ಈ ವರ್ಷದ ತಿರುಗಾಟ ಇಂದಿನಿಂದ ಪ್ರಾರಂಭ
ಸುಮಾರು 210 ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ಶ್ರೀ ಧರ್ಮಸ್ಥಳ ಮೇಳವು ಮೊದಲು ಬಯಲಾಟ ಮೇಳವಾಗಿಯೇ ಇತ್ತು. ಆಮೇಲೆ ಕೆಲವು ವರ್ಷಗಳ ಕಾಲ ಹಲವರ ವ್ಯವಸ್ಥಾಪಕತ್ವದಲ್ಲಿ ಟೆಂಟ್ ಮೇಳವಾಗಿದ್ದು, 1998 ರಿಂದ ಸಂಪೂರ್ಣ ಬಯಲಾಟದ ಮೇಳವಾಗಿರುತ್ತದೆ. ಈ ಮೇಳ ಸುಮಾರು 12,000 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಈ ವರೆಗೆ) ನೀಡಿದೆ.
ಖಾವಂದರ ದೂರದರ್ಶಿತ್ವದ ಪರಿಣಾಮವಾಗಿ ಕಲಾವಿದರ ಅನುಕೂಲ ಮತ್ತು ಸೇವಾಕರ್ತರ ಅನುಕೂಲ ನೋಡಿ ಅಳೆದು ತೂಗಿ 2015 ರಿಂದ ಮೇಳದ ಯಕ್ಷಗಾನವನ್ನು ಕಾಲಮಿತಿ ಪಗೊಳಿಸಿ ಪ್ರದರ್ಶನ ನೀಡುತ್ತಿದ್ದಾರೆ. ಕಾಲಮಿತಿಯಲ್ಲೂ (7.00 ರಿಂದ 12.00) ಸಂಪ್ರದಾಯಕ್ಕೆ ಯಾವುದೇ ಲೋಪ ಆಗದಂತೆ ಪೂರ್ವರಂಗವನ್ನೂ ಪ್ರದರ್ಶಿಸಿ ಕಾಲಮಿಗೆ ತಕ್ಕಂತೆ ಪ್ರಸಂಗವನ್ನು ಬದಲಾವಣೆ ಮಾಡಿರುತ್ತಾರೆ. ಇದರಲ್ಲಿ ಯಶಸ್ವಿಯನ್ನೂ ಕಲಾವಿದರ, ಯಕ್ಷಪ್ರೇಮಿಗಳ, ಸೇವಾಕರ್ತರ ಮನಸ್ಸನ್ನೂ ಗೆದ್ದು ಪ್ರತಿ ಪ್ರದರ್ಶನದಲ್ಲೂ ಉತ್ತಮ ಪ್ರೇಕ್ಷಕರು ಸೇರುತ್ತಾರೆ. ಹೆಚ್ಚಾಗಿ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯನ್ನು ಸೇವಾ ರೂಪವಾಗಿ ಆಡುತ್ತಾ ಕೆಲವೊಂದು ಪುರಾಣ ಪ್ರಸಂಗಗಳನ್ನು ಕಾಲಮಿತಿಗೆ ಹೊಂದಿಸಿ ಯಾವುದೇ ಲೋಪವಾಗದಂತೆ ಪ್ರದರ್ಶನ ನೀಡುತ್ತಿದೆ. ಕಲಾವಿದರಿಗೆ ಉತ್ತಮ ವಸತಿ ಊಟದ ವ್ಯವಸ್ಥೆ ಮೇಳದ ವತಿಯಿಂದ ಮಾಡಲಾಗುತ್ತಿದೆ. ಕಲಾವಿದರಿಗೆ ಉತ್ತಮ ವೇತನ, ಆರೋಗ್ಯ ವಿಮೆ, ಕ್ಷೇಮ ನಿಧಿ, ಭವಿಷ್ಯ ನಿಧಿ ಎಲ್ಲಾ ಇದೆ.
