ಷಷ್ಠಿ ಹಬ್ಬ: ಕುಮಾರಮಂಗಲ ಬೇಳ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸಾಂಸ್ಕೃತಿಕ ವೈವಿಧ್ಯ

Upayuktha
0


ಬದಿಯಡ್ಕ: ಕಾಸರಗೋಡಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ 136 ನೇ ವೈವಿಧ್ಯಮಯ ಸಾಹಿತ್ಯ-ಗಾನ-ನೃತ್ಯ ವೈಭವ ಕಾರ್ಯಕ್ರಮ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಅಪ್ಪಣ್ಣ ಸೀತಾಂಗೋಳಿ ಸ್ವಾಗತಿಸಿದರು. ಡಾ. ವಾಣಿಶ್ರೀ ಸಾಹಿತ್ಯ ಪ್ರಸ್ತುತಿ ಮಾಡಿದರು.


ಗಡಿನಾಡ ಆಶುಕವಿ ಕೀರ್ತಿಶೇಷ ವಿದ್ವಾಂಸ ನಾರಾಯಣ ಭಟ್ ಅವರು ರಚಿಸಿದ ಪದ್ಯಗಳಿಗೆ ಸಂಸ್ಥೆಯ ಕಲಾ ನಕ್ಷತ್ರಗಳಾದ ನವ್ಯಶ್ರೀ ಕುಲಾಲ್, ಶರಣ್ಯ ಶೆಟ್ಟಿ, ಯೆಶಿಕ ಸಂದೀಪ್, ಹಾಗೂ ದಿಯಾ ಸುಕೇಶ್ ನೃತ್ಯ ಮಾಡುವ ಮೂಲಕ ಸಂಸ್ಥೆಯ 6ನೇ ದಾಖಲೆಗೆ ಪ್ರಮುಖ ಕಾರಣರಾದರು. ಇದೇ ವೇಳೆಯಲ್ಲಿ ಈ ದಾಖಲೆ ಸಾಧಕರನ್ನು ನಾರಾಯಣ ಭಟ್ ಅವರ ಸುಪುತ್ರ ಡಾ. ವೆಂಕಟ ಗಿರೀಶ್ ಅವರು ವಿಶೇಷವಾಗಿ ಗೌರವಿಸಿದರು.


ಗಾನ ವೈಭವ ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ, ವಿಶ್ವನಾಥ ಪುತ್ತಿಗೆ, ಮಧುಲತಾ ಪುತ್ತೂರು ಸುಶ್ರಾವ್ಯವಾಗಿ ಹಾಡಿ ಜನಮನ್ನಣೆ ಗಳಿಸಿದರು. ಕಲಾವಿದರಾದ ಮಧುಲತಾ ಪುತ್ತೂರು ಅವರಿಗೆ ಗಾನ ನಾಟ್ಯ ಶಾರದೆ, ನವ್ಯಶ್ರೀ ಕುಲಾಲ್ ಅವರಿಗೆ ನಾಟ್ಯ ಕಲಾ ಶಾರದೆ ಹಾಗೂ ದಿಯಾ ಸುರೇಶ್ ಅವರಿಗೆ ನಾಟ್ಯ ಕಲಾ ಶಾರದೆ ಎಂಬ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಬಾಲ ಕಲಾವಿದರ ಕಲಾ ಪ್ರಸ್ತುತಿ ನೆರೆದ ಜನರ ಕಣ್ಣಿಗೆ ಹಬ್ಬ ಹೃದಯಕ್ಕೆ ಹರ್ಷ ತಂದು ಕೊಟ್ಟಿತು. ಮೋಕ್ಷ ಹಾಗೂ ಮುಕ್ತಿ ಅವರ ಯೋಗನೃತ್ಯ ವಿಶೇಷ ಆಕರ್ಷಣೆಯಾಯಿತು. ಡಾ. ವಾಣಿಶ್ರೀ ಅವರಿಗೆ ಆಡಳಿತ ಮಂಡಳಿಯವರು ದೇವರ ಪ್ರಸಾದ ನೀಡಿ ಹಾರೈಸಿದರು.


ಸಾಧಕರ ಪ್ರಶಸ್ತಿ ಪತ್ರ ವಾಚನವನ್ನು ಕೃಷ್ಣಾ ಆಳ್ವಾ, ಸತ್ಯಶೀಲಾ, ಪ್ರಸನ್ನ ಕುಮಾರಿ ನೇರವೇರಿಸಿದರು. ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಗೌರವ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಗಣ್ಯರಾದ ಡಾ. ವೆಂಕಟ ಗಿರೀಶ್, ಶ್ರೀಧರ್ ಭಟ್, ಶಂಕರ ನಾರಾಯಣ ಭಟ್ ಅರ್ಜುನಗುಳಿ, ಅಪ್ಪಣ್ಣ, ರಾಜೇಶ್, ಮಧುಮತಿ, ನವೀಶ್, ಮೋಹಿನಿ, ಪ್ರಶಾಂತ್, ನಿವೇದಿತಾ, ವನಿತಾ, ಪೂರ್ವಾoಕ, ಅಚ್ಯುತ ಭಟ್, ಶಶಿಕಲಾ,  ಮನೋಜ್ ಕುಮಾರ್ ಉಪಸ್ಥಿತರಿದ್ದರು. ಇದೇ ಸಂಧರ್ಭ ದಲ್ಲಿ ಪುತ್ತೂರು ಸಂಗಮ್ ಬ್ರದರ್ಸ್ ನೃತ್ಯ ನಿರ್ದೇಶಕರಾದ ಪ್ರಶಾಂತ್ ಹಾಗೂ ಸಂಸ್ಥೆಯ ಮಹಿಳಾ ನೃತ್ಯ ತಂಡಕ್ಕೆ ವಿಶೇಷವಾಗಿ ಗೌರವ ಸಮರ್ಪಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
[22:14, 3/12/2025] Keshava Prasad (Php Developer New):
[22:14, 3/12/2025] Keshava Prasad (Php Developer New): Down side code copy paste..... Your issue solved check [22:15, 3/12/2025] Keshava Prasad (Php Developer New): Advt Slider:
To Top