ಮಣ್ಣಿನ ಸುವಾಸನೆ ಮಾತಾಡಿದಾಗ
ಮನದೊಳಗೊಂದು ಕರೆಯ ಕೇಳಿಸಿತು,
ಬೀಜದಾಳದಂತೆ ಮೃದುವಾಗಿದ್ದ
ತಿಮ್ಮಕ್ಕಾಳ ಹೃದಯ ಬಿಸಿಲಾಗಿ ಹೊಳೆಯಿತು.
ಹಸಿವು-ತಣಿವು ಮರೆತು ನಡೆಯುತಾ
ಹುಲ್ಲಿನ ಮೇಲೆ ಹನಿಯಂತೆ ಹೊಳೆಯುತಾ,
ಬೀಜವಿಟ್ಟಳು, ಜೀವವಟ್ಟಳು
ಬಾಳಿಗೆ ಸಾವಿರ ನೆರಳು ಕೊಟ್ಟಳು.
ಬೂದಿಯ ಶಿಲೆಯೂ ಹಸಿರಾಯ್ತು
ಅವಳ ತವರೂರಿನ ತೊಟ್ಟಿಲಲ್ಲಿ,
ತಾಯಿಯ ಕೈಯಲ್ಲಿ ಬೆಳೆದಂತೆ
ಮರಗಳು ಬೆಳೆದವು ಅವಳ ನಲುವಲ್ಲಿ.
ಸಾಲಾಗಿ ನಿಂತವು ಆ ಮರಗಳು
ನೋಡುಗರಾದರು,
ತಿಮ್ಮಕ್ಕಾಳ ಕಣ್ಣಿನ ಕರುಣೆಯಲಿ
ಗಾಳಿಯೂ ಹಾಡಿತು ಹಸಿರಿನ ಗೀತೆಯನು.
ತಾಯಿ ಎಂಬ ಹೆಸರು ಮಗನಿಂದ ಸಿಗುತ್ತದೆ
ಆದರೆ ಮರಗಳಿಗೆ ತಾಯಿಯಾದಳು
ಬೆಳೆದ ಪ್ರತೀ ಕೊಂಬೆಯ ಒಲವು
ತಿಮ್ಮಕ್ಕಳ ಜೀವದ ನಗುತಾಯಿತು.
ದೇಹಬಿಟ್ಟರೂ ನೀವು ನೆಟ್ಟ ಮರಗಳು
ಮೂಲಕ ಜೀವಂತವಾಗಿರುತ್ತೀರಿ
- ಭಾಗ್ಯಶ್ರೀ ಜೀವಂಧರ ಕಾಶಿನ
ಕನ್ನಡ ಉಪನ್ಯಾಸಕರು
ಚೇತನ್ ವಾಣಿಜ್ಯ ಮಹಾವಿದ್ಯಾಲಯ ಹುಬ್ಬಳ್ಳಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







