ಮನಸ್ಸಿನ ಮಧುರ ಸಂಗೀತ

Chandrashekhara Kulamarva
0


ಹೌದು, ನಗು ಮನಸ್ಸಿನ ಮಧುರ ಸಂಗೀತ, ಅದಲ್ಲದೆ ಬದುಕಿನ ಅಮೂಲ್ಯ ರತ್ನವೂ ಹೌದು. ನಕ್ಕರೆ ಅದುವೇ ಸ್ವರ್ಗ ಎಂಬಂತೆ ನಾವು ಈ ಜಗತ್ತಿಗೆ ಅಳುತ್ತಲೇ ಕಾಲಿಡುವೆವು. ನಂತರ ಬೆಳೆಯುತ್ತ ಹೋದಂತೆ ಬದುಕಿನಲ್ಲಿ ಸಂತೋಷದ ಕ್ಷಣಗಳು ಎದುರಾದಾಗ ನಗುತ್ತಲೇ ಜೀವಿಸುವೆವು.


ನಗುವು ಮಾನವನ ಬದುಕಿನ ಅತ್ಯಂತ ಸುಂದರವಾದ ಬೆಳಕು. ಅದು ಕೇವಲ ತುಟಿಯಂಚಿನ ಅಲಂಕಾರ ಮಾತ್ರವಲ್ಲದೆ, ನಮ್ಮ ಮನಸ್ಸಿನ ಭಾವನೆ ಎಂದರೆ ತಪ್ಪಾಗಲಾರದು.


ನಮ್ಮ ಮನದೊಳಗಿನ ಮಾತನ್ನು ಯಾರಿಂದಲೂ ಅರಿತುಕೊಳ್ಳಲು ಸಾಧ್ಯವಿಲ್ಲ. ಆದರೆ ನಮ್ಮ ಮನಸ್ಸಿನ ಮಾತನ್ನು ನಗುಮೊಗದ ಭಾವನೆಯು ವ್ಯಕ್ತಪಡಿಸುತ್ತದೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ ನಗು ನಮ್ಮ ಜೀವನದ ಅಮೃತವೂ ಹೌದು. ಆಭರಣದಂತೆ ಜಗಮಗಿಸುವ ಆ ನಗು ಹೃದಯದಲ್ಲಿದ್ದಂತಹ ನೋವನ್ನು ಹಗುರಮಾಡುತ್ತದೆ. ಸಾವಿರ ದುಃಖ ದುಗುಡಗಳನ್ನು, ಪ್ರತಿಯೊಬ್ಬರ ಕೋಪ, ಅಸೂಯೆ, ಚಿಂತೆಗಳನ್ನು ದೂರ ಮಾಡುತ್ತದೆ. ಇದರಿಂದ ಆರೋಗ್ಯವೂ ಉತ್ತಮ ಸ್ಥಿತಿಯಲ್ಲಿರಲು ಕಾರಣವಾಗುತ್ತದೆ. ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಹಾಗೂ ಶಾರೀರಿಕವಾಗಿಯೂ, ಮಾನಸಿಕವಾಗಿಯೂ ಲಾಭದಾಯಕವಾಗಿದೆ.


ಅದಲ್ಲದೇ ನಗುವಿಗೆ ಅಪಾರವಾದ ಶಕ್ತಿ ಇದೆ. ಒಂದು ಚಿಕ್ಕ ನಗು ಕೂಡ ನಮ್ಮ ಎದುರಾಳಿಯ ಮನಸ್ಸನ್ನು ಗೆಲ್ಲಬಹುದು .ನೋವಿನಲ್ಲಿ ನೊಂದು ಬೆಂದು ಹೋದ ವ್ಯಕ್ತಿಗಳು ನಮ್ಮ ಮುಂದೆ ಕಂಡರೆ ಅವರನ್ನು ಸಂತೋಷದಿಂದ ಮಾತನಾಡಿಸಿ ಹೃದಯದಿಂದ ನಕ್ಕರೆ ಆ ದುಃಖದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯ ಮನಸ್ಸಿನಲ್ಲಿದ್ದ ದುಮ್ಮಾನದ ಭಾರ ಅರ್ಧಕ್ಕಿಂತಲೂ ಕಡಿಮೆಯಾಗುತ್ತದೆ. ಇದರಿಂದ ಸ್ನೇಹವು ಗಟ್ಟಿಯಾಗುತ್ತದೆ. ಸಂಬಂಧಗಳು ಮಧುರವಾದ ಬಾಂಧವ್ಯವನ್ನು ಹೊಂದಿರುತ್ತದೆ.


ಆದರೆ ಈ ಸ್ಟೈಲಿಶ್ ಯುಗದಲ್ಲಿ ನಗುವನ್ನು ಬಹಳ ಮುದ್ದಾಗಿ ತೋರಿಸಿಕೊಳ್ಳುವುದನ್ನು ನಾವು ಕಾಣಬಹುದು. ಅಂದರೆ  ಡಿಂಪಲ್ ಬೀಳುವಂತಹ ತರುಣ ತರುಣಿಯರು ತಮ್ಮ ಡಿಂಪಲ್ ನ ತೋರಿಕೆಗಾಗಿ ಫೋಟೋವನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಸಿ ಬಿಡುತ್ತಾರೆ. ಇದು ಇತ್ತೀಚಿನ ಮುದ್ದಾದ ನಗುವಾಗಿದೆ. ಹಾಗಂತ ಇದು ತಪ್ಪೇನೂ ಅಲ್ಲ. ಇದು ಕೇವಲ ತೋರಿಕೆಯ ನಗು. ನಮ್ಮ ಜೀವನದಲ್ಲಿ ಎಂದಿಗೂ ತೋರಿಕೆಯ ನಗುವಿಗಿಂತ ಮನಸ್ಪೂರ್ತಿಯಾಗಿ ನಗುವುದು ಉತ್ತಮವೇ ಸರಿ.


ಅದಲ್ಲದೇ ಇಂದಿನ ಕಾಲದಲ್ಲಿ ಕೆಲಸ, ಹಣ, ಚಿಂತೆ, ಒತ್ತಡ, ಕೋಪ, ಆತಂಕ ಇವುಗಳಿಗೆ ಮುಳುಗಿ ಹೋದ ಸಮಯದಲ್ಲಿ ನಗು ಎನ್ನುವುದು ಬದುಕಿಗೆ ಸಮಾಧಾನ ನೀಡುವಂತಹ ಶಕ್ತಿಯಾಗಿದೆ.


"ದಿನಕ್ಕೆ ಕನಿಷ್ಟ ಕೆಲವು ಕ್ಷಣ ನಗುತ್ತಾ, ಇನ್ನೊಬ್ಬರನ್ನು ನಗಿಸುತ್ತಾ, ಪ್ರತಿ ಮುಂಜಾನೆಯ ದಿನವನ್ನು ನಗುವಿನೊಂದಿಗೆ ಪ್ರಾರಂಭಿಸುತ್ತಾ ನಮ್ಮ ಜೀವನವನ್ನು ಸುಂದರಗೊಳಿಸೋಣವಲ್ಲವೇ"




- ಆಶಾ ದಾಸಪ್ಪ ನಾಯ್ಕ

ವಿವೇಕಾನಂದ ಕಾಲೇಜು, ಪುತ್ತೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top