ಬರಿಯ ಪುಸ್ತಕದ ಹುಳುವೆನಿಸಿಕೊಳ್ಳುವುದಕ್ಕಿಂತ ಶ್ರೇಷ್ಠ ಪುಸ್ತಕಗಳ ಹುಳುವೆನಿಸಿಕೊಳ್ಳೋಣ...!

Upayuktha
0


ಪುಸ್ತಕಗಳು ಕನ್ನಡಿಯಂತೆ ಕೆಲವೊಮ್ಮೆ ನಮ್ಮ ಭಾವನೆಗಳನ್ನ ಅಚ್ಚುತ್ತಿದಂತೆ ಬರೆದು ಪ್ರಕಟಿಸಿರುತ್ತಾರೆ. ಅದು ಹೇಗೆ ಸಾಧ್ಯ??


ಹೌದಲ್ಲ.. ಇಂತಹ ಪುಸ್ತಕಗಳನ್ನ ಓದುವುದು ಎಂದರೆ ಏನೋ ಮುದ ಅದರಲ್ಲೂ ಕೆಲವು ಮನಶಾಸ್ತ್ರದ ಪುಸ್ತಕಗಳಂತೂ ಯಾರು ನಮ್ಮ ಬಗ್ಗೆ ಗುಪ್ತವಾಗಿ ಸ್ಟೆಡಿ ಮಾಡಿ ನಮ್ಮ ಬಗ್ಗೆ ಬರೆದಿದ್ದಾರೆ ಏನೋ ಅನಿಸಿಬಿಡುತ್ತೆ 


ನಮಗೆಲ್ಲರಿಗೂ ಗೊತ್ತು ಸಣ್ಣ ವಯಸ್ಸಿನಲ್ಲಿ ನಮ್ಮ ಹೆತ್ತವರು, ಶಿಕ್ಷಕರು ಎಲ್ಲರೂ ನೀನು ಚೆನ್ನಾಗಿ ಓದಬೇಕು ಎಂದು ಹೇಳಿ ಪುಸ್ತಕವನ್ನು ಕೈಯಲ್ಲಿ ಹಿಡಿಸಿ ಓದು ಓದು ಎಂದು ಪೀಡಿಸುತ್ತಾರೆ .. ಹಿಡಿದ ಪುಸ್ತಕ ಕೆಳಗಿಳಿಸಿದರೆ ಒದೆ ಬೀಳುವುದು ಪಕ್ಕ ..


ಆದರೆ ಅವರು ಹಿಡಿಸಿದ ಪುಸ್ತಕ ವಾದರೂ ಯಾವುದು? ಶಾಲೆಯಲ್ಲಿ ಬ್ಯಾಗಿಗೆ ತುಂಬಿ ಕಳುಹಿಸಿದ ಪಠ್ಯಪುಸ್ತಕವಷ್ಟೇ..


 ನಮ್ಮ ಹೆತ್ತವರು ಎಷ್ಟು ಮುಗ್ಧರು ಎಂದರೆ ಗಣಿತವನ್ನು ಸಹ ಓದು ಎಂದು ಹೇಳಿ ಓದಿಸುತ್ತಿದ್ದರು. ಎಲ್ಲಾ ಪುಸ್ತಕವನ್ನು ಗಿಳಿ ಪಾಠ ಹೇಳುವಂತೆ ಬಾಯಿ ತುದಿಯಲ್ಲಿ ಕಲಿತು ಓದರುತ್ತಿದ್ದೆವು , ಆಗಿನ ಮಕ್ಕಳಿಗೆ ಕಥೆ ಪುಸ್ತಕ ಎಂದರೆ ವಾಲ್ಮೀಕಿ ಬರೆದ ರಾಮಾಯಣಕ್ಕಿಂತಲೂ ಶ್ರೇಷ್ಠ.

 ಪಠ್ಯಪುಸ್ತಕವನ್ನು ಬಿಟ್ಟು ಬೇರೊಂದು ಪುಸ್ತಕ ನೋಡಿದ್ದೆ ಆದರೆ ಅದು ಮಗ್ಗಿ ಪುಸ್ತಕ ..


