ಅಮ್ಮನ ಮಡಿಲಿನ ಬೆಚ್ಚನೆಯ ನೆನಪು

Chandrashekhara Kulamarva
0



ನಿಷ್ಕಲ್ಮಶ ಮನಸ್ಸಿನ ಮುದ್ದು ದೇವತೆ ನನ್ನ ಅಮ್ಮ. ಜಗತ್ತಿಗೆ ನನ್ನನ್ನು ಪರಿಚಯಿಸಿದಳು, ಎಷ್ಟೇ  ಕಷ್ಟದಲ್ಲಿದ್ದರೂ ಮುದ್ದಾಗಿ ಸಾಕಿ ನಾನು ಬೆಳೆಯುತ್ತಾ ನನ್ನ  ಕಷ್ಟಗಳಿಗೆ ಜೊತೆಯಾದಳು. ನನ್ನ ಪುಟ್ಟ ಮನಸ್ಸಿನ ಹೃದಯಕ್ಕೆ ಅವಳೇ ಸಾಹುಕಾರಳಾದಳು. ಎಷ್ಟೇ ಬಡತನ ವಿದ್ದರೂ ಅವಳ ಮನಸ್ಸಿನಲ್ಲಿ ಹೃದಯ ಶ್ರೀಮಂತಿಕೆ ತುಂಬಿ ನನ್ನ ಕಷ್ಟದಲ್ಲಿ ಜೊತೆಯಾಗಿ ಸುಖದಲ್ಲಿ ಭಾಗಿಯಾಗಿ ನಾನು ಕುಗ್ಗಿದಾಗ ನನ್ನ ಬೆನ್ನು ತಟ್ಟಿ ಗೆಳತಿಯಾಗಿ ಪ್ರೋತ್ಸಾಹಿಸಿದಳು. ನನ್ನ ಪ್ರತಿ ಗೆಲುವನ್ನು ಅವಳ ಗೆಲುವಿನಂತೆ ಸಂಭ್ರಮಿಸುವ ಮೂಲಕ ಜೀವನಕ್ಕೆ ಹೊಸ ಭರವಸೆಯನ್ನು ನೀಡಿದಳು.            



ಅಮ್ಮ ಎಂದರೆ ಬರೀ ಪದವಲ್ಲ ಅದೊಂದು ಶಕ್ತಿ ಅವಳಿಗೆ ಯಾವಾಗಲೂ ಅರ್ಪಿಸುವೆ ನನ್ನ ಮನಸ್ಸಿನ ಭಕ್ತಿ. ಕಣ್ಣಿಗೆ ಕಾಣದ ದೇವರನ್ನು ದಿನಾಲು ಭಕ್ತಿಯಿಂದ ಪೂಜಿಸುತ್ತೇವೆ. ಆದರೆ ನಮ್ಮ ಕಣ್ಣಿಗೆ ಕಾಣುವ ಏಕೈಕ ದೇವತೆ ತಾಯಿ ಎಂದರು ತಪ್ಪಿಲ್ಲ. ಅಮ್ಮನ ಪ್ರೀತಿ ಎಂದರೆ ಸ್ವರ್ಗಕ್ಕಿಂತಲು ಮಿಗಿಲು. ಪ್ರೀತಿ ವಾತ್ಸಲ್ಯ ತ್ಯಾಗ ಕಾಳಜಿಯ ಸಂಕೇತ. ತ್ಯಾಗ ಪ್ರೀತಿ ಮತ್ತು ಬಲವಾದ ಸಂಬಂಧವನ್ನು ಗೌರವಿಸುವುದು ಮುಖ್ಯ. ಮತ್ತು ಅಮ್ಮನ ಪ್ರೀತಿ ಹಾರೈಕೆ ಇಲ್ಲದೆ ಜೀವನ ಪೂರ್ಣವಾಗುವುದಿಲ್ಲ. ಅಮ್ಮ ತನ್ನ ಜೀವನವನ್ನೇ ಮುಡಿಪಾಗಿಡುತ್ತಾಳೆ. ನನ್ನ ಸಂತೋಷಕ್ಕಾಗಿ ಅವಳ ಸ್ವಂತ ಆಸೆ ಗಳನ್ನು ಈಡೇರಿಸುವುದಿಲ್ಲ ಆದರೆ ಅಮ್ಮನ ಪ್ರೀತಿ ಮತ್ತು ತ್ಯಾಗವನ್ನು ಪ್ರತಿದಿನ ನೆನಪಿನಲ್ಲಿಟ್ಟುಕೊಳ್ಳಬೇಕು. ನಾನು ಎಲ್ಲಿದ್ದರೂ ಹೇಗಿದ್ದರೂ ನೆನೆಯುವ ಜೀವ ಒಂದೇ ಅದು ನನ್ನ ಅಮ್ಮನನ್ನು ಮತ್ತು ನೋವಿನಲ್ಲಿ ನಲಿವಿನಲ್ಲಿ ಜೀವನದ ಪುಟ ಪುಟದಲ್ಲಿ ಅಮ್ಮನನ್ನು ಬಯಸುವೆ. ಯಾವಾಗಲೂ ಮುನಿಸಿಗೆ ಜಾಗ ಇಲ್ಲ. ನಮ್ಮಿಬ್ಬರ ಸಂಬಂಧದಲ್ಲಿ ಆದರೆ ನೀನು ನನ್ನೊಂದಿಗೆ ಕೋಪಗೊಂಡು ಮಾತು ಬಿಟ್ಟಾಗ ನಾ ಕಾಡಿಬೇಡಿ ಮಾತನಾಡುತ್ತಿದ್ದೆ. ಅದರೊಳಗೊಂದು ಸಂತೋಷ ಸಿಗುತ್ತಿತ್ತು.


ನನ್ನ ಅಮ್ಮ ಅವಳ ಕಷ್ಟವ ಮರೆತು ನನ್ನ ಖುಷಿಯಲ್ಲಿ ತನ್ನ ನೆಮ್ಮದಿಯ ಕಾಣುವ ನಿಸ್ವಾರ್ಥಿಯಾಗಿರು ವಳು. ನನ್ನ ಬಗ್ಗೆ ಯಾವಾಗಲೂ ಯೋಚಿಸುವ ಹೃದಯ ಅವಳದ್ದು ಎಂದಿಗೂ ಅಳಿಸಲಾರೆ ಆ ಹೃದಯವ ನೋಡಿಕೊಳ್ಳುವೆ ಸದಾ ಖುಷಿಯಿಂದ ಆ ಮನವ....




- ಗಾಯತ್ರಿ ಆಚಾರ್ಯ 

ಪ್ರಥಮ ಪತ್ರಿಕೋದ್ಯವಿಭಾಗ

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top