ಭೀಮ್ ಆ್ಯಪ್‍ನಲ್ಲಿ ಯುಪಿಐ ಸರ್ಕಲ್ ಸೇವೆಗೆ ಚಾಲನೆ

Upayuktha
0




ಮಂಗಳೂರು: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‍ಪಿಸಿಐ) ತನ್ನ ಭೀಮ್ ಪಾವತಿ ಆ್ಯಪ್‍ನಲ್ಲಿ ಯುಪಿಐ ಸರ್ಕಲ್ ಫುಲ್ ಡೆಲಿಗೇಷನ್ ವೈಶಿಷ್ಟ್ಯವನ್ನು ಆರಂಭಿಸಿದೆ. ಈ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ತಮ್ಮ ಖಾತೆಯಿಂದ ಪೂರ್ವನಿಗದಿತ ಮಾಸಿಕ ಖರ್ಚಿನ ಮಿತಿಯೊಳಗೆ ವಿಶ್ವಾಸಾರ್ಹ ಸಂಪರ್ಕಗಳಿಗೆ ಯುಪಿಐ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ. ಇದು ಕುಟುಂಬದ ಹಣಕಾಸು ನಿರ್ವಹಣೆಯನ್ನು ಸುಲಭಗೊಳಿಸುವ ಜತೆಗೆ ಸಂಪೂರ್ಣ ಪಾರದರ್ಶಕತೆ ಮತ್ತು ನಿಯಂತ್ರಣವನ್ನು ಸಾಧ್ಯವಾಗಿಸುತ್ತದೆ.


ಈ ಸೌಲಭ್ಯದ ಮೂಲಕ ಪ್ರಾಥಮಿಕ ಬಳಕೆದಾರರು, ಎರಡನೇ ಸ್ತರದ ಬಳಕೆದಾರರಿಗೆ ತಮ್ಮ ಖಾತೆಯಿಂದ ನೇರವಾಗಿ ಯುಪಿಐ ಪಾವತಿಗಳನ್ನು ಪ್ರಾರಂಭಿಸಿ ಪೂರ್ಣಗೊಳಿಸಲು ಅನುಮತಿ ನೀಡಬಹುದು. ಪ್ರಾಥಮಿಕ ಬಳಕೆದಾರರು ತಿಂಗಳಿಗೆ ಗರಿಷ್ಠ ರೂ. 15 ಸಾವಿರ ವರೆಗೆ ಖರ್ಚಿನ ಮಿತಿಯನ್ನು ಮತ್ತು ಗರಿಷ್ಠ 5 ವರ್ಷಗಳವರೆಗೆ ಅವಧಿಯ ಮಿತಿಯನ್ನು ನಿಗದಿಪಡಿಸಬಹುದು ಎಂದು ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಾಹಕಿ ಲಲಿತಾ ನಟರಾಜ್ ಹೇಳಿದ್ದಾರೆ.


ಈ ವೈಶಿಷ್ಟ್ಯವು ಕುಟುಂಬದ ಸದಸ್ಯರು, ಅವಲಂಬಿತರು ಅಥವಾ ಸಿಬ್ಬಂದಿ ನಡುವಿನ ದಿನನಿತ್ಯದ ಡಿಜಿಟಲ್ ಪಾವತಿಗಳನ್ನು ಸುಗಮಗೊಳಿಸುತ್ತದೆ, ಜೊತೆಗೆ ಎಲ್ಲ ವಹಿವಾಟುಗಳ ಮೇಲೆ ಸ್ಪಷ್ಟ ಮೇಲ್ವಿಚಾರಣೆಯನ್ನು ಕಾಪಾಡುತ್ತದೆ. ಫುಲ್ ಡೆಲಿಗೇಷನ್ ಸಹಿತ ಯುಪಿಐ ಸರ್ಕಲ್, ವಿಶ್ವಾಸಾರ್ಹ ಬಳಕೆದಾರರು ತಮ್ಮದೇ ಬ್ಯಾಂಕ್-ಲಿಂಕ್ ಮಾಡಿದ ಯುಪಿಐ ಐಡಿ ಅಥವಾ ಬ್ಯಾಂಕ್ ಖಾತೆ ಇಲ್ಲದೆ ಸುರಕ್ಷಿತವಾಗಿ ಡಿಜಿಟಲ್ ಪಾವತಿಗಳಲ್ಲಿ ಪಾಲ್ಗೊಳ್ಳುವಂತಾಗುವ ಮೂಲಕ ಹಣಕಾಸು ಸಬಲೀಕರಣವನ್ನು ಉತ್ತೇಜಿಸುತ್ತದೆ.


ಹಿರಿಯ ನಾಗರಿಕರಿಗೆ ಬೆಂಬಲ, ಮಕ್ಕಳ ದೈನಂದಿನ ಅಥವಾ ಶಿಕ್ಷಣ ಸಂಬಂಧಿತ ವೆಚ್ಚ ನಿರ್ವಹಿಸುವುದು, ವ್ಯವಹಾರ ಮಾಲೀಕರು ತಮ್ಮ ಸಿಬ್ಬಂದಿಗೆ ಇಂಧನ, ಟೋಲ್, ಇತ್ಯಾದಿ ಕಾರ್ಯಾಚರಣಾ ವೆಚ್ಚಗಳಿಗಾಗಿ ಪಾವತಿಗಳನ್ನು ಮಾಡಲು ಅನುಕೂಲ ಮಾಡುವ ಜತೆಗೆ ಡಿಜಿಟಲ್ ಪಾವತಿಗಳಲ್ಲಿ ಅನುಭವವಿಲ್ಲದವರಿಗೆ ಕೂಡಾ ನೆರವಾಗತ್ತದೆ.


ಯುಪಿಐ ಸರ್ಕಲ್ ಅನ್ನು ಹೊಸ ಭೀಮ್ ಪಾವತಿ ಆ್ಯಪ್‍ನ ಇತ್ತೀಚಿನ ಆವೃತ್ತಿಯಲ್ಲಿ ಅಪ್‍ಗ್ರೇಡ್ ಭಾಗವಾಗಿ ಬಿಡುಗಡೆ ಮಾಡಲಾಗಿದೆ ಎಂದ ಪ್ರಕಟಣೆ ವಿವರಿಸಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top