ಹೆಗ್ಗಡೆಯವರ ಜನ್ಮದಿನಕ್ಕೆ ಶುಭ ಹಾರೈಸಿದ ಪ್ರಧಾನಿ, ರಾಷ್ಟ್ರಪತಿ, ಗೃಹಸಚಿವರು

Upayuktha
0



ಉಜಿರೆ: ಪ್ರಧಾನಿ ನರೇಂದ್ರ ಮೋದಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಪತ್ರ ಮೂಲಕ ಜನ್ಮದಿನದ ಶುಭಾಶಯ ಕಳುಹಿಸಿದ್ದಾರೆ.


ಹಿಂದಿನ ಸಾಧನೆಯ ನೆಲೆಯಲ್ಲಿ ಇತರರ ಜೀವನದಲ್ಲಿ ಧನಾತ್ಮಕ ಸುಧಾರಣೆಗೆ ಪ್ರಯತ್ನಿಸಬೇಕಾಗಿದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ತ್ಯಾಗಮಯ ಸೇವೆ ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.


ಸ್ವಾತಂತ್ರೋತ್ಸವದ ಅಮೃತವರ್ಷ ಆಚರಣೆಯ ಶುಭಾವಸರದಲ್ಲಿ ನಾವು ಪ್ರಗತಿ ಹೊಂದಿದ ಸಂಪದ್ಭರಿತ ಭಾರತ ನಿರ್ಮಾಣಕ್ಕೆ ಪ್ರಯತ್ನಿಸಬೇಕು. ನಿಮ್ಮ ನಿರಂತರ ಪ್ರಯತ್ನ ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬ ನಂಬಿಕೆ ನಮಗಿದೆ.


ನಿಮಗೆ ಸುಖ-ಶಾಂತಿ, ಸಂತೋಷ ಮತ್ತು ಆರೋಗ್ಯ ಸದಾ ಇರಲೆಂದು ಹಾರೈಸುತ್ತೇನೆ ಎಂದು ಪ್ರಧಾನಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡಾ ಹೆಗ್ಗಡೆಯವರಿಗೆ ಪತ್ರ ಮೂಲಕ ಜನ್ಮದಿನದ ಶುಭಾಶಯ ಕಳುಹಿಸಿದ್ದಾರೆ.


ಗೃಹಸಚಿವ ಅಮಿತ್ ಶಾ ಕೂಡಾ ದೂರವಾಣಿ ಮೂಲಕ ಜನ್ಮದಿನದ ಶುಭಾಶಯ ಕೋರಿದ್ದಾರೆ.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
Advt Slider:
To Top