ಪ್ರತಿಭಾ ಭಾರತಿ ಮಕ್ಕಳ ಪ್ರತಿಭೆಗಳಿಗೊಂದು ಮುನ್ನುಡಿ

Upayuktha
0


ಮುಜುಂಗಾವು: ಶ್ರೀ ಭಾರತಿ ವಿದ್ಯಾಪೀಠ ಮುಜುಂಗಾವಿನಲ್ಲಿ ಪ್ರತಿಭಾ ಭಾರತಿ ಕಾರ್ಯಕ್ರಮವು ಗುರುವಾರ ನಡೆಯಿತು. ಮುಳ್ಳೇರಿಯಾ ಹವ್ಯಕ ಮಂಡಲದ ಕಾರ್ಯದರ್ಶಿ ಹಾಗೂ ಶ್ರೀ ಭಾರತೀ ವಿದ್ಯಾಪೀಠ ಬದಿಯಡ್ಕದ ಅಧ್ಯಕ್ಷರೂ ಆದ ಸಿವಿಲ್ ಎಂಜಿನಿಯರ್ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ 'ಭಾರತೀಯರಾದ ನಾವು ಭಾರತೀಯ ಸಂಸ್ಕೃತಿ ಪರಂಪರೆ, ಕಲೆಗಳನ್ನು ಪ್ರತಿಬಿಂಬಿಸುವವರಾಗ ಬೇಕು, ಇದಕ್ಕೆ ಪ್ರತಿಭಾ ಭಾರತಿ' ವೇದಿಕೆಯಾಗಲಿ ಎಂದು ಅಭಿಪ್ರಾಯಪಟ್ಟರು.


ಎಲ್ಲಾ ತರಗತಿಯ ವಿದ್ಯಾರ್ಥಿಗಳಿಂದಲೂ ಪ್ರತಿಭಾ ಪ್ರದರ್ಶನ ನಡೆಯಿತು.ಹತ್ತನೇ ತರಗತಿಯ ಕು| ಪ್ರತೀಕ್ಷಾ ರೈ ಸಭಾಧ್ಯಕ್ಷತೆ ವಹಿಸಿ ಮಾತನಾಡಿದಳು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಉದಯ ಕುಮಾರ್ ಮಾಯಿಪ್ಪಾಡಿ, ಶಾಲಾ ಆಡಳಿತ ಸಮಿತಿಯ ಕಾರ್ಯದರ್ಶಿ ಎಚ್ ಎಸ್ ಪ್ರಸಾದ್ ಹಿಳ್ಳೆಮನೆ, ಜತೆ ಕಾರ್ಯದರ್ಶಿ ಹಾಗೂ ಸಂಸ್ಕೃತ ಅಧ್ಯಾಪಕರಾದ ಬಾಲಕೃಷ್ಣ ಶರ್ಮ ಅನಂತಪುರ, ಶಾಲಾ ಮುಖ್ಯೋಪಾಧ್ಯಾಯರಾದ ಶ್ಯಾಮ ಭಟ್ ದರ್ಬೆಮಾರ್ಗ, ಸಹ ಮುಖ್ಯ ಶಿಕ್ಷಕಿ ಶ್ರೀಮತಿ ಚಿತ್ರಾ ಸರಸ್ವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

ವಿದ್ಯಾರ್ಥಿಗಳಾದ ಕು| ಪ್ರೇರಣ ಸ್ವಾಗತಿಸಿ ಕು| ಪೃಥ್ವಿ ವಂದಿಸಿದಳು. ಕು| ಅಕ್ಷರ ಹಾಗೂ ಕು|ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.



إرسال تعليق

0 تعليقات
إرسال تعليق (0)
Advt Slider:
To Top