ಮಂಗಳೂರು: ಆಧುನಿಕ ಜೀವನಶೈಲಿಯಿಂದಾಗಿ ಬಹುತೇಕ ಮಂದಿ ಎದುರಿಸುತ್ತಿರುವ ವಿಟಮಿನ್ ಡಿ ಕೊರತೆಯಂಥ ಸಮಸ್ಯೆಗೆ ಪರಿಹಾರವಾಗಿ ಆಮ್ವೇ ಇಂಡಿಯಾ ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿದ ನ್ಯೂಟ್ರಿಲೈಟ್ ವಿಟಮಿನ್ ಡಿ ಪ್ಲಸ್ ಬೋರಾನ್ ಬಿಡುಗಡೆ ಮಾಡಿದೆ.
ಗರಿಷ್ಠ ವಿಟಮಿನ್ ಡಿ ಮಟ್ಟಗಳನ್ನು ಕಾಯ್ದುಕೊಳ್ಳಲು, ಮೂಳೆ ಹಾಗೂ ರೋಗನಿರೋಧಕ ಶಕ್ತಿಯನ್ನು ಬೆಂಬಲಿಸಲು ಇದು ನೆರವಾಗಲಿದೆ ಎಂದು ಆಮ್ವೇ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಜನೀಶ್ ಚೋಪ್ರಾ ಹೇಳಿದ್ದಾರೆ.
"ಇಂದಿನ ತ್ವರಿತ-ವೇಗದ ಜಗತ್ತಿನಲ್ಲಿ, ಬದಲಾಗುತ್ತಿರುವ ಜೀವನಶೈಲಿಯಿಂದ ಮತ್ತು ಸೂರ್ಯನ ಬೆಳಕಿಗೆ ಸೀಮಿತ ಒಡ್ಡಿಕೊಳ್ಳುವಿಕೆಯಿಂದ ಭಾರತದಾದ್ಯಂತ ವಿಟಮಿನ್ ಡಿ ಕೊರತೆಯಲ್ಲಿ ಗಮನಾರ್ಹ ಏರಿಕೆಯಾಗಿದೆ. ಅಧ್ಯಯನಗಳ ಪ್ರಕಾರ ಸುಮಾರು 80-90% ಭಾರತೀಯರು ಅಗತ್ಯ ವಿಟಮಿನ್ ಡಿ ಮಟ್ಟವನ್ನು ಹೊಂದಿಲ್ಲ ಎಂದು ನಿರಂತರವಾಗಿ ತಿಳಿದುಬಂದಿದೆ. ಇದನ್ನು ಬಗೆಹರಿಸಲು ನೂತನ ಉತ್ಪನ್ನ ಪರಿಹಾರವಾಗಲಿದೆ ಎಂದು ವಿವರಿಸಿದ್ದಾರೆ.
ಈ ಪವರ್-ಪ್ಯಾಕ್ಡ್ ಸೂತ್ರೀಕರಣದಿಂದ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ವಿಟಮಿನ್ ಡಿ3 ಮೂಳೆಯ ರಚನೆ ಮತ್ತು ಸಾಂದ್ರತೆಯನ್ನು ಬಲಪಡಿಸಲು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ, ಅದೇ ಬೋರಾನ್ ವಿಟಮಿನ್ ಡಿ ಬಳಕೆಯನ್ನು ವೃದ್ಧಿಸುತ್ತದೆ ಮತ್ತು ವಿಟಮಿನ್ ಕೆ2 ಬಹಳ ಅಗತ್ಯವಿರುವ ಮೂಳೆಗಳಲ್ಲಿ ಕ್ಯಾಲ್ಸಿಯಂ ಅನ್ನು ಬಹಳ ಪರಿಣಾಮಕಾರಿಯಾಗಿ ತಲುಪಿಸುತ್ತದೆ. ವಿಟಮಿನ್ ಡಿ3ಗೆ ಪೂರಕವೆಂಬಂತೆ, ನಮ್ಮ ಲಿಕೋರೈಸ್ ಹಾಗೂ ಕ್ವೆರ್ಸೆಟಿನ್ ನ ಪೇಟೆಂಟೆಡ್ ಮಿಶ್ರಣವು ಮೂಳೆ ಅರೋಗ್ಯವನ್ನು ಬೆಂಬಲಿಸುತ್ತದೆ ಮತ್ತು ನೈಸರ್ಗಿಕ ಆಂಟಿಆಕ್ಸಿಡೆಂಟ್ ಬೆಂಬಲವನ್ನು ಒದಗಿಸುತ್ತದೆ- ಒಟ್ಟಾಗಿ ಇದು ದೇಹದೊಳಗಿನಿಂದ ಮೂಳೆ ಆರೋಗ್ಯವನ್ನು ಪೆÇೀಷಿಸುವ ವಿಶಿಷ್ಟ ಮೂರು-ಹಂತದ ರಕ್ಷಣಾ ವ್ಯವಸ್ಥೆಯನ್ನು ರಚಿಸುತ್ತದೆ ಎಂದು ಪ್ರಧಾನ ಮಾರ್ಕೆಟಿಂಗ್ ಅಧಿಕಾರಿ ಅಮ್ರಿತಾ ಅಸ್ರಾಣಿ ಹೇಳಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