ಇಡೀ ವರ್ಷ ಒಂದೇ ಮಗ್ಗಿ ಪುಸ್ತಕವನ್ನು ಹಿಡಿದು ಅದರಲ್ಲಿರುವ ಎರಡು ಕಥೆಗಳನ್ನ ಓದಿ ಓದಿ ತಲೆಯಲ್ಲಿ ಪ್ರಿಂಟ್ ಆಗಿತ್ತಾದರೂ ಪ್ರತಿ ಸಲ ಓದುವಾಗಲೂ ಏನೋ ಖುಷಿ ಮರುವರ್ಷ ಹೊಸ ಮಗ್ಗಿ ಪುಸ್ತಕ ತಂದಾಗ ಮೊದಲು ಬಿಡಿಸಿ ಹೊಸ ಕಥೆ ಯಾವುದು ಇದೆ ಎಂದು ನೋಡುತ್ತಿದೆವು ಆದರೆ ಆಗ ನಾವು ಎಷ್ಟು ಮುಗ್ಧರು ಎಂದರೆ ಹೋದ ವರ್ಷ ಖಾಲಿಯಾಗದೆ ಉಳಿದಿದ್ದ ಪುಸ್ತಕವನ್ನು ಈ ವರ್ಷವೂ ಹೊಸದು ಎಂದು ಮಾರುತ್ತಾರೆ ಎಂಬ ಸಣ್ಣ ಸುಳಿವು ನಮಗೆ ಸಿಕ್ಕಿರಲಿಲ್ಲ ಆದರೆ ನನಗೆ ಗೊತ್ತಿದೆ ನನ್ನ ಮತ್ತು ನಿಮ್ಮ ಮೊದಲ ಪುಸ್ತಕ ಎಂದರೆ ಅದು ಮಗ್ಗಿ ಪುಸ್ತಕವೆಂದು ..


ಹುಟ್ಟಿದಾಗಿನಿಂದ 18 ವರ್ಷದವರೆಗೂ ಪಠ್ಯಪುಸ್ತಕವನ್ನು ಬಿಟ್ಟರೆ ಬೇರೆ ಪುಸ್ತಕವನ್ನು ನೋಡಬಾರದು ಎಂದು ಶಿಕ್ಷಕರು ಹೇಳುತ್ತಾರೆ ಅದಾದ ನಂತರ ನೀನು ಓದಿದ ಯಾವುದಾದರೂ ಒಂದು ಕಥೆ ಹೇಳೆಂದು ತರಗತಿಯಲ್ಲಿ ನೀಲಿಸುತ್ತಾರೆ. ಇದೆಂಥ ನ್ಯಾಯ! 


ಪುಸ್ತಕದ ಮೇಲೆ ಪ್ರೀತಿ ಇರಬೇಕೆಂದು ಎಲ್ಲರೂ ಹೇಳುತ್ತಾರೆ ವಿನಃ ಪಠ್ಯಪುಸ್ತಕದ ಮೇಲೆ ಪ್ರೀತಿ ಇರಬೇಕೆಂದು ಎಲ್ಲೂ ಹೇಳುವುದಿಲ್ಲ ವಿದ್ಯೆ ಜೊತೆಗೆ ಮೌಲ್ಯಗಳು ಬದುಕಲ್ಲಿ ಬರಬೇಕು ಎಂದಾದರೆ ಪಠ್ಯೇತರ ಪುಸ್ತಕಗಳನ್ನು ಸಹ ಓದಬೇಕು ಹಾಗಾದರೆ ಓದುತ್ತಲೆ ಇದ್ದರೆ ಮೌಲ್ಯಗಳು ದೊರಕುವುದೇ??, ಖಂಡಿತವಾಗಿಯೂ ಇಲ್ಲ ..ಆದರೆ ಸದಾ ಓದುತ್ತಿದ್ದರೆ ಒಂದು ಪಟ್ಟ ಸಿಗಲು ಸಾಧ್ಯ ..ಅದೇ "ಪುಸ್ತಕದ ಹುಳು" ಎಂದು.


