ಹಲೋ, ಹೇಗಿದ್ದೀರಾ?
ಪ್ರತಿಯೊಬ್ಬ ಮನುಷ್ಯನಲ್ಲಿ ಬುದ್ಧಿ ಮತ್ತು ಭಾವನೆಗಳು ಸಮ್ಮಿಳಿತವಾಗಿರುತ್ತವೆ. ಕೆಲವೊಂದು ಸಾರಿ ಬುದ್ಧಿ ಮೇಲುಗೈ ಸಾಧಿಸಿ ಬಿಟ್ಟರೆ, ಮತ್ತು ಕೆಲವೊಂದು ಸಾರೆ ಮನುಷ್ಯ ಭಾವನೆಗಳ ಪ್ರವಾಹದಲ್ಲಿ ಸಿಕ್ಕು ಬಿದ್ದಿರುತ್ತಾನೆ. ಆದರೆ ಯಾರು ಇವೆರಡರ ಮೇಲೆ ನಿಯಂತ್ರಣ ಸಾಧಿಸಿರುತ್ತಾನೋ ಅವನು ಮಾತ್ರ ಜೀವನದಲ್ಲಿ ಯಶಸ್ಸನ್ನು ಸಾಧಿಸಬಲ್ಲ.
ಯಾವ ಮನುಷ್ಯ ಪ್ರತಿಯೊಂದು ವಿಷಯಕ್ಕೂ ಪ್ರಾಕ್ಟಿಕಲ್ ಆಗಿ ಯೋಚಿಸುತ್ತಾನೋ ಅವನು ಕೆಲವೊಂದು ಸಾರಿ ಇತರರ ಭಾವನೆಗಳಿಗೆ ಕಿವುಡಾಗಿ ವರ್ತಿಸುತ್ತಾನೆ. ಇದು ತೀರಾ ಸ್ವಾರ್ಥದ ಪ್ರತಿರೂಪವಾಗಿ ತನ್ನದೇ ಪ್ರಪಂಚದಲ್ಲಿ ವಿಹರಿಸುತ್ತಿರುತ್ತಾನೆ.
ಇದಕ್ಕೆ ತದ್ವಿರುದ್ಧವಾಗಿ ಯಾರು ಅತಿಯಾಗಿ ಭಾವನೆಗಳಿಗೆ ಸಿಕ್ಕು ಇನ್ನೊಬ್ಬರ ಕೈಗೊಂಬೆಯಾಗಿ ವರ್ತಿಸುತ್ತಾರೋ ಅವರು ಎಷ್ಟೋ ಸಾರಿ ಭಾವನೆಗಳನ್ನು ಹತ್ತಿಕ್ಕಿ ಇರಲು ಸಾಧ್ಯವಾಗುವುದಿಲ್ಲ. ವಿಪರೀತ ಕೋಪ, ಸಿಟ್ಟು, ಪ್ರೀತಿ, ದ್ವೇಷಗಳಿಗೆ ಬಲಿಯಾಗಿ ಮಾನಸಿಕ ಖಿನ್ನತೆಗೆ ಬಲಿಯಾಗಿ ಜೀವ ಕಳೆದು ಕೊಳ್ಳುವುದುಂಟು. ಇವರು ಎಮೋಷನಲ್ ಫೂಲ್ ಎಂಬ ಹಣೆಪಟ್ಟಿಗೆ ಒಳಗಾಗುತ್ತಾರೆ.
ಇಂದಿನ ಕಾರ್ಪೊರೇಟ್ ಯುಗದಲ್ಲಿ artufucial intelligence ಗೆ ಬದಲಾಗಿ emotional intelligence ಹೆಚ್ಚು. ಬಳಕೆ ಆಗುತ್ತಿದೆ.ಅಂದರೆ ಯಾರು ತಮ್ಮ ಭಾವನೆಗಳನ್ನು ನಿಯಂತ್ರಿಸಿಕೊಂಡು ತನ್ನ ಸುತ್ತಮುತ್ತಲಿನ ಜನರ ಭಾವನೆಗಳನ್ನು ಗೌರವಿಸಿ ಕಾರ್ಯ ಕ್ಷೇತ್ರ ಉತ್ತಮ ವಾತಾವರಣ ಆಗುವಂತೆ ಜನರನ್ನು ಆಕರ್ಷಿಸುವ ಸಿಇಒಗಳು ಎಮೋಷನಲ್ ಇಂಟೆಲಿಜೆನ್ಸ್ ದ ರಾಯಭಾರಿ ಎಂದೇ ಗುರುತಿಸಲ್ಪಡುತ್ತಾರೆ.
ನಮ್ಮ ಜೀವನದಲ್ಲಿ ಬುದ್ಧಿ ಮತ್ತು ಭಾವನೆಗಳು ತುಂಬ ಅವಶ್ಯಕ. ಕೇವಲ ಬುದ್ಧಿ ಇದ್ದು ಪ್ರತಿಯೊಂದಕ್ಕೂ ಕಾಲ್ಕುಲೇಟ್ ಮೈಂಡ್ ಇದ್ದರೆ ನಾವು ಬುದ್ಧಿವಂತ ರಾಕ್ಷಸ ಆಗುತ್ತೇವೆ. ಅದರಂತೆ ಕೇವಲ ಭಾವನೆಗಳ ಬೆನ್ನು ಹತ್ತುತ್ತಾ ಹೋದರೆ ನಮ್ಮ ಜೀವನವನ್ನು ನಾಶ ಮಾಡಿಕೊಂಡು ಇನ್ನೊಬ್ಬರ ಜೀವನದಲ್ಲೂ ಮುಳ್ಳಾಗಿ ಬೇಡವಾಗುತ್ತೇವೆ.
ಬನ್ನಿ, ಬುದ್ಧಿ ಮತ್ತು ಭಾವನೆಗಳ ಸಮಪ್ರಮಾಣದ ಬೆಸುಗೆಯಿಂದ ಉತ್ತಮ ಜೀವನ ಬಾಳೋಣ. ಏನಂತೀರಾ?
-ಗಾಯತ್ರಿ ಸುಂಕದ, ಬದಾಮಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




