ಡಿ. 1 ರಂದು ಕಲಾಕುಂಚ ಕೇರಳ ಶಾಖೆಯಿಂದ ಗೀತಾ ಸಪ್ತಾಹ ಉದ್ಘಾಟನೆ

Upayuktha
0


ದಾವಣಗೆರೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಕೇರಳದ ಗಡಿನಾಡಿನ ಶಾಖೆ ಹಾಗೂ ಕೊಂಡೆವೂರಿನ ಎಸ್.ಎಸ್.ಎನ್.ವಿ.ಪಿ. ವಿದ್ಯಾಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಡಿ. 1 ರ ಸೋಮವಾರ ಬೆಳಿಗ್ಗೆ 9 ರಿಂದ ಗೀತಾ ಸಪ್ತಾಹ ಉದ್ಘಾಟನೆ ನಡೆಯಲಿದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.


ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯುವ ಈ ಗೀತಾ ಸಪ್ತಾಹವನ್ನು ವಿಶೇಷ ಅಭ್ಯಾಗತರಾದ ಸುಬ್ರಾಯ ನಂದೋಡಿ ನಡೆಸಿಕೊಡಲಿದ್ದಾರೆ. ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಅಧ್ಯಕ್ಷರಾದ  ಜಯಲಕ್ಷ್ಮಿ ಕಾರಂತ್ ರವರು ಉಪಸ್ಥಿತರಿರುತ್ತಾರೆ. ಭಗವದ್ಗೀತೆಯ ಆಸಕ್ತ ಸದ್ಭಕ್ತರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಗೀತಾ ಸಪ್ತಾಹ ಯಶಸ್ವಿಗೊಳಿಸಬೇಕಾಗಿ ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಗೌರವ ಅಧ್ಯಕ್ಷರಾದ ಶ್ರೀರಾಮ ಕಾರಂತ್ ವಿನಂತಿಸಿದ್ದಾರೆ.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top