ಕಂದಗಲ್ಲ ಕ್ಲಸ್ಟರ್ ಮಟ್ಟದಲ್ಲಿ ಅಗ್ರಸ್ಥಾನ ಪಡೆದ ವಿಶ್ವಚೇತನ ಶಾಲೆ

Upayuktha
0

ಎಲ್ಲರ ಮೆಚ್ಚುಗೆ ಪಡೆದು ಪ್ರಥಮ ಪ್ರಶಸ್ತಿ ಪಡೆದ ವಿಶ್ವ ಚೇತನ ಶಾಲೆಯ ಸ್ವಾಮಿ ಅಯ್ಯಪ್ಪನ ದೇವಸ್ಥಾನದ ಪ್ರತಿಮೆ




ಕಂದಗಲ್ಲ: ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ಬಾಲಕಿಯರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ  ನಡೆದ 2025-26ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಗ್ರಾಮದ "ವಿಶ್ವಚೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು  ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ 20 ಬಹುಮಾನಗಳನ್ನು  ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.


ಹನ್ನೆರಡು ಸ್ಪರ್ಧೆಗಳಲ್ಲಿ ಪ್ರಥಮ, ನಾಲ್ಕು ಸ್ಪರ್ಧೆಗಳಲ್ಲಿ ದ್ವಿತೀಯ, ಆರು ಸ್ಪರ್ಧೆಗಳಲ್ಲಿ ತೃತೀಯ ಸ್ಥಾನ ಪಡೆದು ಕ್ಲಸ್ಟರ್ ಮಟ್ಟದಲ್ಲಿ  ಅತೀ ಹೆಚ್ಚು ಬಹುಮಾನಗಳನ್ನು ಪಡೆದ ಶಾಲೆ ವಿಶ್ವ ಚೇತನ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರಲ್ಲಿ ಸ್ವಾಮಿ ಅಯ್ಯಪ್ಪನ ಪ್ರಥಿಮೆ ಎಲ್ಲರ ಮೆಚ್ಚುಗೆ ಗಳಿಸಿ ಹೊರಹೊಮ್ಮಿದ್ದು ವಿಶೇಷ.


ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಸಂಗಣ್ಣ ಹವಾಲ್ದಾರ, ಸಿ ಆರ್ ಪಿ ಗಳಾದ ಶಾಂತಕುಮಾರ ಕುಟಗಮರಿ. ಸಬರದ ಗುರುಗಳು. ಶಾಲೆಯ  ಮುಖ್ಯ ಗುರುಗಳಾದ ರೇಷ್ಮ ಗಾವಡಿ. ಗ್ರಾಮದ ಶಿಕ್ಷಣ ಪ್ರೇಮಿಗಳಾದ ಪಂಪಣ್ಣ ಸಜ್ಜನ. ಸಾಹಿತಿ ನಾಗೇಶ್ ನಿಲೋಗಲ್ಲ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top