ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ

Upayuktha
0


ಮೂಡುಬಿದಿರೆ: ಇಂದು ನವೆಂಬರ್ 14 ಮಕ್ಕಳ ದಿನಾಚರಣೆಯನ್ನು ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು. 

  

ಶಾಲಾ ಮುಖ್ಯಸ್ಥೆ ಶ್ರೀಮತಿ ತಿಲಕಾ ಅನಂತವೀರ್ ಜೈನ್ ಎಲ್ಲರನ್ನೂ  ಸ್ವಾಗತಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಜವಾಹರಲಾಲ್ ನೆಹರೂ ರವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ ದಿನದ ಮಹತ್ವವನ್ನು ತಿಳಿಸಲಾಯಿತು.


ಮಕ್ಕಳಿಗೆ ಅದೃಷ್ಟದ ಆಟಗಳನ್ನು ಆಡಿಸಿ ಬಹುಮಾನ ವಿತರಿಸಲಾಯಿತು. ಶಾಲೆಯ ಹಿರಿಯ ಸಂಯೋಜಕರಾದ ಗಜಾನನ ಮರಾಠೆ, ಇತರ ಸಂಯೋಜಕರಾದ ಸುಧೀರ್ ಕುಮಾರ್, ಡೀಲನ್ ಮಸ್ಕರೇನಸ್, ಗಾಯತ್ರಿ, ಮೋಹನ್, ಪ್ರಫುಲ್ಲಾ, ಶಶಿಲತಾ, ಸುಪ್ರಿಯಾ, ಎಲ್ಲಾ ಶಿಕ್ಷಕರು 

ಹಾಗೂ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದು, ಮಕ್ಕಳಿಗೆ ಶುಭಾಶಯ ಕೋರಿದರು.


ಶಿಕ್ಷಕರಿಂದ ಮನರಂಜನಾ ಕಾರ್ಯಕ್ರಮ, ಐಸ್ಕ್ರೀಂ ಹಾಗೂ ಸಿಹಿಯೂಟ, ಮಕ್ಕಳ ಸಂಭ್ರಮಕ್ಕೆ ಸಾಕ್ಷಿಯಾದುದು ದಿನದ ವಿಶೇಷವಾಗಿತ್ತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top