ಮಾತಾ ಅಮೃತಾನಂದಮಯಿ ಮಠದ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ "ನವಗ್ರಹ ಶಾಂತಿ ಹೋಮ"

Upayuktha
0


ಮಂಗಳೂರು: ಮಾತಾ ಅಮೃತಾನಂದಮಯಿ ಮಠದ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಬುಧವಾರ (ನ.26) ನವಗ್ರಹ ಶಾಂತಿ ಹೋಮವು ಶ್ರದ್ಧಾ ಭಕ್ತಿಯಿಂದ ನೆರವೇರಿತು.


ಅಮ್ಮನ ಆಶ್ರಮದ ಹಿರಿಯ ಸನ್ಯಾಸಿ ಶಿಷ್ಯೆಯರು ಈ ವಿಶೇಷ ಹೋಮದ ಪೂಜಾ ವಿಧಾನಗಳನ್ನು ನೆರವೇರಿಸಿದರು. ಮಂಗಳೂರಿನ ಆಶ್ರಮದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ, ಹೈದರಾಬಾದ್ ಮಠದಲ್ಲಿರುವ ಹಾಗೂ ತೆಲಂಗಾಣ, ಆಂಧ್ರಪ್ರದೇಶದ ಜವಾಬ್ದಾರಿ ಹೊಂದಿರುವ ಸ್ವಾಮಿನಿ ಸುವಿದ್ಯಾಮೃತ ಪ್ರಾಣ, ಕೊಟ್ಟಾಯಂ ಆಶ್ರಮದ ನಿಷ್ಟಾಮೃತ ಪ್ರಾಣ ಹಾಗೂ ಕಾರವಾರದಿಂದ ಸ್ವಾಮಿನಿ ಅಮಲಾಮೃತ ಪ್ರಾಣ ರವರು ಜೊತೆಯಾಗಿ ಸೇರಿ ಆಶ್ರಮದ ವಿಧಿವಿಧಾನಗಳ ಅನುಸಾರ ಪೂಜೆಗೈದರು.


ಸೇವಾ ಸಮಿತಿಯ ಗೌರವಾಧ್ಯಕ್ಷರುಗಳಾದ ಡಾ.ಜೀವರಾಜ್ ಸೊರಕೆ, ಡಾ. ವೈ. ಸನತ್ ಹೆಗ್ಡೆ, ಶ್ರುತಿ ಸನತ್ ಹೆಗ್ಡೆ, ಅಧ್ಯಕ್ಷರಾದ ಸುರೇಶ್ ಅಮೀನ್ ಮತ್ತು ಪದಾಧಿಕಾರಿಗಳು, ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಉಡುಪಿ ಸೇವಾಸಮಿತಿಯ ಅಧ್ಯಕ್ಷ ಯೋಗೀಶ್ ಬೈಂದೂರು, ನವೀನ್ ಪಿವಿಟಿ, ಕುಂದಾಪುರ ಸಮಿತಿಯ ಕಲ್ಪನಾ ಭಾಸ್ಕರ್, ಮಾಲತಿ ಬಂಗೇರ ಹಾಗೂ ಕರಾವಳಿ ಕರ್ನಾಟಕದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಅಮ್ಮನ ಭಕ್ತರು ಭಾಗವಹಿಸಿದ್ದರು.


ಯುವ ಉದ್ಯಮಿ ಶರಣ್ ರಾಜ್ ಮತ್ತು ಭರತ್ ಹೊಸಬೆಟ್ಟುರವರನ್ನು ಸನ್ಮಾನಿಸಲಾಯಿತು. ಅತಿಥಿಯಾಗಿ ಆಗಮಿಸಿದ ವಿ4 ಮೀಡಿಯ ಮಾಲಕರಾದ ಲಕ್ಷ್ಮಣ್ ಕುಂದರ್ ಮತ್ತು ಖ್ಯಾತ ಚಿತ್ರನಟ ಅರ್ಜುನ್ ಕಾಪಿಕಾಡ್ ರವರಿಗೆ ಸ್ವಾಮಿನಿ ಮಂಗಳಾಮೃತ ಪ್ರಾಣ ರವರು ಗೌರವ ಪ್ರಸಾದ ನೀಡಿದರು.


ಆಗಮಿಸಿದ ಎಲ್ಲರಿಗೂ ಪ್ರಸಾದ ವಿತರಣೆ ಮಾಡಲಾಯಿತು. ಈ ಶುಭ ಸಂದರ್ಭದಲ್ಲಿ ನೂತನ ಪಾರ್ಕಿಂಗ್ ಪ್ರದೇಶದ ಉದ್ಘಾಟನೆ ನೆರವೇರಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top