ಪ್ರಸ್ತುತ ಪೂಜ್ಯ ಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ಶ್ರೀ ಹರ್ಷೇಂದ್ರ ಕುಮಾರರರ ಯಜಮಾನತ್ವದಲ್ಲಿ ಮೇಳವು ಶ್ರೀ ಗಿರೀಶ್ ಹೆಗ್ಡೆಯವರು ಪ್ರಬಂಧಕರಾಗಿ ದ.ಕ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ, ಕಾಸರಗೋಡು ಜಿಲ್ಲೆಗಳಲ್ಲಿ ಸಂಚರಿಸಿ ಯಕ್ಷಗಾನ ಪ್ರದರ್ಶನ ನೀಡುತ್ತದೆ. 2025-26 ನೇ ಸಾಲಿನ ತಿರುಗಾಟವು ನವೆಂಬರ್ 5ರಂದು ಶ್ರೀ ಕ್ಷೇತ್ರದಲ್ಲಿ ಸೇವೆ ಆಟ ಆಡುವುದರೊಂದಿಗೆ ಪ್ರಾರಂಭ ಆಗಲಿದೆ. ನವೆಂಬರ್ 22 ರವರೆಗೆ ಕ್ಷೇತ್ರದಲ್ಲಯೇ ಪ್ರದರ್ಶನ ನೀಡಿ ನವೆಂಬರ್ 23 ರಿಂದ ಸಂಚಾರ ಆರಂಭಿಸಲಿದೆ.
ಈ ವರ್ಷದ ತಿರುಗಾಟದಲ್ಲಿರುವ ಕಲಾವಿದರಾಗಿ ಹಿಮ್ಮೇಳದಲ್ಲಿ-
•••••••••••••••
ಭಾಗವತರು: ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಶ್ರೀ ಕರುಣಾಕರ ಶೆಟ್ಟಿಗಾರ್ ಕಾಶಿಪಟ್ನ
ಚೆಂಡೆಮದ್ದಳೆ: ಶ್ರೀ ಅಡೂರು ಲಕ್ಷ್ಮೀನಾರಾಯಣ ರಾವ್, ಶ್ರೀ ಚಂದ್ರಶೇಖರ ಸರಪಾಡಿ, ಶ್ರೀ ಗಣೇಶ್ ಭಟ್ ಬೆಳಾಲು
ಸಂಗೀತ: ಶ್ರೀ ಪಿ.ಟಿ.ಪ್ರಸಾದ್ ಕುಕ್ಕಾವು
ಚಕ್ರತಾಳ: ಶ್ರೀ ಜಗದೀಶ್ ಚಾರ್ಮಾಡಿ
ಮುಮ್ಮೇಳ
•••••••••••••••
ಸ್ತ್ರೀ ವೇಷ: ಶ್ರೀ ಮುರಳೀಧರ ಕನ್ನಡಿಕಟ್ಟೆ, ಶ್ರೀ ಶರತ್ ಶೆಟ್ಟಿ ತೀರ್ಥಹಳ್ಳಿ, ಶ್ರೀ ಕುಮಾರಸ್ವಾಮಿ
ಹಾಸ್ಯ: ಶ್ರೀ ಮಹೇಶ ಮಣಿಯಾಣಿ ದೊಡ್ಡತೋಟ
ಪುರುಷ ವೇಷ: ಶ್ರೀ ಅಶೋಕ್ ಭಟ್ ಉಜಿರೆ, ಶ್ರೀ ಚಿದಂಬರ ಬಾಬು ಕೋಣಂದೂರು, ಶ್ರೀ ವಸಂತ ಗೌಡ, ಕಾಯರ್ತಡ್ಕ, ಶ್ರೀ ಶಂಭಯ್ಯ ಕಂಜರ್ಪಣೆ, ಶ್ರೀ ಚಂದ್ರಶೇಖರ ಧರ್ಮಸ್ಥಳ, ಶ್ರೀ ಹರೀಶ್ ಶೆಟ್ಟಿ ಮಣ್ಣಾಪು, ಶ್ರೀ ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ, ಶ್ರೀ ಹರಿಶ್ಚಂದ್ರ ಚಾರ್ಮಾಡಿ, ಶ್ರೀ ಮಂಜುನಾಥ ರೈ ಪೆರ್ಲ, ಶ್ರೀ ಗೌತಮ್ ಶೆಟ್ಟಿ, ಶ್ರೀ ಚರಣ್ ಗೌಡ ಕಾಣಿಯೂರು, ಶ್ರೀ ಸುನಿಲ್ ಕಣಿಯೂರು, ಶ್ರೀ ಅಶೋಕ್ ಚಾರ್ಮಾಡಿ- ಮೊದಲಾದವರು ಇದ್ದಾರೆ.
-ಡಾ. ಸತ್ಯನಾರಾಯಣ ಎ ಸುಳ್ಯಪದವು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

