ಅಬ್ಬಕ್ಕ ಉತ್ಸವ ಸಮಿತಿಯಿಂದ ರಾಜ್ಯೋತ್ಸವ

Chandrashekhara Kulamarva
0

ವೀರರಾಣಿ ಅಬ್ಬಕ್ಕ ಹೆಸರು ಚಿರಸ್ಥಾಯಿ: ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ




ಮಂಗಳೂರು: ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ, ದಿ.ಮನೋಹರ ಪ್ರಸಾದ್ ಸಂಸ್ಕರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ಕುತ್ತಾರಿನ ವೆಜಿನೇಷನ್ ಸಭಾಂಗಣದಲ್ಲಿ ನಡೆಯಿತು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ  ಕೆ.ಜಯರಾಮ ಶೆಟ್ಟಿ ಮಾತನಾಡಿ ‘ಕಳೆದ 28 ವರ್ಷಗಳಿಂದ ಅಬ್ಬಕ್ಕ ಉತ್ಸವ ಸಮಿತಿಯು  ಅಬ್ಬಕ್ಕನ ಹೆಸರಿನಲ್ಲಿ ನಿರಂತರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತುಳುನಾಡಿನ ವೀರರಾಣಿಯ ಹೆಸರು ಚಿರಸ್ಥಾಯಿಯಾಗುವಂತೆ ಮಾಡಿದೆ ಎಂದರು.


ಕಾರ್ಯಕ್ರಮ ಉದ್ಘಾಟಿಸಿದ ಕಲಾವಿದ ಕದ್ರಿ ನವನೀತ ಶೆಟ್ಟಿ ಮಾತನಾಡಿ ‘ಪತ್ರಿಕಾರಂಗದಲ್ಲಿ ದಿ.ಮನೋಹರ್ ಪ್ರಸಾದ್ ಅವರ ಸಾಧನೆ ಅವಿಸ್ಮರಣೀಯ. ಅವರ ಪ್ರತಿಭೆ, ಶ್ರಮ ಮತ್ತು ಬರವಣಿಗೆಯ ಶೈಲಿ ಯುವ ಪತ್ರಕರ್ತರಿಗೆ ಪ್ರೇರಣೆ ಆಗಿದೆ ಎಂದರು.


ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ ಕೊಣಾಜೆ, ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ನ ಉಳ್ಳಾಲ ಘಟಕದ ಅಧ್ಯಕ್ಷ ರಾಜೇಶ್ ಉಳ್ಳಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ಹಿರಿಯ ಪತ್ರಕರ್ತರಾದ ಆನಂದ ಶೆಟ್ಟಿ, ವಿದ್ಯಾಧರ ಶೆಟ್ಟಿ, ಹಿರಿಯ ಛಾಯಾಗ್ರಾಹಕ ಅಶೋಕ್ ಉಳ್ಳಾಲ್, ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಗೀತಾ ಬಾಯಿ ಇವರುಗಳನ್ನು ಸನ್ಮಾನಿಸಲಾಯಿತು. ಅನುಪಮ ಜೆ, ಶಶಿಕಾಂತಿ ಉಳ್ಳಾಲ್, ಮಾಧವಿ ಉಳ್ಳಾಲ್ ಸಾಧಕರನ್ನು ಪರಿಚಯಿಸಿದರು.


ಸಮಿತಿಯ ಉಪಾಧ್ಯಕ್ಷರಾದ ಸದಾನಂದ ಬಂಗೇರ, ಯು.ಪಿ. ಆಲಿಯಬ್ಬ, ಪದಾಧಿಕಾರಿಗಳಾದ ಡಿ.ಎನ್. ರಾಘವ, ಸತೀಶ್ ಭಂಡಾರಿ, ಚಿದಾನಂದ, ಮಾಧವ ಉಳ್ಳಾಲ್, ರತ್ನಾವತಿ ಜೆ ಬೈಕಾಡಿ, ಶಶಿಕಲಾ ಗಟ್ಟಿ, ಮಲ್ಲಿಕಾ ಭಂಡಾರಿ, ಹೇಮಾ ಕಾಪಿಕಾಡು, ಸರೋಜ ಕುಮಾರಿ, ವಾಣಿ ಲೋಕಯ್ಯ, ಸತ್ಯವತಿ ಜೆ.ಕೆ, ಮಲ್ಲಿಕಾ ಉಳ್ಳಾಲ್‌ಬೈಲು, ಲತಾ ಶ್ರೀಧರ್, ಲತಾ ತಲಪಾಡಿ, ವಾಣಿ ಗೌಡ, ಶೋಭಾ ವಸಂತ್, ಜಯಲಕ್ಷ್ಮಿ ಬಾಲಕೃಷ್ಣ, ನಾಗರತ್ನ, ಜಯಶ್ರೀ ಕೆ. ಉಪಸ್ಥಿತರಿದ್ದರು.


ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್ ಸ್ವಾಗತಿಸಿ, ಸ್ವಪ್ನಾ ಶೆಟ್ಟಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ ಮತ್ತು ಕೆ.ಎಂ.ಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.



إرسال تعليق

0 تعليقات
إرسال تعليق (0)
To Top