ಉದ್ಭವ್-2ಕೆ25: ಎಸ್‌ಸಿಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಮೇಳ

Chandrashekhara Kulamarva
0


ಮಂಗಳೂರು: ಎಸ್ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ (ನ.15) ವಿದ್ಯಾರ್ಥಿ ಕಲ್ಯಾಣ ಪರಿಷತ್ತಿನ ಆಶಯದಲ್ಲಿ ಉದ್ಭವ್-2ಕೆ25 ಸೃಜನಶೀಲತೆಯೊಂದಿಗೆ ಜಾನ್ಮೆಯ ಚಾತುರ್ಯ "ಇಂಜಿನ್ಯೂಟಿ ವಿತ್ ಜುಗಾಡ್" ಎಂಬ ಶೀರ್ಷಿಕೆಯೊಂದಿಗೆ ವಿದ್ಯಾರ್ಥಿಗಳ ಸೃಜನಶೀಲ ಕೌಶಲ್ಯ ಮತ್ತು ಜ್ಞಾನವನ್ನು ಉತ್ತೇಜಿಸುವ ಉದ್ದೇಶದಿಂದ ವಿಷಯವಾರು ವಿದ್ಯಾರ್ಥಿ ಮೇಳ ಜರಗಿತು.


ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸುವದರ ಮುಖಾಂತರ ಪ್ರಾಂಶುಪಾಲರು ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರು ಸಾನಿಧ್ಯದಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ದೀಕ್ಷಿತಾ ಪ್ರಸ್ತಾವಿಕ ಭಾಷಣ ಮಾಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಗಾಯತ್ರಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಹಾರ್ದಿಕ್.ಪಿ. ಚೌಹಾಣ್ ವಿದ್ಯಾರ್ಥಿಗಳ ಕೌಶಲ್ಯ ಸೃಜನಶೀಲತೆ ಮತ್ತು ಚಿಂತನ ಶಕ್ತಿಯನ್ನು ಉತ್ತೇಜಿಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.



ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ವಿದ್ಯಾರ್ಥಿ ಕಲ್ಯಾಣ ಪರಿಷತ್ತಿನ ಅಧ್ಯಕ್ಷ ಸುದೀಪ್ ರೈ ತೃತೀಯ ಬಿ.ಕಾಂ ಸ್ವಾಗತಿಸಿದರು, ಅಪೂರ್ವ ದ್ವಿತೀಯ ಬಿ.ಕಾಂ ವಂದಿಸಿದರು, ನೈಋತ್ಯ- ತೃತೀಯ ಬಿ.ಬಿ.ಎ ನಿರೂಪಿಸಿದರು. ನಂತರದಲ್ಲಿ ಪ್ರತಿ ವಿಭಾಗದ ಮೂಲಕ ವಿಷಯವಾರು ವಿದ್ಯಾರ್ಥಿ ಮೇಳದ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಮಾರಾಟ ಪ್ರಚಾರ, ಹೊಸ ಉತ್ಪನ್ನ ಪರಿಚಯ, ಮಾನವ ಸಂಪನ್ಮೂಲ, ಪ್ರಶ್ನೋತ್ತರ, ಗಣಕ ದೋಷ ಪರಿಹಾರ, ಮಾಹಿತಿ ತಂತ್ರಜ್ಞಾನ ನಿರ್ವಹಣೆ, ರೇಖಾಚಿತ್ರ, ತ್ಯಾಜ್ಯದಿಂದ ಉಪಯುಕ್ತ ವಸ್ತು ತಯಾರಿ, ಎಲೆ- ಕಲೆ, ಪತ್ರಿಕೆ ವಿನ್ಯಾಸ, ಛಾಯಾಗ್ರಹಣ, ಕಿರುಚಿತ್ರ ತಯಾರಿ ಸೇರಿದಂತೆ ವಿವಿಧ ಕ್ಷೇತ್ರಗಳ ಸ್ಪರ್ಧೆಗಳು ನಡೆದವು. ವಿವಿಧ ವಿಭಾಗಗಳಿಂದ 220ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.


ಸಂಜೆ ನಡೆದ ಸಮಾರೋಪದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು, ಎಲ್ಲಾ ವಿಭಾಗದ ಮುಖ್ಯಸ್ಥರುಗಳು ಮತ್ತು ಆಯೋಜಕರು ಬಹುಮಾನ ವಿತರಿಸಿದರು. ಪ್ರಾಂಶುಪಾಲರ ಅಧ್ಯಕ್ಷೀಯ ನುಡಿಗಳ ಮೂಲಕ ವಿದ್ಯಾರ್ಥಿಗಳ ಪ್ರದರ್ಶನ ಉತ್ಸಾಹ ಮತ್ತು ಸೃಜನಶೀಲತೆ, ನವೀನತೆಯ ಬಗ್ಗೆ ತಿಳಿಸಿದರು. ಕೆಲವು ವಿದ್ಯಾರ್ಥಿಗಳು ಸ್ಪರ್ಧೆಯ ಅನುಭವ  ಹಂಚಿದರು. ವೇದಿಕೆಯಲ್ಲಿ ಪ್ರತಿಯೊಂದು ವಿಭಾಗದ ಸ್ಪರ್ಧೆಯ ಆಯೋಜಕರು  ಉಪಸ್ಥಿತರಿದ್ದರು. ವಿದ್ಯಾರ್ಥಿ ಕಲ್ಯಾಣ ಪರಿಷತ್ತಿನ ಉಪಾಧ್ಯಕ್ಷೆ ತೃತೀಯ ಬಿ.ಎಸ್ಸಿ ಅನಿಮೇಶನ್ ನ ಕುಮಾರಿ ಜಾಯ್ಲಿನ್ ರೆವೆನೋ ಪಿಂಟೊ ಸ್ವಾಗತಿಸಿದರು. ಪ್ರಥಮ ಬಿ ಸಿ ಎ ಕುಮಾರಿ ತ್ರಿಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ಬಿ.ಎಸ್ಸಿ ಫುಡ್ ಅಂಡ್ ನ್ಯೂಟ್ರಿಷನ್ ವಿಭಾಗದ ಶ್ರಾವ್ಯ ಜೆ.ಎಸ್ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top