ಮದಿಯಿಂದ ದುಡಿಯಬೇಕಾದ ರೈತ ಬೀದಿಗಿಳಿಯುವ ಪರಿಸ್ಥಿತಿ ಬಂದಿದೆ ಕೇಳುವವರು ಯಾರು, ಪರಿಹಾರ ಯಾವಾಗ ಎನ್ನುವುದು ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದು ಹೋಗುತ್ತದೆ .
- ವೈಶಾಖ್ ರಾಜ್ ಜೈನ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


