ಸಾಲುಮರದ ತಿಮ್ಮಕ್ಕ ನಿಧನ; ಪೇಜಾವರ ಶ್ರೀಗಳ ಸಂತಾಪ

Chandrashekhara Kulamarva
0


ಉಡುಪಿ: ವೃಕ್ಷಮಾತೆ ಬಿರುದಿಗೆ ಪಾತ್ರರಾದ ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ನಿಧನಕ್ಕೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸಂತಾಪ ವ್ಯಕ್ತಪಡಿಸಿದ್ದಾರೆ.


ಅಕ್ಷರ ಜ್ಞಾನ ಅಲ್ಪವಿದ್ದರೂ ಅನುಭವ ಜ್ಞಾನದಿಂದ ಹಸಿರನ್ನು ಉಸಿರಿನಷ್ಟೇ ಜತನದಿಂದ ಜೀವನ ಪರ್ಯಂತ ಪೋಷಿಸಿಕೊಂಡು ಅದರಲ್ಲೇ ಸಾರ್ಥಕ್ಯ ಪಡೆದ ಅವರು ಅನುಗಾಲ ಸಮಾಜಕ್ಕೆ ಮಾದರಿಯಾದವರು. ನಾಗರಿಕ ಸಮಾಜ ಅವರ ಜೀವನ ವಿಧಾನದಿಂದ ಕಲಿಯಬೇಕಾದ್ದು ಬಹಳಷ್ಟಿದೆ. ಪ್ರಕೃತಿಯನ್ನು ಸಂರಕ್ಷಿಸುವ, ಆರಾಧಿಸುವ ವಿಧಾನವನ್ನು ಕ್ರಿಯೆಯಿಂದ ತೋರಿಸಿಕೊಟ್ಟ ಧೀಮಂತ ಮಹಿಳೆ ತಿಮ್ಮಕ್ಕನವರು. ತಿಮ್ಮಕ್ಕನವರು ಅಗಲಿದ ವಿಷಯ ತಿಳಿದು ಅತೀವ ವಿಷಾದವಾಗಿದೆ. ಇವತ್ತಿನ ಕಾಲಕ್ಕೆ ನೂರು ವತ್ಸರ ಮೀರಿ ಬದುಕಿದರು ಅನ್ನುವುದೇ ಸೋಜಿಗದ ಸಂಗತಿ ಎಂದು ಶ್ರೀಗಳು ನೆನಪಿಸಿಕೊಂಡಿದ್ದಾರೆ.


ನಮ್ಮ‌ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮ್ಮ ಪಂಚಮ ಪರ್ಯಾಯದಲ್ಲಿ ಅವರನ್ನು ಕೃಷ್ಣಮಠಕ್ಕೆ ಕರೆಸಿ ಸಂಮಾನಿಸಿದ್ದರು. ಅವರಿಗೆ ಭಯವಂತನು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಶ್ರೀಗಳು ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top