ಮನೆಗೆ ಬೆಂಕಿ ತಗಲಿದ ಕುಟುಂಬಕ್ಕೆ ಸೊಸೈಟಿಯಿಂದ ಪರಿಹಾರ ಧನ

Upayuktha
0


ಬಂಟ್ವಾಳ: ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ನಾವೂರು ಶಾಖೆಗೆ ಒಳಪಟ್ಟಂತೆ ನಾವೂರು ಗ್ರಾಮದ ಕಲಮೆ ನಿವಾಸಿಯಾಗಿರುವ ದಿನೇಶ್ ಎಂಬವರ ಮನೆಗೆ ವಿದ್ಯುತ್ ಸ್ಪರ್ಶ ಉಂಟಾಗಿ ಬೆಂಕಿ ತಗಲಿ ಮನೆಗೆ ಸಹಸ್ರಾರು ರುಪಾಯಿಗಳ ನಷ್ಟ ಉಂಟಾಗಿತ್ತು. ಅವರ ಸಂಕಷ್ಟಕ್ಕೆ ಸ್ಪಂದಿಸಿ ಸ್ಥಳಕ್ಕೆ ಭೇಟಿನೀಡಿ ಬಂಟ್ವಾಳ ವ್ಯವಸಾಯ ಸೇವಾ ಸಹಕಾರ ಸಂಘವು ಕುಟುಂಬದ ನೆರವಿಗೆ ಬಂದಿದ್ದು ದುರಸ್ತಿಗಾಗಿ ರೂ.10,000 ನೀಡಿ  ಸಹಕರಿಸಿದರು. 


ಈ‌ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕರುಣೇಂದ್ರ ಪೂಜಾರಿ, ಉಪಾಧ್ಯಕ್ಷ ಆದಿರಾಜ ಕೆ. ಜೈನ್, ಸದಸ್ಯ ವಿಠಲ್ ಕೋಟ್ಯಾನ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಯಪ್ರಕಾಶ್ ಕಾಮತ್, ನಾವೂರು ಶಾಖಾಧಿಕಾರಿ ದಿನೇಶ್ ಇದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top