ಪರಿಸರ ಹಾಗೂ ಜೀವ ವೈವಿಧ್ಯ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ: ಮೇಘಾ ಶಿವರಾಜ್

Upayuktha
0


ಉಜಿರೆ: ಭಾರತದಲ್ಲಿ ನಾಲ್ಕು ಜೈವಿಕ ವೈವಿಧ್ಯ ತಾಣಗಳಿವೆ. ಹಿಮಾಲಯ, ಪೂರ್ವ ಹಿಮಾಲಯ, ಇಂಡೋ-ಬರ್ಮಾ ಮತ್ತು ಪಶ್ಚಿಮ ಘಟ್ಟ. ಈ ತಾಣಗಳು ಹೆಚ್ಚಿನ ಸಂಖ್ಯೆಯ ವಿಶಿಷ್ಟ ಪ್ರಭೇದಗಳನ್ನು ಹೊಂದಿವೆ ಮತ್ತು ವಿಪರೀತ ಮಾನವ ಚಟುವಟಿಕೆ ಮತ್ತು ಆವಾಸಸ್ಥಾನ ನಷ್ಟದಿಂದಾಗಿ ಸಂರಕ್ಷಣೆಗೆ ಆದ್ಯತೆ ನೀಡಬೇಕಾದ ಪ್ರದೇಶಗಳಾಗಿವೆ. ಪಶ್ಚಿಮ ಘಟ್ಟ ಜೀವ ವೈವಿಧ್ಯಗಳ ಆಗರವಾಗಿದೆ. ಉಜಿರೆಯ ಯಶೋವನ ಕೂಡ ವಿಶಿಷ್ಟವಾದ ವೃಕ್ಷಾಲಯವಾಗಿದೆ. ಪ್ರತಿಯೊಬ್ಬರಿಗೂ ಪರಿಸರದ ಕಾಳಜಿ ಬೇಕು. ಪರಿಸರ ಹಾಗೂ ಜೀವ ವೈವಿಧ್ಯ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮೇಘಾ ಶಿವರಾಜ್ ಹೇಳಿದರು.


ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗ ಹಾಗೂ ಸಂಸ್ಕೃತ ಸಂಘದ ವತಿಯಿಂದ ನಡೆದ ಪರಿಸರ ಪಾಠ ಹಾಗೂ ಸಾಲುಮರದ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.


ಇದೇ ಸಂದರ್ಭದಲ್ಲಿ ಸಾಲು ಮರದ ತಿಮ್ಮಕ್ಕ ಅವರ ಪ್ರಕೃತಿ ಪ್ರೇಮ ಹಾಗೂ ಅವರ ಪರಿಸರ ಕಾಳಜಿಯ ಕೊಡುಗೆಗಳನ್ನು ಸ್ಮರಿಸಿದರು. ಇದರೊಂದಿಗೆ ಆಯುಷ್ ಸಚಿವಾಲಯ ಪ್ರಾಯೋಜಕತ್ವದ ಜನಜ್ಞಾನಾಧಾರಿತ ಔಷಧೀಯ ಸಸ್ಯಗಳ ಆಧಾರದ ಮೇಲೆ ನಿರ್ಮಿಸಿದ ಸಸ್ಯೋದ್ಯಾನ, ನವಗ್ರಹ ವನ, ರಾಶಿ ವನ, ಹಸಿರು ಮನೆ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. 


ಕಲಾ ವಿದ್ಯಾರ್ಥಿನಿ ಶ್ರೀಪೂರ್ಣಾ ಅವರು ವಿದ್ಯಾರ್ಥಿಗಳ ಪರವಾಗಿ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿ ನಮನದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. 


ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ ಐತಾಳ್ ಪ್ರಾಸ್ತಾವಿಕ ನುಡಿಗಳನ್ನಾಡಿ ಪ್ರಾಚೀನ ಸಂಸ್ಕೃತಜ್ಞರ ಪರಿಸರ ಪ್ರೇಮ ಹಾಗೂ ಪ್ರಕೃತಿ ಪ್ರೀತಿ ವಿಚಾರಗಳ ಬಗ್ಗೆ ವಿವರಿಸಿದರು. 


ಸೌಪರ್ಣಿಕಾ ರಾವ್ ಸ್ಮರಣಿಕೆ ನೀಡಿ ಗೌರವಿಸಿದರು. ಸಮೃದ್ಧಿ ಸ್ವಾಗತಿಸಿ ಪರಿಚಯಿಸಿದರು. ಪ್ರಸನ್ನಾ ಪಿ. ನಿರೂಪಿಸಿ, ಧರೇಶ ಹೆಚ್. ವಂದಿಸಿದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top