ಹೊಸ ಕನಸನ್ನು ಹೊತ್ತು ಹೊಸ ಜಾಗಕ್ಕೆ ಓದಲು ಬಂದಾಗ ಸಾಮಾನ್ಯವಾಗಿ ಯಾರ ಪರಿಚಯವಿರುವುದಿಲ್ಲ. ಹೀಗೆ ದಿನ ಕಳೆಯುತ್ತಾ ಹೋದ ಹಾಗೆ ಎಲ್ಲರ ಪರಿಚಯವಾಗುತ್ತಾ ಹೋಗುತ್ತದೆ. ಹಾಗೆಯೇ ನಮ್ಮದೇ ಆದ ಒಂದು ಗ್ರೂಪ್ ಕೂಡ ಕ್ರಿಯೇಟ್ ಆಗುತ್ತದೆ. ಮತ್ತೆ ಆ ಗ್ರೂಪಿನಲ್ಲಿ ಒಬ್ಬರು ಒಳ್ಳೆ ಬೆಸ್ಟ್ ಫ್ರೆಂಡ್ ಕೂಡ ಇರುತ್ತಾರೆ. ಹೀಗೆ ಆ ದಿನಗಳು ಸ್ನೇಹಿತರ ಜೊತೆಗಿನ ಒಡನಾಟ ಅವರ ಜೊತೆ ಕಳೆದ ಸಮಯ ಇವೆಲ್ಲ ಹೇಳಿಕೊಳ್ಳಲಾಗದಷ್ಟು ಸಂತೋಷ ಕೊಡುತ್ತವೆ.
ಸಾಮಾನ್ಯವಾಗಿ ಓದುವಾಗ ಓದುಗರಲ್ಲಿ ಒಂದು ಪ್ರಶ್ನೆ ಮೂಡುತ್ತದೆ. ಏನೆಂದರೆ ಗೆಳೆತನದ ಮಹತ್ವವೇನು?
ಗೆಳೆತನ ಎನ್ನುವುದು ಬರಿ ಮಾತಿನಲ್ಲಿ ಹೇಳಲಾಗುವುದಿಲ್ಲ ಇದೊಂದು ಅರಿಯದೆ ಮೂಡಿದ ಭಾಂದವ್ಯ. ಭಾವನೆಗಳನ್ನು ಒಬ್ಬರಿಗೊಬ್ಬರು ಯಾವುದೇ ಗೊಂದಲವಿಲ್ಲದೆ ಹಂಚಿಕೊಳ್ಳಬಹುದು. ಕೆಲ ಸಮಯ ಪೋಷಕರಲ್ಲಿ ಎಲ್ಲಾ ಸಮಸ್ಯೆಗಳನ್ನು ಹೇಳಿಕೊಳ್ಳಲು ಆಗುವುದಿಲ್ಲ. ಆ ಸಮಯದಲ್ಲಿ ನಮ್ಮ ಎಲ್ಲಾ ನೋವು ಅಥವಾ ಸಂತೋಷವನ್ನು ಅವರಿಗೆ ನಾವು ಹಂಚಿಕೊಳ್ಳಬಹುದು. ಇನ್ನು ಹೇಳಬೇಕೆಂದರೆ ಸಾಮಾನ್ಯವಾಗಿ ನಾವು ಕೇಳಿರುತ್ತೇವೆ ಇಲ್ಲವೇ ಟಿವಿಯಲ್ಲಿ ನೋಡಿರುತ್ತೇವೆ ಹೀಗೆ ಒಬ್ಬ ಗೆಳೆಯ ಆತನ ಕಷ್ಟ ಸುಖದಲ್ಲೂ ಇರುವುದನ್ನು ಮತ್ತು ತಂದೆ ತಾಯಿಯ ಜಾಗದಲ್ಲಿ ನಿಂತು ಪ್ರೋತ್ಸಾಹಿಸಿದ್ದನ್ನು. ಹೀಗೆ ಒಂದಲ್ಲ ಒಂದು ರೀತಿಯಿಂದ ಗೆಳೆತನ ಎಂದರೆ ಏನು ಎಂಬುದನ್ನು ನಾವು ತಿಳಿದಿದ್ದೇವೆ ಹಾಗೂ ಅನುಭವಿಸಿದ್ದೇವೆ.
ಮನೋವಿಜ್ಞಾನದ ಪ್ರಕಾರ ಗೆಳೆತನದ ಮಹತ್ವವೆಂದರೆ, ಕಷ್ಟದ ಸಮಯದಲ್ಲಿ ನಮಗೆ ಪ್ರೋತ್ಸಾಹಿಸಿ, ಭರವಸೆಯ ದಾರಿಯನ್ನು ತೋರಿಸಿ ನಮ್ಮಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾರೆ. ಒಂಟಿತನ ಕಡಿಮೆಯಾಗುತ್ತದೆ. ಇದರಿಂದ ನಾವು ನಮ್ಮ ಸ್ನೇಹಿತರೊಂದಿಗಿನ ಒಡನಾಟ ಜಾಸ್ತಿಯಾಗಿ ಯಾವುದೇ ಮಾನಸಿಕ ತೊಂದರೆಗಳನ್ನುಂಟು ಮಾಡುವುದಿಲ್ಲ. ಗೆಳೆತನ ಮಾನಸಿಕವಾಗಿ, ಭಾವನಾತ್ಮಕವಾಗಿ ಹಾಗೂ ದೈಹಿಕ ಆರೋಗ್ಯಕ್ಕೆ ಅತಿ ಅವಶ್ಯಕ.
ಗೆಳೆತನವು ಜೀವನಕ್ಕೆ ಶಕ್ತಿ, ಸಂತೋಷ, ಪ್ರೀತಿ ಹಾಗೂ ನೆಮ್ಮದಿ ನೀಡುತ್ತದೆ. ನಾವು ಎಲ್ಲಿದ್ದರೂ, ಹೇಗಿದ್ದರೂ ಗೆಳೆತನ ನಮ್ಮ ನೆರಳಿನ ಹಾಗೆ ಸದಾ ಜೊತೆಯಲ್ಲಿ ಇರಲಿ.
-ಪ್ರಿಯಾ ನರೇಗಲ್, ಎಸ್ ಡಿ ಎಂ ಉಜಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.jpeg)
