ಹಾಸನ: ಹಾಸನಾಂಬ ಕಲಾಕ್ಷೇತ್ರದಲ್ಲಿ ಗುರುವಾರ (ನ.20) ನಡೆದ ಕಲಾ ಪ್ರತಿಭೋತ್ಸವ-2025 ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಹಾಸನದ ನೆಸ್ಟ್ ಆರ್ಟ್ ಅಕಾಡಮಿಯ ವಿದ್ಯಾರ್ಥಿನಿ ಕು. ಧನಿಕ ಅಶೋಕ್ ರವರು ಪ್ರಶಸ್ತಿ ಪಡೆದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಶಸ್ತಿ ಪಡೆದ ವಿದ್ಯಾರ್ಥಿನಿಗೆ ಅಕಾಡಮಿಯ ಸಂಸ್ಥಾಪಕ ಮುಖ್ಯಸ್ಥರು ಹಾಗೂ ಚಿತ್ರ ಕಲಾವಿದರು ಆದ ಚಂದ್ರಕಾಂತ್ ನಾಯರ್ ಮತ್ತು ಸಂಸ್ಥೆಯ ಎಲ್ಲಾ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.


