ತಂತ್ರಜ್ಞಾನ ಮಾನವ ಜೀವನದ ಅವಿಭಾಜ್ಯ ಅಂಗ: ಡಾ. ರಾಜೇಶ್ವರಿ ಎಂ.

Upayuktha
0

ಇಂಟರ್ನೆಟ್‍ ಆಫ್‍ಥಿಂಗ್ಸ್ (ಐಓಟಿ) ಹ್ಯಾಂಡ್ಸ್-ಆನ್‍ ಕಾರ್ಯಾಗಾರ ಉದ್ಘಾಟನೆ



ಪುತ್ತೂರು: ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್‍ ಆಫ್‍ ಥಿಂಗ್ಸ್ (ಐಓಟಿ) ಅತೀ ಅಗತ್ಯವಾಗಿದೆ. ಮಾನವ ತನ್ನಎಲ್ಲಾ ಕಾರ್ಯಗಳಿಗೂ ತಂತ್ರಜ್ಞಾನ ಬಳಸಿಕೊಂಡು ಮುಂದುವರಿಯುತ್ತಿದ್ದಾನೆ. ತಂತ್ರಜ್ಞಾನದ ಸಹಾಯದಿಂದ ಬುದ್ಧಿವಂತನಾಗುತ್ತಿದ್ದಾನೆ. ಹೀಗಾಗಿ ತಂತ್ರಜ್ಞಾನವಿಲ್ಲದೆ ಜಗತ್ತನ್ನು ಊಹಿಸುವುದು ಅಸಾಧ್ಯ. ಅದು ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ವಿವೇಕಾನಂದ ಕಾಲೇಜ್‍ ಆಫ್‍ ಇಂಜಿನಿಯರಿಂಗ್ & ಟೆಕ್ನಾಲಜಿಯ ಎಂಸಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ರಾಜೇಶ್ವರಿ ಎಂ. ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ನಾನ ಮತ್ತು ವಾಣಿಜ್ಯಮಹಾವಿದ್ಯಾಲಯ (ಸ್ವಾಯತ್ತ) ದ ಕಂಪ್ಯೂಟರ್ ಸೈನ್ಸ್ ಮತ್ತು ಐಕ್ಯೂಎಸಿ, ವಿವೇಕಾನಂದ ಕಾಲೇಜ್‍ ಆಫ್‍ ಇಂಜಿನಿಯರಿಂಗ್ & ಟೆಕ್ನಾಲಜಿಯ ಎಂಸಿಎ ವಿಭಾಗದ ಸಹಯೋಗದಲ್ಲಿ ನಡೆದ ಎರಡು ದಿನಗಳ ಫ್ಯಾಕಲ್ಟಿ ಡೆವಲಪ್‍ಮೆಂಟ್‍ ಕಾರ್ಯಕ್ರಮದಡಿಯಲ್ಲಿ ಇಂಟರ್ನೆಟ್‍ ಆಫ್‍ ಥಿಂಗ್ಸ್(ಐಓಟಿ) ಹ್ಯಾಂಡ್ಸ್-ಆನ್‍ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.


ಕಾಲೇಜಿನ ಉಪಪ್ರಾಶುಂಪಾಲ ಪ್ರೊ.ಶ್ರೀಕೃಷ್ಣ ಗಣರಾಜ ಭಟ್ ಮಾತನಾಡಿ, ಆಧುನಿಕ ಯುಗದಲ್ಲಿ ಇಂಟರ್ನೆಟ್‍ ಆಫ್‍ ಥಿಂಗ್ಸ್‍ ಪ್ರತಿಯೊಬ್ಬನ ಅವಶ್ಯಕತೆಯಾಗಿದೆ. ಸಣ್ಣ ಮಕ್ಕಳಿಂದ ತೊಡಗಿ ಉದ್ಯೋಗಸ್ಥರು ಕೂಡಾ, ತಮ್ಮ ಕೆಲಸ ಕಾರ್ಯಗಳಿಗೆ ಇಂಟರ್ನೆಟ್ ಸೆನ್ಸಾರ್ ಗಳನ್ನು ಬಳಸುತ್ತಾರೆ. ಇದರ ಕುರಿತಾದ ಕಾರ್ಯಾಗಾರಗಳು ವಿದ್ಯಾರ್ಥಿಗಳಲ್ಲಿ ಕೌಶಲ್ಯವನ್ನು ಹೆಚ್ಚುಗೊಳಿಸುತ್ತದೆ ಎಂದರು. 


ಕಾರ್ಯಕ್ರಮದಲ್ಲಿ ವಿವೇಕಾನಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‍ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರುಗಳಾದ ಮಹಾಬಲೇಶ್ವರ ಭಟ್ ಪಿ, ಶ್ರೇಯಸ್ ಹೆಚ್. ಉಪಸ್ಥಿತರಿದ್ದರು. 


ಕಂಪ್ಯೂಟರ್ ಲ್ಯಾಬ್ ಸಹಾಯಕಿ ನಿರೀಕ್ಷಾ ಪ್ರಾರ್ಥಿಸಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರಕಾಶ್‍ಕುಮಾರ್ ಸ್ವಾಗತಿಸಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಪ್ರೀತಾ ವಂದಿಸಿ, ವಿದ್ಯಾರ್ಥಿನಿ ರಕ್ಷಿತಾಕೆ.ಜಿ. ಕಾರ್ಯಕ್ರಮ ನಿರೂಪಿಸಿದರು.


ಸಭಾ ಕಾರ್ಯಕ್ರಮದ ಬಳಿಕ ಎರಡು ಹಂತಗಳಲ್ಲಿ ಕಾರ್ಯಾಗಾರ ಕಾರ್ಯಕ್ರಮ ನಡೆಯಿತು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top