ನಾವು ಎಷ್ಟು ಪುಸ್ತಕ ಓದಿದ್ದೇವೆ ಎಂಬುದು ಮುಖ್ಯವಲ್ಲ ಯಾವೆಲ್ಲಾ ಪುಸ್ತಕವನ್ನು ಓದಿದ್ದೇವೆ ಎಂಬುದು ಖಂಡಿತ ಮುಖ್ಯ. ಜೀವನದಲ್ಲಿ ಜೀವವಿದ್ದರೆ ಸಾಲದು ಭಾವವೂ ಇರಬೇಕು ಹೀಗೆ ಮನುಷ್ಯನನ್ನು ಭಾವಜೀವಿಯಾಗಿ ಮಾಡಲು ಪುಸ್ತಕಕ್ಕಿಂತ ದೊಡ್ಡ ಸಹಾಯ ಯಾರು ಮಾಡಲು ಸಾಧ್ಯ?


ಎಷ್ಟೋ ಕವಿಗಳು ತಮ್ಮ ಕವಿಯಾಗುವ ಯಾತ್ರೆಯನ್ನು ಪುಸ್ತಕ ಓದುವುದರಿಂದ ಆರಂಭಿಸಿದ್ದು ಯಾರೂ ಸಹ ಮೊದಲಿನ ದಿನವೇ ಬರೆಯಲು ಶುರು ಮಾಡಲಿಲ್ಲ ಬದಲಾಗಿ ಪುಸ್ತಕಗಳನ್ನ ಓದಿ ಓದಿ ರಾಶಿ ಹಾಕುತ್ತಿದ್ದರು ಹಾಗೆಂದ ಮಾತ್ರಕ್ಕೆ ಅವರೆಲ್ಲ ಪುಸ್ತಕದ ಹುಳುಗಳೇ ? ಒಂದು ವೇಳೆ ಅವರು ಪುಸ್ತಕದ ಹುಳುವೆೇ? ಆಗಿದ್ದರೆ ಅವರು ಹೇಗೆ ಸಾಧಕರಾಗುತ್ತಾರೆ? ಪ್ರಶಸ್ತಿಗಳು ಏಕೆ ಅವರನ್ನು ಅರಸುತ್ತವೆ?


ಸ್ವಾಮಿ ವಿವೇಕಾನಂದರು ಸಾವಿರಾರು ಪುಸ್ತಕಗಳನ್ನು ಓದುತ್ತಿದ್ದರು. ಜೊತೆಗೆ ಪುಟ ಸಂಖ್ಯೆ ಸಹಿತ ವಾಕ್ಯಗಳನ್ನು ತಲೆಯಲ್ಲಿ ಅಚ್ಚೊತ್ತುತ್ತಿದ್ದರು. ಯಾವ ವಾಕ್ಯ ಯಾವ ಪುಟದಲ್ಲಿದೆ ಎಂಬ ಪ್ರಶ್ನೆಗೆ ಅವರಲ್ಲಿ ನಿರರ್ಗಳವಾದ ಉತ್ತರವಿರುತ್ತಿತ್ತು. ಅಂತೆಯೇ ಅವರು ನೂರಾರು ಪುಸ್ತಕಗಳನ್ನು ಬರೆದೂ ಇದ್ದಾರೆ. ಹಾಗಾದರೆ ಅವರು ಪುಸ್ತಕದ ಹುಳುವೇ ..


ಒಂದು ವೇಳೆ ಅವರು ಪುಸ್ತಕದ ಹುಳು ಆಗಿದ್ದರೂ ತಪ್ಪೇನಿದೆ?, ರಾಷ್ಟ್ರವೇ ಮೆಚ್ಚಿದ ನಾಯಕನಾಗಲಿಲ್ಲವೇ ಕೆಲವೊಮ್ಮೆ ಶ್ರೇಷ್ಠ ಪುಸ್ತಕದ ಹುಳು ಆಗಿದ್ದರು ತಪ್ಪೇನು ಇರುವುದಿಲ್ಲ!!



ಹರ್ಷಿತ ಶಿಶಿಲ 

ಪತ್ರಿಕೋದ್ಯಮ ವಿಭಾಗ ಎಸ್ ಡಿ ಎಂ ಸಿ ಉಜಿರೆ 

 


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top